![Asia Cup :ಲಂಕಾ ವನಿತೆಯರಿಗೆ ರೋಚಕ ಜಯ 2 srilanka 2](http://sportskarnataka.com/wp-content/uploads/2022/10/srilanka-2-300x157.jpg)
ಎಡಗೈ ಸ್ಪಿನ್ನರ್ ಇನೊಕಾ ರಾಣವೀರಾ ಸ್ಪಿನ್ ಮ್ಯಾಜಿಕ್ ನೆರೆವಿನಿಂದ ಶ್ರೀಲಂಕಾ ಮಹಿಳಾ ತಂಡ ಬಾಂಗ್ಲಾ ವಿರುದ್ಧ ಡಕ್ ವರ್ತ್ ನಿಯಮದಂತೆ 3 ರನ್ ಗಳ ರೋಚಕ ಗೆಲುವು ದಾಖಲಿಸಿದೆ.
ಸಿಲೆಟ್ ನಲ್ಲಿ ನಡೆದ ಚುಟುಕು ಕದನ ಮಳೆಯ ಕಣ್ಣಾಮುಚ್ಚಾಲೆಯಲ್ಲಿ ನಡೆಯಿತು. ಮಳೆ ಅಡ್ಡಿಪಡಿಸಿದ್ದರಿಂದ ಓವರ್ಗಳನ್ನು ನಿಗದಿತ ಮಾಡಲಾಗಿತ್ತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ 18.1 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿತು. ಬಾಂಗ್ಲಾದೇಶ ತಂಡ 7 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 37 ರನ್ ಗಳಿಸಿತು.
ಮಳೆ ಬಂದಿದ್ದರಿಂದ ಬಾಂಗ್ಲಾ ತಂಡಕ್ಕೆ 7 ಓವರ್ ಗಳಲ್ಲಿ 41 ರನ್ ಗುರಿ ನೀಡಲಾಗಿತ್ತು. ರಾಣಾವೀರಾ ದಾಳಿಗೆ ಬಾಂಗ್ಲಾ ಉಡಿಸ್ ಅಯ್ತು. ಫಾರಗಾನಾ
ಹಕ್ 6, ನಾಯಕಿ ಸುಲ್ತಾನಾ 12, ರುಮಾನಾ ಅಹ್ಮದ್ 8, ರಿತು ಮೋನು ಅಜೇಯ 3 ರನ್ ಗಳಿಸಿದರು. ಬಾಂಗ್ಲಾ ನಿಗದಿತ 7 ಓವರ್ ಗಳಲ್ಲಿ 7 ವಿಕೆಟ್
ನಷ್ಟಕ್ಕೆ 37 ರನ್ ಕಲೆ ಹಾಕಿ 3 ರನ್ ಗಳ ವಿರೋಚಿತ ಸೋಲು ಅನುಭವಿಸಿತು.
ಇನೊಕಾ ರಾಣವೀರಾ 7ಕ್ಕೆ 4 ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.