ಟೀಮ್ ಇಂಡಿಯಾದಲ್ಲಿ (Team India) ಈಗ ಯುವ ಆಟಗಾರರದ್ದೇ ಆಟ. ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾ (Rohit Sharma) ಅಬ್ಬರ ನಿಧಾನವಾಗಿ ಕಡಿಮೆ ಆಗುತ್ತಿದ್ದಂತೆ ಹೊಸ ಹೊಸ ಆಟಗಾರರು ಮಿಂಚು ಹರಿಸುತ್ತಿದ್ದಾರೆ. ಭಾರತೀಯ ಕ್ರಿಕೆಟ್ನ (India Cricket) ಭವಿಷ್ಯವನ್ನು ಬರೆಯುತ್ತಿದ್ದಾರೆ. ಏಕದಿನ (ODI), ಟಿ20 (T20) ಪಂದ್ಯಗಳಲ್ಲಂತೂ ಟೀಮ್ ಇಂಡಿಯಾ ಆಟಗಾರರದ್ದೇ ಮಾತು.
ಸೂರ್ಯಕುಮಾರ್ ಯಾದವ್ (Surya Kumar Yadav) ಟಿ20 ಕ್ರಿಕೆಟ್ನಲ್ಲಿ ತನ್ನ ಅಬ್ಬರದ ಮೂಲಕ ಮಿಂಚಿದರೆ, ಶ್ರೇಯಸ್ ಅಯ್ಯರ್ (Shreyas Iyer) ಏಕದಿನ ಪಂದ್ಯಗಳ ಕಿಂಗ್ ಆಗಿ ಮೆರೆಯುತ್ತಿದ್ದಾರೆ.
ವಿಶ್ವದ ಯಾವುದೇ ಪಿಚ್ ಇರಲಿ ಸೂರ್ಯಕುಮಾರ್ ಮತ್ತು ಶ್ರೇಯಸ್ ವೈಟ್ ಬಾಲ್ ಕ್ರಿಕೆಟ್ನಲ್ಲಿ ಮಿಂಚಿನ ಆಟ ಆಡುತ್ತಿದ್ದಾರೆ. ಮೈದಾನ ದೊಡ್ಡದಿರಲಿ, ಚಿಕ್ಕದಿರಲಿ ಇವರಿಗೆ ಪಂದ್ಯ ಗೆಲ್ಲಿಸಿಕೊಡುವುದು ಖಯಾಲಿಯಾಗಿದೆ. ಎದುರಾಳಿ ಬೌಲರ್ಗಳನ್ನು ಚಿಂದಿ ಉಡಾಯಿಸಿ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸೂರ್ಯ ಮತ್ತು ಶ್ರೇಯಸ್ ಟೀಮ್ ಇಂಡಿಯಾದ ಆಪತ್ಭಾಂಧವರು ಅನ್ನುವುದರಲ್ಲಿ ಎರಡು ಮಾತಿಲ್ಲ.
ಶ್ರೇಯಸ್ ಈ ವರ್ಷ 10 ODIಗಳ 9 ಇನ್ನಿಂಗ್ಸ್ಗಳಿಂದ 485 ರನ್ಗಳಿಸಿದ್ದಾರೆ. 57.25 ಸರಾಸರಿ ಹೊಂದಿರುವ ಶ್ರೇಯಸ್ 1 ಶತಕ ಮತ್ತು 4 ಅರ್ಧಶತಕ ಬಾರಿಸಿದ್ದಾರೆ. ಸೂರ್ಯ 23 T20I ಗಳಿಂದ 801 ರನ್ ಸಿಡಿಸಿದ್ದಾರೆ. ಸೂರ್ಯ 5 ಅರ್ಧಶತಕ ಮತ್ತು 1 ಶತಕ ಬಾರಿಸಿದ್ದಾರೆ. ಇಬ್ಬರು ಯುವ ಆಟಗಾರರ ಸ್ಥಿರ ಪ್ರದರ್ಶನ ನೀಡುತ್ತಿರುವುದು ಅದ್ಭುತಗಳನ್ನು ಸೃಷ್ಟಿಸುವ ಹಾಗೆ ಮಾಡಿದೆ.