Australian Open 2022 – ಬಾರ್ಬೊರಾ ಕ್ರೆಜಿಸಿಕೊವಾಗೆ ಆಘಾತ ನೀಡಿ ಸೆಮೀಸ್ ಗೆ ಎಂಟ್ರಿಯಾದ ಮ್ಯಾಡಿಸನ್ ಕೈಸ್ !
ಆಸ್ಟ್ರೇಲಿಯನ್ ಓಪನ್ ಟೆನಿಸ್ ಮಹಿಳೆಯರ ಸಿಂಗಲ್ಸ್ ನಲ್ಲಿ ಅಮೆರಿಕಾದ ಮ್ಯಾಡಿಸನ್ ಕೈಸ್ ಅವರು ಸೆಮಿಫೈನಲ್ ಪ್ರವೇಶಿಸಿದ್ದಾರೆ.
26ರ ಹರೆಯದ ಮ್ಯಾಡಿಸನ್ ಕೈಸ್ ಅವರು ನಾಲ್ಕು ವರ್ಷಗಳ ಬಳಿಕ ಇದೇ ಮೊದಲ ಬಾರಿ ಗ್ರ್ಯಾಂಡ್ ಸ್ಲ್ಯಾಂ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಮೆಲ್ಬರ್ನ್ ಪಾರ್ಕ್‍ನ ರಾಡ್ ಲಾವೆರ್ ಆರೆನಾ ದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮ್ಯಾಡಿಸನ್ ಕೈಸ್ ಅವರು ನಾಲ್ಕನೇ ಶ್ರೇಯಾಂಕಿತೆ ಚೆಕ್ ಗಣರಾಜ್ಯದ ಬಾರ್ಬೊರಾ ಕ್ರೆಜ್‍ಸಿಕೊವಾ ಅವರಿಗೆ ಆಘಾತ ನೀಡಿದ್ರು.
ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿದ್ದ ಬಾರ್ಬೊರಾ ಕ್ರೆಜಿಸಿಕೊವಾ ಅವರನ್ನು 6-3, 6-3ರಿಂದ ಮ್ಯಾಡಿಸನ್ ಕೈಸ್ ಅವರು ಪರಾಭವಗೊಳಿಸಿದ್ರು.
ಮ್ಯಾಡಿಸನ್ ಕೈಸ್ ಅವರು ಏಳು ವರ್ಷಗಳ ಹಿಂದೆ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಪಂದ್ಯವನ್ನು ಆಡಿದ್ದರು. ಆಗ ಮ್ಯಾಡಿಸನ್ ಅವರಿಗೆ 19ರ ಹರೆಯ. ಆಗಿನ ಸೆಮಿಫೈನಲ್ ಪಂದ್ಯದಲ್ಲಿ ಮ್ಯಾಡಿಸನ್ ಅವರು ಚಾಂಪಿಯನ್ ಆಟಗಾರ್ತಿಯಾಗಿದ್ದ ಸೆರೆನಾ ವಿಲಿಯಮ್ಸ್ ವಿರುದ್ದ ಸೋತಿದ್ದರು. ಆಗ ಸೆರೆನಾ ವಿಲಿಯಮ್ಸ್ ಅವರು ಮ್ಯಾಡಿಸನ್ ಆಟದ ವೈಖರಿಯನ್ನು ನೋಡಿ ಭವಿಷ್ಯ ಕೂಡ ನುಡಿದಿದ್ದರು. ಭವಿಷ್ಯದ ನಂಬರ್ ವನ್ ಆಟಗಾರ್ತಿಯ ವಿರುದ್ಧ ಆಡಿ ಜಯ ಸಾಧಿಸಿರುವುದು ಹೆಮ್ಮೆಯನ್ನುಂಟು ಮಾಡುತ್ತಿದೆ ಎಂದು ಸೆರೆನಾ ವಿಲಿಯಮ್ಸ್ ಹೇಳಿದ್ದರು.
ಮ್ಯಾಡಿಸನ್ ಕೈಶ್ ಅವರು ಫೈನಲ್ ಗೆ ಎಂಟ್ರಿಯಾಗಬೇಕಿದ್ರೆ, ಆಶ್ಲೇಘ್ ಬಾರ್ಟಿ ಅಥವಾ ಜೆಸ್ಸಿಕಾ ಪೆಗುಲಾ ವಿರುದ್ಧ ಆಡಬೇಕಿದೆ.