ಕೇರ್ನ್ಸ್ನಲ್ಲಿ ಬೌಲರ್ಗಳದ್ದೇ ಆಟ. ಆಸ್ಟ್ರೇಲಿಯಾ (Australia) 195 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ನ್ಯೂಜಿಲೆಂಡ್ (Newzealand) ಕೇವಲ 82 ರನ್ಗಳಿಗೆ (Aus VS Nz) ಆಲೌಟ್ ಆಯಿತು. ಬೌಲರ್ಗಳ ಅಬ್ಬರದ ನಡುವೆ ಬ್ಯಾಟಿಂಗ್ನಲ್ಲಿ ಮಿಂಚಿದ್ದು ಸ್ಟೀವನ್ ಸ್ಮಿತ್ ಮಾತ್ರ (Steven Smith). ಅಂತಿಮವಾಗಿ ಆಸೀಸ್ 113 ರನ್ಗಳ ಭರ್ಜ ಗೆಲುವು ದಾಖಲಿಸಿ ಸರಣಿ ಗೆದ್ದು ಬೀಗಿತು.
ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳಲು ಶುರುಮಾಡಿತು. ನಾಯಕ ಆರೋನ್ ಫಿಂಚ್ (0), ಡೇವಿಡ್ ವಾರ್ನರ್ (5) ವಿಕೆಟ್ ಮ್ಯಾಟ್ ಹೆನ್ರಿ ಪಾಲಾದರೆ, ಮಾರ್ನಸ್ ಲಬುಶಂಗೆ (5) ಮತ್ತು ಮಾರ್ಕಸ್ ಸ್ಟೋಯ್ನಿಸ್ (0) ವಿಕೆಟ್ ಟ್ರೆಂಟ್ ಬೋಲ್ಟ್ ಪಾಲಾಗಿತ್ತು.
ಸ್ಟೀವನ್ ಸ್ಮಿತ್ ನಿಧಾನವಾಗಿ ಆಟ ಆರಂಭಿಸಿ ತಂಡವನ್ನು ರಕ್ಷಿಸಿದರು. ಆದ್ರೆ ಮತ್ತೊಂದು ಕಡೆಯಲ್ಲಿ ಅಲೆಕ್ಸ್ ಕ್ಯಾರಿ (12), ಗ್ಲೆನ್ ಮ್ಯಾಕ್ಸ್ವೆಲ್ (25) ಹೆಚ್ಚಿನ ನೆರವು ನೀಡಲಿಲ್ಲ. ಅಷ್ಟೇ ಅಲ್ಲ ಸೀನ್ ಅಬೋಸ್ (7) ಕೂಡ ಔಟಾದರು. ಅರ್ಧಶತಕದ ಗಡಿ ದಾಟಿದ ಸ್ಮಿತ್ 61 ರನ್ಗಳಿಸಿ ಔಟಾದರು.
ಮಿಚೆಲ್ ಸ್ಟಾರ್ಕ್ ಒಂದು ಕಡೆಯಲ್ಲಿ ಗಟ್ಟಿಯಾಗಿ ನಿಂತಿದ್ದರು. ಆದರೆ ಆಡಂ ಝಂಪಾ 16 ರನ್ಗಳಿಸಿ ಔಟಾದರು. ಆದರೆ ಕೊನೆಯ ವಿಕೆಟ್ಗೆ ಸ್ಟಾರ್ಕ್ (ಅಜೇಯ 38) ಮತ್ತು ಜೋಶ್ ಹ್ಯಾಜಲ್ವುಡ್ (ಅಜೇಯ 23) 47 ರನ್ಗಳನ್ನು ಸೇರಿಸಿದರು. ಅಂತಿಮವಾಗಿ ಆಸೀಸ್ 50 ಓವರುಗಳಲ್ಲಿ 9 ವಿಕೆಟ್ ಕಳೆದುಕೊಂಡು 195 ರನ್ಗಳಿಸಿತ್ತು. ಟ್ರೆಂಟ್ ಬೋಲ್ಟ್ 4 ಹಾಗೂ ಮ್ಯಾಟ್ ಹೆನ್ರಿ 3 ವಿಕೆಟ್ ಪಡೆದರು.
ಚೇಸಿಂಗ್ ಆರಂಭಿಸಿದ ನ್ಯೂಜಿಲೆಂಡ್ಗೆ ಶಾಕ್ ಮೇಲೆ ಶಾಕ್ ಎದುರಾಯಿತು. ಮಾರ್ಟಿನ್ ಗಪ್ಟಿಲ್ (2), ಡೆವೊನ್ ಕಾನ್ವೆ (5) ಮತ್ತು ಟಾಮ್ ಲೇಥಂ (0) ಒಂದಂಕಿಗೆ ಸಮಾಧಾನ ಪಟ್ಟುಕೊಂಡರು. ಆಡಂ ಝಂಪಾ 17 ರನ್ಗಳಿಸಿದ್ದ ಕೇನ್ ವಿಲಿಯಮ್ಸನ್, 10 ರನ್ಗಳಖಿಸಿದ್ದ ಡೆರಿಲ್ ಮಿಚೆಲ್ ವಿಕೆಟ್ ಪಡೆದು ಕಿವಿಗಳು ಮೇಲೇಳದಂತೆ ಮಾಡಿದರು. ಕೊನೆಯ ಸರದಿ ಬ್ಯಾಟ್ಸ್ಮನ್ಗಳು ಝಂಪಾ ಸ್ಪಿನ್ ಮುಂದೆ ಹೋರಾಟವನ್ನೇ ಮಾಡಲಿಲ್ಲ. ಅಂತಿಮವಾಗಿ ನ್ಯೂಜಿಲೆಂಡ್ 33 ಓವರುಗಳಲ್ಲಿ 82 ರನ್ಗಳಿಗೆ ಆಲೌಟ್ ಆಯಿತು. ಆಸೀಸ್ 113 ರನ್ಗಳಿಂದ ಪಂದ್ಯ ಗೆದ್ದು ಬೀಗಿತು. ಲೆಗ್ಸ್ಪಿನ್ನರ್ ಆಡಂ ಝಂಪಾ (Adam Zampa) 5 ವಿಕೆಟ್ ಪಡೆದು ಮಿಂಚಿದರೆ, ಸ್ಟಾರ್ಕ್ ಮತ್ತು ಅಬೋಟ್ ತಲಾ 2 ವಿಕೆಟ್ ಪಡೆದರು.