Astana Open 2022 – 90ನೇ ಸಿಂಗಲ್ಸ್ ಪ್ರಶಸ್ತಿ ಗೆದ್ದ ನೊವಾಕ್ ಜಾಕೊವಿಕ್
ಸರ್ಬಿಯಾದ ನೊವಾಕ್ ಜಾಕೊವಿಕ್ ಅವರು ಆಸ್ಟಾನಾ ಓಪನ್ ಟೆನಿಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ನೊವಾಕ್ ಜಾಕೊವಿಕ್ ಅವರು 6-3, 6-4ರಿಂದ ಸ್ಟೆಫಾನೊಸ್ ಸಿಟ್ಸಿಪಸ್ ಅವರನ್ನು ಪರಾಭವಗೊಳಿಸಿದ್ರು. ಈ ಫೈನಲ್ ಪಂದ್ಯ 75 ನಿಮಿಷಗಳ ಕಾಲ ನಡೆದಿತ್ತು.
ಅಂದ ಹಾಗೇ ನೊವಾಕ್ ಜಾಕೊವಿಕ್ ಅವರು ಈ ಪ್ರಶಸ್ತಿ ಗೆಲ್ಲುವ ಮೂಲಕ ತನ್ನ ಸಿಂಗಲ್ಸ್ ಪ್ರಶಸ್ತಿಗಳ ಸಂಖ್ಯೆಯನ್ನು 90ಕ್ಕೇರಿಸಿಕೊಂಡಿದ್ದಾರೆ.
ಈಗಾಗಲೇ ನೊವಾಕ್ ಜಾಕೊವಿಕ್ ಅವರು 21 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಸ್ಪೇನ್ ನ ರಫೆಲ್ ನಡಾಲ್ ಅವರು 22 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಇದೀಗ ನೊವಾಕ್ ಜಾಕೊವಿಕ್ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳ ಬೇಟೆಯಲ್ಲಿ ಸವಾಲು ಹಾಕುತ್ತಿರುವುದು ರಫೆಲ್ ನಡಾಲ್ ಮಾತ್ರ. ಸದ್ಯ ರಫೆಲ್ ನಡಾಲ್ ಅವರು ಜಾಕೊವಿಕ್ ಅವರಿಗಿಂತ ಮುಂದಿದ್ದಾರೆ. ಆದ್ರೆ ನಡಾಲ್ ಕೂಡ ಗಾಯದಿಂದ ಪದೇ ಪದೇ ಟೂರ್ನಿಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ನೊವಾಕ್ ಜಾಕೊವಿಕ್ ಅವರಿಗೆ ವಿಶ್ವ ಟೆನಿಸ್ ಜಗತ್ತಿನಲ್ಲಿ ಗರಿಷ್ಠ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆಲ್ಲುವ ಅವಕಾಶಗಳು ಜಾಸ್ತಿ ಇವೆ.