ಏಷ್ಯಾಕಪ್‌ನಲ್ಲಿ (Asia Cup) ಇದು ಮಾಡು ಇಲ್ಲವೆ ಮಡಿ ಪಂದ್ಯ (Do or die Match). ಸಣ್ಣ ಮಿಸ್ಟೇಕ್ ಆದ್ರೂ ಟೀಮ್ ಇಂಡಿಯಾ (Team India) ಪ್ಯಾಕ್ ಅಪ್ ಮಾಡಿಕೊಂಡು ತವರಿನ ವಿಮಾನ ಹತ್ತಬೇಕು. ಇಲ್ಲಿ ತಪ್ಪಿಗೆ ಅವಕಾಶವಿಲ್ಲ. ಇನ್‌ಫ್ಯಾಕ್ಸ್ ಇನ್ನುಳಿದ ಎರಡೂ ಪಂದ್ಯಗಳಲ್ಲೂ ಅದಕ್ಕೆ ಅವಕಾಶವಿಲ್ಲ. ದುಬೈನಲ್ಲಿ ಭಾರತಕ್ಕೆ (India) ಶ್ರೀಲಂಕಾ (Srilanka) ಮೊದಲ ರಿಯಲ್ ಟೆಸ್ಟ್ ಒಡ್ಡಲಿದೆ. ಗೆದ್ರೆ ಅಫ್ಘಾನಿಸ್ತಾನ (Afghanistan) ವಿರುದ್ಧದ ಅಂತಿಮ ಪಂದ್ಯಕ್ಕೆ ತೊಡೆತಟ್ಟಿ ಸಿದ್ಧವಾಗಬೇಕಿದೆ.
ಪಾಕ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಟಗಾರರು ಕೈಗೆ ಬೆಣ್ಣೆ ಹಚ್ಚಿಕೊಂಡು ಫೀಲ್ಡಿಂಗ್ ಮಾಡುತ್ತಿದ್ದ ಹಾಗಿತ್ತು. ನುಂಗಿ ನೀರು ಕುಡಿಯಬೇಕಾಗಿದ್ದ ಅವಕಾಶಗಳು ಕೈ ಜಾರಿ ಮಣ್ಣು ಪಾಲಾಗಿದ್ದವು. ಆದರೆ ಲಂಕಾ ವಿರುದ್ಧ ಫೀಲ್ಡಿಂಗ್ ಜೊತೆಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ಕೂಡ ಸದೃಢವಾಗಿದ್ದರೆ ಮಾತ್ರ ಗೆಲ್ಲುವ ಚಾನ್ಸ್ ಇದೆ.
ಟೀಮ್ ಇಂಡಿಯಾದಲ್ಲಿ ಬದಲಾವಣೆ ಆಗುವುದು ಖಚಿತ. ರಿಷಬ್ ಪಂತ್ ಹೊರಗಿಟ್ಟು ದಿನೇಶ್‌ಕಾರ್ತಿಕ್‌ರನ್ನು ಕರೆತರಬಹುದು. ಬೌಲಿಂಗ್‌ನಲ್ಲಿ ಚಹಲ್ ಬದಲು ಅಶ್ವಿನ್ ಅಥವಾ ಅಕ್ಸರ್‌ಗೆ ಅವಕಾಶ ಕೊಟ್ರೆ ವೆರೈಟಿ ಹೆಚ್ಚುತ್ತದೆ. ಉಳಿದಂತೆ ರೋಹಿತ್, ರಾಹುಲ್, ವಿರಾಟ್, ಸೂರ್ಯಕುಮಾರ್ ಮತ್ತು ಹಾರ್ದಿಕ್ ಪಾಂಡ್ಯಾ ಬ್ಯಾಟಿಂಗ್ ಬಲ ನೀಡಬೇಕು. ಭುವನೇಶ್ವರ್ ಕುಮಾರ್ ಅಪರೂಪಕ್ಕೊಮ್ಮೆ ಲಯ ತಪ್ಪಿದ್ದಾರೆ. ಅರ್ಶದೀಪ್ ಪಾಕ್ ವಿರುದ್ಧದ ಆಗಿದ್ದನ್ನೆಲ್ಲಾ ಮರೆತು ಆಡಬೇಕಿದೆ.
ಶ್ರೀಲಂಕಾ ತಂಡದ ಬಗ್ಗೆ ಹೇಳಬೇಕಾರೆ ಸಾಂಘೀಕ ಆಟದಲ್ಲಿ ರಿಸಲ್ಟ್ ಇದೆ ಅನ್ನುವುದನ್ನು ತೋರಿಸಿಕೊಟ್ಟಿದೆ. ಬಾಂಗ್ಲಾ ವಿರುದ್ಧ ಡು ಆರ್ ಡೈ ಮ್ಯಾಚ್‌ನಲ್ಲಿ ಗೆದ್ದ ಲಂಕನ್ನರು, ಸೂಪರ್ ೪ನಲ್ಲಿ ಅಫ್ಘಾನಿಸ್ತಾನಕ್ಕೆ ಮಣ್ಣು ತಿನ್ನಿಸಿದ್ದಾರೆ. ಕುಸಾಲ್ ಮೆಂಡೀಸ್, ಪಥುನ್ ನಿಸ್ಸಾಂಕ, ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸ ಮತ್ತು ನಾಯಕ ದಾಸುನ್ ಶನಕ ಅದ್ಭುತ ಆಟ ಆಡಿದ್ದಾರೆ. ಚಮಿಕಾ ಕರುಣಾರತ್ನೆ, ಮಧುಶಂಕ, ಹಸರಂಗ ಮತ್ತು ಇತರರು ಜೊತೆ ಸೇರಿಕೊಂಡು ಬೌಲಿಂಗ್ ಕಮಾಲ್ ಮಾಡಿದ್ದಾರೆ.
ದುಬೈ ಪಿಚ್ ಬಗ್ಗೆ ಹೆಚ್ಚು ಮಾತಿಲ್ಲ. ಬ್ಯಾಟಿಂಗ್ ಸ್ವರ್ಗ. ಇಬ್ಬನಿಯ ಪರಿಣಾಮ ೨ನೇ ಇನ್ನಿಂಗ್ಸ್‌ನಲ್ಲಿ ಕಾಣಸಿಗುತ್ತದೆ. ಹೀಗಾಗಿ ಟಾಸ್ ಗೆದ್ದವರೇ ಬಾಸ್ ಅಂದರೆ ತಪ್ಪು ಕಾಣುವುದಿಲ್ಲ.