Australia vs Pakistan – ಆಸ್ಟ್ರೇಲಿಯಾದ ಪಾಕ್ ಪ್ರವಾಸ ಗ್ಯಾರಂಟಿ.. ಪಾಕ್‍ಗೆ ಫುಲ್ ಖುಷಿ..!
ಕೊನೆಗೂ ಪಾಕಿಸ್ತಾನ ಕ್ರಿಕೆಟ್ ಸಂಸ್ಥೆಯು ನಿಟ್ಟುಸಿರುಬಿಟ್ಟಿದೆ. ಇಷ್ಟು ದಿನ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯದೇ ಕೊರಗುತ್ತಿದ್ದ ಪಾಕಿಸ್ತಾನ ಕ್ರಿಕೆಟ್ ಸಂಸ್ಥೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಗುಡ್ ನ್ಯೂಸ್ ಕೊಟ್ಟಿದೆ.
ಹೌದು, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪಾಕ್ ಪ್ರವಾಸ ಖಚಿತವಾಗಿದೆ. ಆಸ್ಟ್ರೇಲಿಯಾ ತಂಡ ಪಾಕ್ ಪ್ರವಾಸ ಮಾಡಲಿದೆ. ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗುವುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟಪಡಿಸಿದೆ.
ಅಂದ ಹಾಗೇ ಆಸ್ಟ್ರೇಲಿಯಾ ತಂಡ ಪಾಕ್ ನೆಲಕ್ಕೆ 23 ವರ್ಷಗಳ ಬಳಿಕ ಕಾಲಿಡುತ್ತಿದೆ. 1998ರ ಬಳಿಕ ಇದೇ ಮೊದಲ ಬಾರಿ ಆಸ್ಟ್ರೇಲಿಯಾ ತಂಡ ಪಾಕ್ ನೆಲದಲ್ಲಿ ಕ್ರಿಕೆಟ್ ಆಡುವ ಧೈರ್ಯ ಮಾಡಿದೆ. Australia vs Pakistan – Australiamen’s team to tour Pakistan after 23 years
ಪಾಕ್ ಸರ್ಕಾರ ಮತ್ತು ಅಸ್ಟ್ರೇಲಿಯಾ ಸರ್ಕಾರಕ್ಕೆ ಧನ್ಯವಾದಗಳು. ಆಸ್ಟ್ರೇಲಿಯಾ ಸರ್ಕಾರ 24 ವರ್ಷಗಳ ಪಾಕ್ ನೆಲದಲ್ಲಿ ಕ್ರಿಕೆಟ್ ಆಡಲು ಅನುಮತಿ ನೀಡಿದೆ. ಪಾಕಿಸ್ತಾನ ಕ್ರಿಕೆಟ್ ಸಂಸ್ಥೆಗೂ ಧನ್ಯವಾದ, ಹಾಗೇ ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರರ ಸಂಸ್ಥೆ ಮತ್ತು ಆಟಗಾರರು,ಕೋಚ್ ಹಾಗೂ ಸಿಬ್ಬಂದಿಗಳಿಗೂ ಅಭಿನಂದನೆಗಳು. ಇದೊಂದು ಐತಿಹಾಸಿಕ ಕ್ಷಣ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಸಿಇಒ ನಿಕ್ ಹಾಕ್ಲೇಯ್ ಅವರು ಹೇಳಿದ್ದಾರೆ.
ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ ಮೂರು ಟೆಸ್ಟ್, ಮೂರು ಏಕದಿನ ಮತ್ತು ಏಕೈಕ ಟಿ-20 ಪಂದ್ಯ ನಡೆಯಲಿದೆ.
ಮಾರ್ಚ್ 4ರಿಂದ ಮೊದಲ ಟೆಸ್ಟ್ ಪಂದ್ಯ ರಾವಲ್ಪಿಂಡಿಯಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯ ಮಾರ್ಚ್ 12ರಿಂದ ಕರಾಚಿಯಲ್ಲಿ ನಡೆದ್ರೆ, ಮೂರನೇ ಟೆಸ್ಟ್ ಪಂದ್ಯ ಮಾರ್ಚ್ 21ರಿಂದ ಲಾಹೋರ್ ನಲ್ಲಿ ನಡೆಯಲಿದೆ.
ಏಕದಿನ ಪಂದ್ಯಗಳು ರಾವಲ್ಪಿಂಡಿಯಲ್ಲಿ ಮಾರ್ಚ್ 29, 21 ಮತ್ತು ಏಪ್ರಿಲ್ 2ರಂದು ನಡೆಯಲಿದೆ. ಏಪ್ರಿಲ್ 5ರಂದು ರಾವಲ್ಪಿಂಡಿಯಲ್ಲೇ ಏಕೈಕ ಟಿ-20 ಪಂದ್ಯ ನಡೆಯಲಿದೆ.
ಕಳೆದ ವರ್ಷ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಪಾಕ್ ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕಿದ್ದವು. ಇದೀಗ ಆಸ್ಟ್ರೇಲಿಯಾ ಧೈರ್ಯ ಮಾಡಿರುವುದರಿಂದ ಇನ್ನುಳಿದ ವಿದೇಶಿ ತಂಡಗಳಿಗೂ ಆತಂಕ ಕಡಿಮೆಯಾಗಬಹುದು.