ಮೊದಲ ಪಂದ್ಯದಲ್ಲಿ ಶ್ರೀಲಂಕಾ (Srilanka) ತಂಡವನ್ನು ಹೇಳ ಹೆಸರಿಲ್ಲದೆ ಸೋಲಿಸಿದ್ದ ಅಫ್ಘಾನಿಸ್ತಾನ (Afghanistan) ತಂಡ ಏಷ್ಯಾಕಪ್‌ನ (Asia Cup) ಡಾರ್ಕ್ ಹಾರ್ಸ್. ಎದುರಾಳಿ ಒಂಚೂರು ಲಯ ತಪ್ಪಿದರೂ ಮುಗಿಸಿ ಬಿಡುವ ತಾಕತ್ತು ಅಫ್ಘಾನ್ ತಂಡಕ್ಕಿದೆ. ಬಿ ಬಣದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ (League Match) ಅಫ್ಘಾನ್ ಬಾಂಗ್ಲಾದೇಶದ (Bangladesh) ಸವಾಲು ಎದುರಿಸಲಿದೆ. ಬಾಂಗ್ಲಾದೇಶಕ್ಕೆ ಇದು ಮೊದಲ ಪಂದ್ಯವಾಗಿದೆ. ಮಂಗಳವಾರದ ಈ ಪಂದ್ಯಸದ ಮೇಲೆ ಸಾಕಷ್ಟು ಕುತೂಹಲವಿದೆ.
ಶಾರ್ಜಾ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುವ ಈ ಪಂದ್ಯ ಬಿ ಬಣದ ಎಲ್ಲಾ ಲೆಕ್ಕಾಚಾರವನ್ನು ಬದಲಿಸುತ್ತದೆ. ಮೊದಲ ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದ ಅಫ್ಘಾನಿಸ್ತಾನ ಶ್ರೀಲಂಕಾ ತಂಡವನ್ನು ಟೂರ್ನಿಯಲ್ಲಿ ಉಳಿಸಬೇಕಾದರೆ ಬಾಂಗ್ಲಾದೇಶದ ವಿರುದ್ಧ ಗೆಲ್ಲಬೇಕು. ಬಾಂಗ್ಲಾ ಗೆದ್ದರೂ, ಅಫ್ಘಾನ್ ಹೀನಾಯವಾಗಿ ಸೋತರೆ ಮಾತ್ರ ಲಂಕಾ ಟೂರ್ನಿಯಲ್ಲಿ ಉಳಿಯಲಿದೆ. ಇನ್ನೊಂದೆಡೆ ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆದ್ದರೆ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವಿನ ಪಂದ್ಯ ನಾಕೌಟ್ ಮ್ಯಾಚ್ ಆಗಿರಲಿದೆ.
ಅಫ್ಘಾನಿಸ್ತಾನ ತಂಡ ಸಾಂಘೀಕ ಶಕ್ತಿ ಆ ತಂಡದ ಬೋನಸ್. ಬೌಲಿಂಗ್‌ನಲ್ಲಿ ಫರೂಕಿ, ನವೀನ್ ಉಲ್ ಹಕ್ ಮತ್ತು ಒಮರಝೈ ಪ್ರಮುಖ ವೇಗಿಗಳು.. ಮುಜೀಬ್ ಉರ್ ರೆಹಮಾನ್, ರಶೀದ್ ಖಾನ್ ಮತ್ತು ನಾಯಕ ಮೊಹಮ್ಮದ್ ನಬಿ ಟ್ರಂಪ್ ಕಾರ್ಡ್ ಸ್ಪಿನ್ನರ್‌ಗಳು. ಬ್ಯಾಟಿಂಗ್‌ನಲ್ಲಿ ಹಝರತುಲ್ಲಾ ಝಝೈ, ರಹಮತುಲ್ಲಾ ಗುರ್ಬಾಜ್, ಇಬ್ರಾಹಿಂ ಝರ್ದಾನ್, ನಜಿಬುಲ್ಲಾ ಜರ್ದನ್ ಪ್ರಮುಖ ಆಟಗಾರರು. ಕರೀಮ್ ಜನ್ನತ್, ಮೊಹಮ್ಮದ್ ನವಿ ಮತ್ತು ರಶೀದ್ ಖಾನ್ ಕೂಡ ಆಟ ಆಡಬಲ್ಲರು.
ಬಾಂಗ್ಲಾದೇಶ ಕೂಡ ಬಲಿಷ್ಠ ತಂಡ. ನಾಯಕ ಶಕೀಬ್ ಅಲ್ ಹಸನ್, ಅನಮುಲ್ ಹಕ್, ಮುಷ್ಫಿಕರ್ ರಹಿಂ, ಅಫೀಫ್ ಹುಸೈನ್, ಮೊಹಮ್ಮದುಲ್ಲಾ, ಮೊಸಡೆಕ್ ಹುಸೈನ್, ಶಬ್ಬೀರ್ ಅಹ್ಮದ್ ಮತ್ತು ಟಸ್ಕಿನ್ ಅಹ್ಮದ್‌ರಂತಹ ಆಟಗಾರರು ಇದ್ದಾರೆ. ಹೀಗಾಗಿ ಬಾಂಗ್ಲಾದೇಶ ಮತ್ತು ಅಫ್ಘಾನ್ ನಡುವಿನ ಕದನ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ.