ಎರಡನೇ ಶ್ರೇಯಾಂಕದ ಆಟಗಾರ ರಷ್ಯಾದ ಡೇನಿಯಲ್ ಮೆಡ್ವೆಡೇವ್, ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ವಿಭಾಗದ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಿದ್ದಾರೆ.
ಮೆಲ್ಬೊರ್ನ್ ನಲ್ಲಿ ಸೋಮವಾರ ನಡೆದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಡೇನಿಯಲ್ ಮೆಡ್ವೆಡೇವ್ 6-2, 7-6 (4), 6-7 (4), 7-5 ರಿಂದ ಮ್ಯಾಕ್ಸ್ಮಿ ಕ್ರೆಸ್ಸಿ ಅವರನ್ನು ನಾಲ್ಕು ಸೆಟ್‌ಗಳ ಹೋರಾಟದಲ್ಲಿ ಸೋಲಿಸಿ ಎಂಟರ ಹಂತ ಕಂಡರು.
ಮೊದಲ ಸೆಟ್‌ನಲ್ಲಿ ಆರಂಭದಿಂದಲೇ ಮೇಲುಗೈ ಸಾಧಿಸಿದ ಡೇನಿಯಲ್, ಸೆಟ್‌ನ್ನು ಸುಲಭವಾಗಿ 6-2 ರಿಂದ ಜಯಿಸಿ 1-0 ರ ಮುನ್ನಡೆಯೊಂದಿಗೆ ಎರಡನೇ ಸೆಟ್ ಆಡಲು ಸಜ್ಜಾದರು.
ಎರಡನೇ ಸೆಟ್‌ನಲ್ಲಿ ಉಭಯ ಆಟಗಾರರು ಸಮಬಲ ಹೋರಾಟ ನಡೆಸಿದ್ದರಿಂದ ಪ್ರತಿ ಅಂಕಕ್ಕೂ ತೀವ್ರ ಪೈಪೋಟಿ ನಡೆಯಿತು. ಟೈಬ್ರೇಕರ್ ವರೆಗೂ ಬೆಳೆದ ಸೆಟ್‌ನ್ನು ಅಂತಿಮವಾಗಿ 7-6 (4) ರಿಂದ ಜಯಿಸಿದ ಮೆಡ್ವೆಡೇವ್, ಮುನ್ನಡೆಯನ್ನು 2-೦ ಕ್ಕೆ ಹೆಚ್ಚಿಸಿಕೊಂಡರು.
ಮೂರನೇ ಸೆಟ್ ಕೂಡ ಟೈಬ್ರೇಕರ್ ವರೆಗೆ ಬೆಳೆತು. ಅಂತಿಮವಾಗಿ ಸೆಟ್‌ನ್ನು 7-6 (4) ರಿಂದ ಗೆದ್ದ ಮ್ಯಾಕ್ಸ್ಮಿ ಕ್ರೆಸ್ಸಿ, ನಾಲ್ಕನೇ ಸೆಟ್ ಆಡಲು ಸಜ್ಜಾದರು.
ನಾಲ್ಕನೇ ಸೆಟ್‌ನಲ್ಲಿ ಕೂಡ ಸಮಬಲ ಪೈಪೋಟಿ ಕಂಡುಬಂದಿತಾದರೂ ಅಂತಿಮವಾಗಿ ಸೆಟ್‌ನ್ನು 7-5 ರಿಂದ ಜುಸಿದ ಡೇನಿಯಲ್ ಮೆಡ್ವೆಡೇವ್‌ಮುನ್ನಡೆದರು.
ಒಂಬತ್ತನೇ ಶ್ರೇಯಾಂಕದ ಆಟಗಾರ ಕೆನಡಾದ ಫೆಲಿಕ್ಸ್ ಆಗರ್ ಅಲಿಯಾಸಿಮ್, ಹಿರಿಯ ಆಟಗಾರ ಕ್ರೋಯೆಯಾದ ಮರಿನ್ ಸಿಲಿಕ್ ಅವರನ್ನು 2-6, 7-6 (7), 6-2, 7-6 (4) ರಿಂದ ನಾಲ್ಕು ಸೆಟ್‌ಗಳ ಸೆಣಸಾಟದಲ್ಲಿ ಹಣಿದು ಕ್ವಾರ್ಟರ್ ಫೈನಲ್ ಹಂತ ಕಂಡಿದ್ದಾರೆ.