ಟೀಮ್ ಇಂಡಿಯಾ (Team India) ಮತ್ತು ಪಾಕಿಸ್ತಾನ (Pakistan) ತಂಡಗಳ ನಡುವಿನ ಪಂದ್ಯದ ನೆನಪು ಇನ್ನೂ ಹಸಿರಾಗಿಯೇ ಇದೆ. 10 ತಿಂಗಳ ಹಿಂದೆ ಟಿ20 ವಿಶ್ವಕಪ್‌ನಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡ ಖುಷಿ ಇದೆ. ಆದರೆ ಅದಾಗಲೇ ಭಾರತ ಮತ್ತು ಪಾಕಿಸ್ತಾನ ನಡುವಿನ ಮತ್ತೊಂದು ಕದನಕ್ಕೆ ವೇದಿಕೆ ಆಲ್‌ಮೋಸ್ಟ್ ಫಿಕ್ಸ್ ಆಗಿದೆ. ಏಷ್ಯಾಕಪ್ (Asia Cup) ಸೂಪರ್ 4 (Super 4) ಹೋರಾಟದಲ್ಲಿ ಭಾರತ-ಪಾಕಿಸ್ತಾನ ನಡುವೆ ಪಂದ್ಯ ನಡೆಯುವ ಸಾಧ್ಯತೆ ಇದೆ.
* ಆಗಸ್ಟ್ 31ಕ್ಕೆ ಹಾಂಕಾಂಗ್- ಟೀಮ್ ಇಂಡಿಯಾ ಮ್ಯಾಚ್
ಎ ಗ್ರೂಪ್‌ನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ಹಾಂಕಾಂಗ್ ತಂಡವನ್ನು ಎದುರಿಸಲಿದೆ. ಹಾಂಕಾಂಗ್ ಎದುರು ಭಾರತ ಸುಲಭ ಗೆಲುವಿನ ನಿರೀಕ್ಷೆಯಲ್ಲಿದೆ. ಹೀಗಾಗಿ ಭಾರತ ಎ ಬಣದ ಅಗ್ರಸ್ಥಾನಿಯಾಗಿ ಸೂಪರ್ 4 ಹಂತಕ್ಕೇರಲಿದೆ.
ಸೆಪ್ಟಂಬರ್ 2ರಂದು ಪಾಕ್‌ಗೆ ಹಾಂಕಾಂಗ್ ಸವಾಲು
ಪಾಕ್ ತನ್ನ ಕಟ್ಟ ಕಡೆಯ ಲೀಗ್ ಮ್ಯಾಚ್‌ನಲ್ಲಿ ಹಾಂಕಾಂಗ್ ತಂಡವನ್ನು ಎದುರಿಸಲಿದೆ. ಪಾಕ್ ಕೂಡ ಬಲಿಷ್ಠ ತಂಡವೇ. ಹೀಗಾಗಿ ಗೆಲುವಿನ ಲೆಕ್ಕಾಚಾರವಿದೆ.
* ಲೆಕ್ಕಾಚಾರ ಉಲ್ಟಾ ಆಗುವುದು ಹೇಗೆ?
ಇದೇ ವೇಳೆ ಕ್ರಿಕೆಟ್‌ನಲ್ಲಿ ಎಲ್ಲವೂ ಅಂದುಕೊಂಡ ಹಾಗೇ ನಡೆಯುತ್ತದೆ ಎಂದು ಹೇಳುವ ಹಾಗಿಲ್ಲ. ಹೀಗಾಗಿ ಪಾಕ್ ತನ್ನ ಕಟ್ಟ ಕಡೆಯ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ ಸೋತರೂ ಟೂರ್ನಿಯಿಂದ ಹೊರ ಬೀಳಲಿದೆ. ಹಾಂಕಾಂಗ್ ಭಾರತವನ್ನು ದೊಡ್ಡ ಅಂತರದಲ್ಲಿ ಸೋಲಿಸಿ, ಪಾಕ್ ವಿರುದ್ಧ ಸೋತರೂ ಸೂಪರ್ ೪ಗೇರುವ ಅವಕಾಶವಿದೆ.ಸ
* ಶನಿವಾರ ಮ್ಯಾಚ್?
ಹಾಕಾಂಗ್ ಅಚ್ಚರಿ ಪ್ರದರ್ಶನ ನೀಡದೇ ಇದ್ದರೆ ಶನಿವಾರ (Saturday) ಮತ್ತೆ ಇಂಡೋ-ಪಾಕ್ (Indo-Pak) ಮುಖಾಮುಖಿ ನಡೆಯಲಿದೆ. ಸೂಪರ್ 4 ಹಂತದಲ್ಲಿ ಈ ಎರಡು ತಂಡಗಳ ನಡುವಿನ ಕದನ ಗ್ಯಾರೆಂಟಿ. ಹೀಗಾಗಿ ಶನಿವಾರದ ಫೈಟ್ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. ಆದರೆ ಹಾಂಕಾಂಗ್ ಶಾಕ್ ನೀಡಿದರೆ ಎಲ್ಲಾ ಲೆಕ್ಕಾಚಾರ ಉಲ್ಟಾ ಆಗಲಿದೆ.