ಆಸ್ಟ್ರೇಲಿಯಾ ತಂಡ ಇಂದಿನಿಂದ (ಮಾರ್ಚ್ 29) ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಆಡಬೇಕಿದೆ. ಆದರೆ ಪಂದ್ಯಕ್ಕೂ ಮುನ್ನ ಕಾಂಗರೂ ತಂಡಕ್ಕೆ ಪೆಟ್ಟು ಬಿದ್ದಿದೆ. ಪಾಕಿಸ್ತಾನದ ವಿರುದ್ಧದ ಮೊದಲ ODIಕ್ಕೂ ಮೊದಲು, ಗಾಯದ ,ಕಾರಣದಿಂದ ಮಿಚೆಲ್ ಮಾರ್ಷ್ ಮೊದಲ ಪಂದ್ಯದಿಂದ ಹೊರಗುಳಿದಿದ್ದರು. ಆದರೆ ವಿಕೆಟ್-ಕೀಪರ್ ಬ್ಯಾಟ್ಸ್ಮನ್ ಜೋಶ್ ಇಂಗ್ಲಿಸ್ ಏಕದಿನ ಪಂದ್ಯದ ಒಂದು ದಿನದ ಮೊದಲು ಕರೋನಾ ಪಾಸಿಟಿವ್ ಎಂದು ತಿಳಿದು ಬಂದಿದೆ. ಮತ್ತು ಈಗ ಆಸ್ಟನ್ ಅಗರ್ ಅವರನ್ನೂ ಕೋವಿಡ್-19 ಸೊಂಕು ಕಾಣಿಸಿಕೊಂಡಿದೆ. ಈ ಮೂಲಕ ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಗೂ ಮುನ್ನ ಆಸ್ಟ್ರೇಲಿಯಾ ಮೂರು ಹಿನ್ನಡೆ ಆಗಿದೆ.
ಮೊದಲ ಏಕದಿನ ಪಂದ್ಯಕ್ಕೂ ಮುನ್ನ ನಡೆದ ಕೋವಿಡ್ 19 ಪರೀಕ್ಷೆಯಲ್ಲಿ ಆಸ್ಟನ್ ಅಗರ್ ಪಾಸಿಟಿವ್ ಎಂದು ಪತ್ತೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡವು ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಗೆ ಲಭ್ಯವಿರುವ 13 ಆಟಗಾರರ ಪೈಕಿ 11 ಆಟಗಾರರನ್ನು ಆಯ್ಕೆ ಮಾಡಬೇಕಾಗಿದೆ.
ಲಾಹೋರ್ನ ಗಡಾಫಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯಕ್ಕೂ ಮುನ್ನ ಅಗರ್ನ ಕರೋನಾ ಟೆಸ್ಟ್ ನಡೆಯಿತು. ಅವರಿಗೆ ಮೊದಲು, ಜೋಶ್ ಇಂಗ್ಲಿಸ್ ಅವರ ಕರೋನಾ ಕಾಣಿಸಿಕೊಂಡಿತ್ತು. ಆಸ್ಟನ್ ಜೋಶ್ ಇಂಗ್ಲಿಸ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಇವರು ಏಕದಿನ ಸರಣಿಗೆ ಲಭ್ಯ ಇರುವುದಿಲ್ಲ. ಏಕೆಂದರೆ, ಇವರು ಕ್ವಾರಂಟೈನಲ್ಲಿ ಉಳಿಯಬೇಕಾಗುತ್ತದೆ.
ಮಾರ್ಚ್ 29 ರಂದು ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯ, ಮಾರ್ಚ್ 31 ರಂದು ಎರಡನೇ ಏಕದಿನ ಪಂದ್ಯ ನಡೆಯಲಿದೆ. ಕೊನೆಯ ಏಕದಿನ ಪಂದ್ಯವು ಲಾಹೋರ್ನಲ್ಲಿ ಏಪ್ರಿಲ್ 2 ರಂದು ನಡೆಯಲಿದೆ. ಮಿಚೆಲ್ ಮಾರ್ಷ್ ಭಾನುವಾರದ ತರಬೇತಿ ವೇಳೆ ಗಾಯಕ್ಕೆ ಒಳಗಾದ ಕಾರಣ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಸದ್ಯಕ್ಕೆ ಅವರು ಮೊದಲ ಪಂದ್ಯದಿಂದ ಹೊರಗುಳಿದಿದ್ದರೂ ಸಂಪೂರ್ಣ ಸರಣಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಪ್ಯಾಟ್ ಕಮಿನ್ಸ್, ಡೇವಿಡ್ ವಾರ್ನರ್, ಜೋಶ್ ಹ್ಯಾಜಲ್ವುಡ್, ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಸ್ಟೀವ್ ಸ್ಮಿತ್ ಸೇರಿದಂತೆ ಆಸ್ಟ್ರೇಲಿಯಾದ ಸ್ಟಾರ ಆಟಗಾರರು ಲಭ್ಯವಿಲ್ಲ.