ಏಷ್ಯಾಕಪ್ನಲ್ಲಿ (Asia Cup) ಹಾಟ್ ಫೆವರಟ್ಗಳ ಪೈಕಿ ಒಂದಾದ ಪಾಕಿಸ್ತಾನಕ್ಕೆ (Pakistan) ಮಾಡು ಇಲ್ಲವೆ ಮಡಿ ಪಂದ್ಯ ಎದುರಗಿದೆ. ಸವಾಲು ಕ್ರಿಕೆಟ್ ಶಿಶು ಹಾಂಕಾಂಗ್ನದ್ದಾದರೂ (Hongkong) ಸುಲಭ ಎಂದು ಅಂದುಕೊಳ್ಳುವ ಹಾಗಿಲ್ಲ. ಯಾಕಂದರೆ ಎಚ್ಚರ ತಪ್ಪಿದರೆ ಮನೆ ಹಾದಿ ತುಳಿಯಬೇಕಾದ ಅವಮಾನದ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಶಾರ್ಜಾದಲ್ಲಿ ಕಠಿಣ ಹೋರಾಟ ನಡೆಯಲಿದೆ.
ಎ ಬಣದಲ್ಲಿ ಭಾರತ (India) ಎರಡಕ್ಕೆ ಎರಡು ಪಂದ್ಯಗಳನ್ನು ಗೆದ್ದು ಸೂಪರ್ 4 ಪ್ರವೇಶಿಸಿದೆ. ಹಾಂಕಾಂಗ್ ಮತ್ತು ಪಾಕ್ (Pak VS Hkg) ನಡುವಿನ ವಿಜೇತರು ಮತ್ತೊಂದು ತಂಡವಾಗಿ ಅಂತಿಮ 4ರ ಲೀಗ್ ಪ್ರವೇಶಿಸಲಿವೆ. ಈ ಎರಡೂ ತಂಡಗಳು ಭಾರತದ ವಿರುದ್ಧ ಸೋತಿರುವ ಕಾರಣ ರನ್ರೇಟ್ ಲೆಕ್ಕಕ್ಕೆ ಬರುತ್ತಿಲ್ಲ. ಪಾಕಿಸ್ತಾನ ಶಕ್ತಿಯುತವಾಗಿ ಮತ್ತು ಬಲಿಷ್ಠವಾಗಿ ಕಂಡರೂ ಹಾಂಕಾಂಗ್ ಒಡ್ಡುವ ಸವಾಲಿಗೆ ಉತ್ತರಿಸಬೇಕಿದೆ.
ಪಾಕ್ ತಂಡಕ್ಕೆ ನಾಯಕ ಬಾಬರ್ ಅಜಂ, ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಜ್ವಾನ್ ಮತ್ತು ಫಖರ್ ಝಮಾನ್ ಬ್ಯಾಟಿಂಗ್ ಬಲವಿದೆ. ಇಫ್ತಿಕರ್ ಅಹ್ಮದ್ ಮತ್ತು ಕುಶ್ದಿಲ್ ಶಾ ಕೂಡ ಬ್ಯಾಟಿಂಗ್ ಮಾಡಬಲ್ಲರು. ಆಸೀಫ್ ಅಲಿಗೆ ಬಿಗ್ ಹಿಟ್ಟಿಂಗ್ ಎಬಿಲಿಟಿ ಇದೆ. ಶದಾಬ್ ಖಾನ್ ಆಲ್ರೌಂಡರ್. ಹ್ಯಾರಿಸ್ ರೌಫ್, ಶಹನಸ್ ದಹಾನಿ ಮತ್ತು ಮೊಹಮ್ಮದ್ ನವಾಜ್ ಪ್ಯೂರ್ ಬೌಲರ್ಸ್.
ಹಾಂಕಾಂಗ್ ಬಗ್ಗೆ ಹೆಚ್ಚು ಹೇಳುವಂತದ್ದು ಏನೂ ಇಲ್ಲ. ಆದರೆ ಭಾರತ ವಿರುದ್ಧ ಎಹ್ಸಾನ್ ಖಾನ್ ಮತ್ತು ಆಯೂಷ್ ಶುಕ್ಲಾ ನೀಡಿದ ಬೌಲಿಂಗ್ ಪ್ರದರ್ಶನದ ಬಗ್ಗೆ ಮೆಚ್ಚುಗೆ ಸಿಕ್ಕಿದೆ. ಬ್ಯಾಟಿಂಗ್ನಲ್ಲಿ ಬಾಬರ್ ಹಯಾತ್ ಮತ್ತು ಮೆಕೆಂಜಿ ಮೇಲೆ ನೀರಿಕ್ಷೆ ಇದೆ. ಹಾಂಕಾಂಗ್ ಏನೇ ಮಾಡಿದರೂ ಅದು ಇತಿಹಾಸವೇ.
ಶಾರ್ಜಾ ಪಿಚ್ ನಿಧಾನಗತಿಯಿಂದ ಕೂಡಿದ್ದು ಬೌಲರ್ಗಳಿಗೆ ನೆರವು ನೀಡುತ್ತಿದೆ. ಹೀಗಾಗಿ ಬ್ಯಾಟ್ಸ್ಮನ್ಗಳು ಹೆಚ್ಚು ಕಷ್ಟ ಪಡಬೇಕಾದ ಅನಿವಾರ್ಯತೆ ಎದುರಾಗಿದೆ.