ಪ್ರವಾಸಿ ಆಸ್ಟ್ರೇಲಿಯಾ, ಬುಧವಾರ ರಾತ್ರಿ ಕೋಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡವನ್ನು ಮೂರು ವಿಕೆಟ್ನಿಂದ ಸೋಲಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಪರ ಚರಿತ್ ಅಸಲಂಕಾ 39 ಹಾಗೂ ಕುಶಾಲ್ ಮೆಂಡೀಸ್ 36 ರನ್ ಮಾಡಿದರೆ, ಉಳಿದವರು ಸುಲಭವಾಗಿ ವಿಕೆಟ್ ಚೆಲ್ಲಿದರು.
ಆಸ್ಟ್ರೇಲಿಯಾ ಪರ ಕೇನ್ ರಿಚರ್ಡ್ಸನ್ 30 ಕ್ಕೆ ನಾಲ್ಕು, ಜಾಯ್ ರಿಚರ್ಡ್ಸನ್ 3 ವಿಕೆಟ್, ಗ್ಲೆನ್ ಮ್ಯಾಕ್ಸ್ವೆಲ್ 18 ಕ್ಕೆ ಎರಡು ವಿಕೆಟ್ ಉರುಳಿಸಿದರು.
ಜಯ ಸಾಧಿಸಲು ನಿಗದಿತ 20 ಓವರ್ಗಳಲ್ಲಿ 125 ರನ್ ಸೇರಿಸುವ ಗುರಿ ಪಡೆದ ಆಸ್ಟ್ರೇಲಿಯಾ,ಇನ್ನೂ 13 ಎಸೆತಗಳು ಬಾಕಿ ಇರುವಂತೆ 17.5 ಓವರ್ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 126 ರನ್ ಸೇರಿಸಿ ಜಯ ದಾಖಲಿಸಿ ಮೂರು ಪಂದ್ಯಗಳ ಸರಣಿಯಲ್ಲಿ 2-0 ರ ಮುನ್ನಡೆ ಸಾಧಿಸಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಸರಣಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿತು.
ಆಸ್ಟ್ರೇಲಿಯಾ ಪರ ಮ್ಯಾಥ್ಯೂ ವೇಡ್ ಅಜೇಯ 26, ನಾಯಕ ಆ್ಯರೋನ್ ಫಿಂಚ್ 24, ಡೇವಿಡ್ ವಾರ್ನರ್ 21 ಹಾಗೂ ಗ್ಲೇನ್ ಮ್ಯಾಕ್ಸವೆಲ್ 19 ರನ್ ಮಾಡಿ ತಂಡವನ್ನು ಜಯದ ಗುರಿ ಮುಟ್ಟಿಸಿದರು.
ಶ್ರೀಲಂಕಾ ಪರ ವಹಿಂದು ಹಸರಂಗ 33 ಕ್ಕೆ ನಾಲ್ಕು, ನುವಾನ್ ತುಷಾರ್ 18 ಕ್ಕೆ ಒಂದು ಹಾಗೂ ದುಷ್ಮಂತ್ ಚಮೀರಾ 31 ಕ್ಕೆ ಒಂದು ವಿಕೆಟ್ ಉರುಳಿಸಿದರು.
ಮೂರನೇ ಹಾಗೂ ಅಂತಿಮ ಟಿ-20 ಪಂದ್ಯ ಜೂನ್ 11 ರಂದು ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.