ಮೊದಲು ಬೌಲಿಂಗ್ನಲ್ಲಿ ನಿಖರ ದಾಳಿ. ಆಮೇಲೆ ಬ್ಯಾಟಿಂಗ್ನಲ್ಲಿ ಅಬ್ಬರ. ಮಹಿಳಾ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ಆಡಿದ್ದೇ ಆಟ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಂತೂ ಆಸೀಸ್ ಆಟಗಾರ್ತಿಯರು ಹಸಿದ ಹೆಬ್ಬುಲಿಯಂತೆ ಆಡಿ 7 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಹೆಚ್ಚಿನ ಪ್ರತಿರೋಧ ತೋರಲಿಲ್ಲ. ಸಿದ್ರಾ ಅಮೀನ್ (2), ನಹಿದಾ ಖಾನ್ (9), ಒಮೈಮಾ ಸೊಹೈಲ್ (12) ಮತ್ತು ನಿದಾ ದಾರ್ (5) ಬೇಗನೆ ಔಟಾದರು. ಆದರೆ ನಾಯಕಿ ಬಿಸ್ಮಾ ಮರೂಫ್ ಅಜೇಯ 78 ಮತ್ತು ಅಲಿಯಾ ರಿಯಾಝ್ (53) ಹೋರಾಟ ಮಾಡಿದರು. 50 ಓವರುಗಳಲ್ಲಿ ಪಾಕಿಸ್ತಾನ 6 ವಿಕೆಟ್ ಕಳೆದುಕೊಂಡು 190 ರನ್ಗಳಿಸಿತ್ತು.
ಆಸ್ಟ್ರೇಲಿಯಾದ ಪಾಲಿಗೆ ಈ ಗುರಿ ಸವಾಲಾಗಲಿಲ್ಲ. ಅಲಿಸಾ ಹೀಲಿ (72) ಮತ್ತು ರಾಶೆಲ್ ಹೇಯ್ನ್ಸ್ (34) ಬಿರುಸಿನ ಆರಂಭ ತಂದುಕೊಟ್ಟರು. ನಾಯಕಿ ಮೆಗ್ ಲ್ಯಾನಿಂಗ್ (35) ಗೆಲುವಿಗೆ ಸಹಾಯ ನೀಡಿದರು. ಎಲ್ಲಿಸ್ ಪೆರ್ರಿ ಅಜೇಯ 26 ಮತ್ತು ಬೆತ್ ಮೂನಿ ಅಜೇಯ 23 ರನ್ಗಳಿಸಿ ಗೆಲುವನ್ನು ಸುಲಭವಾಗಿಸಿದರು. ಆಸ್ಟ್ರೇಲಿಯಾ 34.4 ಓವರುಗಳಲ್ಲೇ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿ ಗೆಲುವು ಆಚರಿಸಿಕೊಂಡಿರು