Monday, September 25, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

Woman’s World Cup: ವಿಶ್ವಕಪ್​​ ಎತ್ತಲು ಇಂಗ್ಲೆಂಡ್​​, ಆಸ್ಟ್ರೇಲಿಯಾ ರೆಡಿ, ಕ್ರೈಸ್ಟ್​​​ಚರ್ಚ್​ನಲ್ಲಿ ಫೈನಲ್​ ಮ್ಯಾಚ್​​​

April 2, 2022
in Cricket, ಕ್ರಿಕೆಟ್
Woman’s World Cup: ವಿಶ್ವಕಪ್​​ ಎತ್ತಲು ಇಂಗ್ಲೆಂಡ್​​, ಆಸ್ಟ್ರೇಲಿಯಾ ರೆಡಿ, ಕ್ರೈಸ್ಟ್​​​ಚರ್ಚ್​ನಲ್ಲಿ ಫೈನಲ್​ ಮ್ಯಾಚ್​​​
Share on FacebookShare on TwitterShare on WhatsAppShare on Telegram

ಐಸಿಸಿ ಮಹಿಳಾ ವಿಶ್ವಕಪ್​​ನ ಕಟ್ಟಕಡೆಯ ಪಂದ್ಯ ಇದು. ಹಾಲಿ ಚಾಂಪಿಯನ್​​ ಇಂಗ್ಲೆಂಡ್​​ ಸತತ 2ನೇ ಬಾರಿ ಕಪ್​​ ಎತ್ತುವ ತಯಾರಿಯಲ್ಲಿದೆ. ಮಾಜಿ ಚಾಂಪಿಯನ್​​ ಆಸ್ಟ್ರೇಲಿಯಾ ಇಂಗ್ಲೆಂಡ್​​ ತಂಡವನ್ನು ಮಣಿಸಿ ವಿಶ್ವವಿಜೇತ ತಂಡವಾಗುವ ಕನಸಿನಲ್ಲಿದೆ. ಹೀಗಾಗಿ ಕ್ರೈಸ್ಟ್​​ ಚರ್ಚ್​ನಲ್ಲಿ ರೋಚಕ ಹೋರಾಟ ಖಚಿತ.

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​​ ತಂಡಗಳ ಫೈನಲ್​​ ಹಾದಿ ವಿಭಿನ್ನ. ಆಸ್ಟ್ರೇಲಿಯಾ ಸೋಲೇ ಇಲ್ಲದ ತಂಡವಾಗಿ ಫೈನಲ್​​ಗೆ ಎಂಟ್ರಿಕೊಟ್ಟಿದೆ. ಸೆಮಫೈನಲ್​​ನಲ್ಲಿ ವೆಸ್ಟ್​​ಇಂಡೀಸ್​​ ತಂಡವನ್ನು ಧೂಳೀಪಟ ಮಾಡಿ ಅಂತಿಮ ಪಂದ್ಯಕ್ಕೆ ತಯಾರಿ ಮಾಡಿಕೊಂಡಿದೆ. ಇಂಗ್ಲೆಂಡ್​​​ ಸತತ 3 ಸೋಲಿನೊಂದಿಗೆ ಟೂರ್ನಿ ಆರಂಭಿಸಿತು. ಅದಾದ ಮೇಲೆ ಸತತ 4 ಲೀಗ್​​ ಪಂದ್ಯಗಳನ್ನು ಗೆದ್ದು ಸೆಮೀಸ್​​ಗೆ ಎಂಟ್ರಿ ಕೊಟ್ಟಿತ್ತು. ಸೆಮಿಫೈನಲ್​​ನಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡಕ್ಕೆ ಮಣ್ಣುಮುಕ್ಕಿಸಿತ್ತು.

