ಐಪಿಎಲ್ 15ನೇ ಆವೃತ್ತಿಯ ಪಂದ್ಯಗಳ ಆರಂಭಕ್ಕೆ ಲೆಕ್ಕಾಚಾರಗಳು ನಡೆಯುತ್ತಿವೆ. ಈ ಮಧ್ಯೆ ಟೂರ್ನಿ ಆರಂಭಕ್ಕೆ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಶಾಕ್ ಎದುರಾಗಿದೆ. ಅನುಭವಿ ಆಟಗಾರ ಮತ್ತು ಟಿ20 ಸ್ಪೆಷಲಿಸ್ಟ್ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ವೆಲ್ ಟೂರ್ನಿಯ ಕೆಲ ಪಂದ್ಯಗಳಿಗೆ ಅಲಭ್ಯರಾಗುವುದು ಖಚಿತವಾಗಿದೆ.
ಆಸ್ಟ್ರೇಲಿಯಾದ ಆಲ್ರೌಂಡರ್ ಮ್ಯಾಕ್ಸ್ ವೆಲ್ ಮದುವೆ ಮಾರ್ಚ್ 27ರಂದು ನಡೆಯಲಿದೆ. ಐಪಿಎಲ್ ಮಾರ್ಚ್ 29 ರಂದು ಆರಂಭವಾಗುವ ಸಾಧ್ಯತೆ ಇದೆ. ಭಾರತೀಯ ಮೂಲಕ ವಿನಿ ರಾಮನ್ ಜೊತೆ ಮ್ಯಾಕ್ಸ್ ವೆಲ್ ಮದುವೆ ಫಿಕ್ಸ್ ಆಗಿದೆ. ಹೀಗಾಗಿ ಆರ್ಸಿಬಿ ಆಡುವ ಮೊದಲ ಕೆಲ ಪಂದ್ಯಗಳಿಂದ ಮ್ಯಾಕ್ಸ್ವೆಲ್ ದೂರ ಉಳಿಯಲಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯ ಟೂರ್ನಿಗೆ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ವಿರಾಟ್ ಕೊಹ್ಲಿಯನ್ನು ರಿಟೈನ್ ಮಾಡಿಕೊಂಡಿತ್ತು. ಆದರೆ ಈಗ ಮ್ಯಾಕ್ಸ್ವೆಲ್ ಮಿಸ್ ಆಗುತ್ತಿರುವುದು ಆರ್ಸಿಬಿಗೆ ಸಮಸ್ಯೆ ಆಗಲಿದೆ.ಮ್ಯಾಕ್ಸ್ ವೆಲ್ ಆಸ್ಟ್ರೇಲಿಯಾದ ಪಾಕಿಸ್ತಾನ ಪ್ರವಾಸವನ್ನು ಕೂಡ ತ್ಯಜಿಸಿದ್ದಾರೆ.