Australia vs pakistan – ಪಾಕ್ ಪ್ರವಾಸವನ್ನು ಮಿಸ್ ಮಾಡಿಕೊಳ್ಳುತ್ತಾರಾ ಆಸ್ಟ್ರೇಲಿಯಾ ಆಟಗಾರರು ?
ಭದ್ರತಾ ಕಾರಣದಿಂದಾಗಿ ಮುಂಬರುವ ಪಾಕಿಸ್ತಾನ ಪ್ರವಾಸದಿಂದ ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರರು ಹೊರಗುಳಿದ್ರೆ ಅಚ್ಚರಿ ವ್ಯಕ್ತಪಡಿಸುವ ಅಗತ್ಯ ಇಲ್ಲ ಎಂದು ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್ ವುಡ್ ಹೇಳಿದ್ದಾರೆ.
ಈಗಾಗಲೇ ನಿಗದಿಯಾದಂತೆ ಆಸ್ಟ್ರೇಲಿಯಾ ತಂಡ ಮಾರ್ಚ್ ತಿಂಗಳಿನಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆ. 1998ರಲ್ಲಿ ಮಾರ್ಕ್ ಟೇಲರ್ ಸಾರಥ್ಯದ ಆಸ್ಟ್ರೇಲಿಯಾ ತಂಡ ಪಾಕ್ ನೆಲದಲ್ಲಿ ಕ್ರಿಕೆಟ್ ಆಡಿದ್ದ ನಂತರ ಎರಡು ದೇಶಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ.
ಈಗಾಗಲೆ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಆಸ್ಟ್ರೇಲಿಯಾ ಕ್ರಿಕೆಟರ್ಸ್ ಸಂಸ್ಥೆಯು ಈ ಕುರಿತಂತೆ ಸಾಕಷ್ಟು ಸಭೆಗಳನ್ನು ನಡೆಸಿ ಚರ್ಚೆ ನಡೆಸಿವೆ. ಆದ್ರೆ ಇನ್ನು ಕೂಡ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.
Australia vs pakistan – Will Australia’s cricketers give Pakistan tour a miss?
ಇಲ್ಲಿ ಆಟಗಾರರ ನಂಬಿಕೆ ಮುಖ್ಯವಾಗಿರುತ್ತದೆ. ಹಾಗೇ ಆಟಗಾರರ ಮೇಲಿನ ಕಾಳಜಿ ಕೂಡ ಮಹತ್ತರವಾದದ್ದು. ಹೀಗಾಗಿ ಪಾಕ್ ಪ್ರವಾಸದಿಂದ ಆಸ್ಟ್ರೇಲಿಯಾದ ಕೆಲವು ಅಟಗಾರರು ಹಿಂದೇಟು ಹಾಕಿದ್ರೆ ಆಶ್ಚರ್ಯವಿಲ್ಲ ಎಂದು ಜೋಶ್ ಹ್ಯಾಜಲ್ ವುಡ್ ಹೇಳಿದ್ದಾರೆ.
ಇಲ್ಲಿ ಆಟಗಾರರ ವೈಯಕ್ತಿಕ ನಿರ್ಧಾರಕ್ಕೆ ಗೌರವ ನೀಡಬೇಕಾಗುತ್ತದೆ. ಆಟಗಾರರು ತಮ್ಮ ಕುಟುಂಬದ ಜೊತೆಗೂ ಚರ್ಚೆ ಮಾಡಬೇಕಾಗುತ್ತದೆ. ಬಳಿಕವೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಇಲ್ಲಿ ಯಾರನ್ನು ಒತ್ತಾಯ ಮಾಡುವುದು ಸರಿಯಲ್ಲ ಎಂದು ಜೋಶ್ ಹ್ಯಾಜಲ್ ವುಡ್ ಅವರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಪಾಕ್ ನೆಲದಲ್ಲಿ ಆಸ್ಟ್ರೇಲಿಯಾ ತಂಡ ಮೂರು ಟೆಸ್ಟ್, ಮೂರು ಏಕದಿನ ಮತ್ತು ಏಕೈಕ ಟಿ-20 ಪಂದ್ಯಗಳನ್ನು ಆಡಲಿದೆ.
ಮೊದಲ ಟೆಸ್ಟ್ ಪಂದ್ಯ ಕರಾಚಿಯಲ್ಲಿ ಮಾರ್ಚ್ 3ರಿಂದ 7ರವರೆಗೆ ನಡೆಯಲಿದೆ. ಮಾರ್ಚ್ 12ರಿಂದ ರಾವಲ್ಪಿಂಡಿಯಲ್ಲಿ ಎರಡನೇ ಟೆಸ್ಟ್ ಪಂದ್ಯ ಹಾಗೂ ಮಾರ್ಚ್ 21ರಿಂದ ಲಾಹೋರ್ ನಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ.
ಮಾಚ 29ರಿಂದ ಏಪ್ರಿಲ್ 5ರವರೆಗೆ ಏಕದಿನ ಮತ್ತು ಟಿ-20 ಪಂದ್ಯಗಳು ನಡೆಯಲಿವೆ.
ಈ ನಡುವೆ ಜೋಶ್ ಹ್ಯಾಜಲ್ ವುಡ್ ಅವರು ಗಾಯದಿಂದ ಬಳಲುತ್ತಿದ್ದಾರೆ. ಸ್ನಾಯು ಸೆಳೆತದಿಂದಾಗಿ ಕಳೆದ ಆಶಷ್ ಟೆಸ್ಟ್ ಸರಣಿಯಿಂದಲೂ ಜೋಶ್ ಹೊರುಗಳಿದಿದ್ದರು. ಸ್ನಾಯು ಸೆಳೆತ ಜೋಶ್ ಹ್ಯಾಜಲ್ ವುಡ್ ಅವರ ಕ್ರಿಕೆಟ್ ಬದುಕಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.