ಆಸ್ಟ್ರೇಲಿಯಾ ತಂಡದ ಕಾಂಬಿನೇಷನ್​​ ಬಗ್ಗೆ ತಲೆನೋವಿಲ್ಲ. ಅಲಿಸಾ ಹೀಲಿ, ರಾಶೆಲ್​​ ಹೇಯ್ನ್ಸ್​​ ಸ್ಪೋಟಕ ಆರಂಭ ತಂದುಕೊಡುತ್ತಿದ್ದಾರೆ. ನಾಯಕಿ ಮೆಗ್​​ ಲ್ಯಾನಿಂಗ್​ ಮತ್ತು ಬೆಥ್​​ ಮೂನಿ ಆಟವೂ ಸುಂದರವಾಗಿದೆ. ಆ್ಯಶ್ಲೆ ಗಾರ್ಡನರ್, ತಾಹಿಲ್​​ ಮೆಕ್ರಗಾಥ್​​​ ಮತ್ತು ಅನಬೆಲ್​​ ಸದರ್ಲೆಂಡ್​​ ಆಲ್​​ರೌಂಡರ್​​ ಜಾಗವನ್ನು ಭರ್ತಿಮಾಡಿದ್ದಾರೆ. ಅಲೆನಾ ಕಿಂಗ್​​ ಮತ್ತು ಜೆಸ್​ ಜೊನಾಸನ್​​ ಸ್ಪಿನ್​​ ಸ್ಪೆಷಲಿಸ್ಟ್​​ಗಳು. ಡಾರ್ಸಿ ಬ್ರೌನ್​, ಮೆಗ್ಗಾನ್​ ಶಟ್​ ವೇಗದ ಬೌಲಿಂಗ್​​ನ ಶಕ್ತಿಗಳು. ಈ ಮಧ್ಯೆ ಆಲ್​​ರೌಂಡರ್​​ ಎಲಿಸ್​​ ಪೆರ್ರಿ ಬ್ಯಾಟಿಂಗ್​​ ಮಾತ್ರ ಮಾಡಬಹುದು ಅನ್ನುವ ಫಿಟ್​​ನೆಸ್​​ ರಿಪೋರ್ಟ್​ ಇದೆ. ಆಸ್ಟ್ರೇಲಿಯಾ ಪೆರ್ರಿ ವಿಚಾರದಲ್ಲಿ ಕಾದುನೋಡುವ ತಂತ್ರಮಾಡುತ್ತಿದೆ.

ಇಂಗ್ಲೆಂಡ್​ ತಂಡದ ಬ್ಯಾಟಿಂಗ್​​ ಕೊಂಚ ವೀಕ್​​ ಆಗಿದೆ. ಡ್ಯಾನಿ ವ್ಯಾಟ್​​​ ಮತ್ತು ಅಲ್​​ರೌಂಡರ್​​ ಸೋಫಿಯಾ ಡಂಕ್ಲಿ ಬಿಟ್ಟರೆ ಉಳಿದವರಿಂದ ಸ್ಥಿರ ಪ್ರದರ್ಶನ ಬಂದಿಲ್ಲ. ಟಾಮಿ ಬಿಮೌಂಟ್​, ನಾಯಿ ಹೀದರ್​​ ನೈಟ್​​ ಮತ್ತು ಅನುಭವಿ ನ್ಯಾಟ್​​ ಸಿವಿರ್​​ ಫೈನಲ್​​ನಲ್ಲಿ ತಂಡದ ಕೈ ಹಿಡಿಯಲೇ ಬೇಕು. ವಿಕೆಟ್​ ಕೀಪರ್​ ಏಮಿ ಜೋನ್ಸ್​​ ಆಟವೂ ನಿರ್ಣಾಯಕ.  ಕೆಥರಿನ್​​ ಬ್ರಂಟ್​​, ಕೇಟ್​ ಕ್ರಾಸ್​​​ ಮತ್ತು ಅನ್ರ ಶ್ರುಬ್ಸೋಲ್​​​  ವೇಗದ ಬೌಲಿಂಗ್​​ನ ಶಕ್ತಿಗಳು. ಚಾರ್ಲಿ ಡೀನ್​​ ಮತ್ತು ಸೋಫಿಯಾ ಎಕ್ಲಸ್ಟೋನ್​​ ಸ್ಪಿನ್​​ ಶಕ್ತಿಗಳು.

ಕ್ರೈಸ್ಟ್​​ ಚರ್ಚ್​ ಪಿಚ್​​ ಆರಂಭದಲ್ಲಷ್ಟೇ ವೇಗದ ಬೌಲರ್​​ಗಳಿಗೆ ನೆರವು ನೀಡುತ್ತದೆ. ಆಮೇಲೆ ಬ್ಯಾಟಿಂಗ್​​ಗೆ ನೆರವು ನೀಡುತ್ತದೆ. ಹೀಗಾಗಿ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: AustraliaEnglandICC Womans World CupWorld Cup Final
ShareTweetSendShare
Next Post
Woman’s World Cup: ಸೆಮಿಫೈನಲ್​ನಲ್ಲಿ ಹೀಲಿ ಆರ್ಭಟ, 158 ರನ್​​ಗಳ ಜಯದ ಮೂಲಕ ಫೈನಲ್​​ಗೆ ಎಂಟ್ರಿಕೊಟ್ಟ ಆಸ್ಟ್ರೇಲಿಯಾ

Woman’s World Cup: ನಂಬರ್​​ ಗೇಮ್​​ನಲ್ಲಿ ಆಸ್ಟ್ರೇಲಿಯಾ ಬಲಿಷ್ಠ, ಕಾಂಗರೂಗಳ ಎದುರು ನಡೆದಿಲ್ಲ ಇಂಗ್ಲೆಂಡ್​​ ಆಟ

Leave a Reply Cancel reply

Your email address will not be published. Required fields are marked *

Stay Connected test

Recent News

IND v AUS: ಆಸೀಸ್‌ ವಿರುದ್ಧದ 3ನೇ ಏಕದಿನ ಪಂದ್ಯದಿಂದ ಅಕ್ಸರ್‌ ಪಟೇಲ್‌ ಔಟ್‌

IND v AUS: ಆಸೀಸ್‌ ವಿರುದ್ಧದ 3ನೇ ಏಕದಿನ ಪಂದ್ಯದಿಂದ ಅಕ್ಸರ್‌ ಪಟೇಲ್‌ ಔಟ್‌

September 25, 2023
IND v AUS: ಆಸೀಸ್‌ ಬೌಲರ್‌ಗಳ ಬೆವರಿಳಿಸಿದ ಗಿಲ್‌: ODIನಲ್ಲಿ 6ನೇ ಶತಕ ದಾಖಲು

IND v AUS: 3ನೇ ಏಕದಿನ ಪಂದ್ಯಕ್ಕೆ ಗಿಲ್‌, ಶಾರ್ದೂಲ್‌ಗೆ ವಿಶ್ರಾಂತಿ ಸಾಧ್ಯತೆ

September 25, 2023
IND v AUS: ಗಿಲ್‌, ಅಯ್ಯರ್‌ ಶತಕ: ಅಶ್ವಿನ್‌-ಜಡೇಜಾ ಕೈಚಳಕ: ಭಾರತಕ್ಕೆ ಭರ್ಜರಿ ಜಯ

IND v AUS: ಗಿಲ್‌, ಅಯ್ಯರ್‌ ಶತಕ: ಅಶ್ವಿನ್‌-ಜಡೇಜಾ ಕೈಚಳಕ: ಭಾರತಕ್ಕೆ ಭರ್ಜರಿ ಜಯ

September 24, 2023
IND v AUS: ಬ್ಯಾಟಿಂಗ್‌ ಲಯ ಕಂಡ ಶ್ರೇಯಸ್‌: ಆಸೀಸ್‌ ವಿರುದ್ಧ ಶತಕ ದಾಖಲು

IND v AUS: ಗಿಲ್‌-ಅಯ್ಯರ್‌ ಶತಕದ ಅಬ್ಬರ: ಆಸೀಸ್‌ಗೆ 400 ರನ್‌ಗಳ ಕಠಿಣ ಟಾರ್ಗೆಟ್‌

September 24, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram