ಏಷ್ಯಾಕಪ್ನಲ್ಲಿ(Asia Cup) ಟೀಮ್ ಇಂಡಿಯಾದ (Team India) ಆಟಕ್ಕೆ ಸಾಟಿಯಾಗಲು ಯಾವ ತಂಡದಿಂದಲೂ ಇಲ್ಲಿ ತನಕ ಸಾಧ್ಯವಾಗಿಲ್ಲ. ಆಡಿರುವ ಎರಡು ಪಂದ್ಯಗಳಲ್ಲಿ ಕಡುಬದ್ಧ ವೈರಿ ಪಾಕಿಸ್ತಾನ (Pakistan) ವಿರುದ್ಧ ರೋಚಕ ಜಯ ಸಾಧಿಸಿದರೆ, ಕ್ರಿಕೆಟ್ ಶಿಶು ಹಾಂಕಾಂಗ್ (Hongkong) ವಿರುದ್ಧ ಭರ್ಜರಿ ಜಯ ದಾಖಲಿಸಿತ್ತು. ಟೀಮ್ ಇಂಡಿಯಾದ ಪ್ರದರ್ಶನ ಚಾಂಪಿಯನ್ಶಿಪ್ ಉಳಿಸಿಕೊಳ್ಳುವ ಭರವಸೆ ನೀಡಿದೆ.
ಸತತ ಎರಡು ಗೆಲುವಿಗಳ ಬಳಿಕ ಏಷ್ಯಾಕಪ್ ಹೋರಾಟದಲ್ಲಿ ಟೀಮ್ ಇಂಡಿಯಾ ಸೂಪರ್ 4 ಪ್ರವೇಶಿಸಿದೆ (Super 4). ಲೀಗ್ ಮಾದರಿಯ ಈ ಹೋರಾಟದಲ್ಲಿ ಭಾರತ 3 ಪಂದ್ಯಗಳನ್ನು ಆಡಲಿದೆ. ಭಾರತದ ಎಲ್ಲಾ ಪಂದ್ಯಗಳು ದುಬೈ (Dubai) ಅಂತರಾಷ್ಟ್ರೀಯ ಮೈದಾನದಲ್ಲೇ ನಡೆಯಲಿದೆ.
* ಸೆಪ್ಟಂಬರ್ 04: VS ಪಾಕಿಸ್ತಾನ -ಹಾಂಕಾಂಗ್ ಪಂದ್ಯದ ವಿಜೇತರ ವಿರುದ್ಧ
* ಸೆಪ್ಟಂಬರ್ 06: VS-ಅಫ್ಘಾನಿಸ್ತಾನ
* ಸೆಪ್ಟಂಬರ್ 08: VS- ಶ್ರೀಲಂಕಾ
ಈ ಮೂರು ಪಂದ್ಯಗಳನ್ನು ಗೆದ್ದರೆ ಭಾರತ ವಿಶ್ವಾಸ ಮತ್ತಷ್ಟು ಹೆಚ್ಚಲಿದೆ. ಆದರೆ ಸೂಪರ್ 4ನಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಫೈನಲ್ಗೆ ಪ್ರವೇಶ ಪಡೆಯಲಿವೆ. ಹೀಗಾಗಿ ಸೂಪರ್ 4 ಹೋರಾಟ ಮತ್ತಷ್ಟು ಕುತೂಹಲ ಕೆರಳಿಸಿದೆ.