ಮಹಿಳಾ (Womens Cricket) ಏಷ್ಯಾಕಪ್ (Asia Cup) ಕ್ರಿಕೆಟ್ ಟೂರ್ನಿಯಲ್ಲಿ ಭಾರತ (India) 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಶಿಸ್ತುಬದ್ಧ ಬೌಲಿಂಗ್ ಮೂಲಕ ಮಿಂಚಿದ ಭಾರತೀಯ ವನಿತೆಯರು (India Womens) ಥೈಲಂಡ್ (Thailand) ತಂಡವನ್ನು ಕೇವಲ 37 ರನ್‌ಗೆ ಆಲೌಟ್ ಮಾಡಿದ್ದರು. ಬಳಿಕ ಶಫಾಲಿ ವಿಕೆಟ್ ಕಳೆದುಕೊಂಡು ಪವರ್ ಪ್ಲೇ ಮುಗಿಯುವಷ್ಟರಲ್ಲಿ ಗೆಲುವಿನ ಸಂಭ್ರಮ ಆಚರಿಸಿಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಥೈಲಂಡ್ ನಥಕ್ಕನ್ ಚಾಂಥಮ್ (6), ಚಾಯ್‌ವಯ್ (3), ಚನಿಡಾ (0), ಟಿಪ್ಪೋಚ್ (2) ಮಯಾ(1) ಮತ್ತು ಕಾನೋ (7) ವಿಕೆಟ್ ಬೆನ್ನು ಬೆನ್ನಿಗೆ ಕಳೆದುಕೊಂಡಿತು. ವಿಕೆಟ್ ಕೀಪರ್ ಬ್ಯಾಟರ್ ನನ್ನಪತ್ (12) ಮಾತ್ರ ಎರಡಂಕಿ ಮುಟ್ಟಿದರು.
ಥೈಲಂಡ್ 15.1 ಓವರುಗಳಲ್ಲಿ 37 ರನ್‌ಗೆ ಆಲೌಟ್ ಆಯಿತು. ಸ್ನೇಹ್‌ರಾಣಾ (Sneh Rana) 9 ರನ್‌ಗೆ ವಿಕೆಟ್ ಹಾಗೂ ರಾಜೇಶ್ವರಿ ಗಾಯಕ್ವಾಡ್ ಮತ್ತು ದೀಪ್ತಿ ಶರ್ಮಾ ತಲಾ 2ವಿಕೆಟ್ ಕಬಳಿಸಿದರು.
ಚೇಸಿಂಗ್ ಮಾಡಿದ ಭಾರತ ಶಫಾಲಿ ವರ್ಮಾ (8) ವಿಕೆಟ್ ಕಳೆದುಕೊಂಡಿತು. ಆದರೆ ಮೇಘನಾ (ಅಜೇಯ 20) ಮತ್ತು ಪೂಜಾ ವಸ್ತ್ರಾರ್ಕರ್ (ಅಜೇಯ 12) ತಂಡಕ್ಕೆ ಗೆಲುವು ತಂದುಕೊಟ್ಟರು. ಭಾರತ 6 ಓವರುಗಳಲ್ಲಿ ಗುರಿ ತಲುಪಿತು.