ಏಷ್ಯಾಕಪ್ (Asia Cup) ಆಟ ಮುಗಿದಿದೆ. ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ (Dubai International Stadium) ಶ್ರೀಲಂಕಾ (Srilanka) ಇತಿಹಾಸ ಸೃಷ್ಟಿಸಿದೆ. ಬಲಿಷ್ಠ ಪಾಕಿಸ್ತಾನ (Pakistan) ತಂಡವನ್ನು ಹೇಳ ಹೆಸರಿಲ್ಲದಂತೆ ಫೈನಲ್ನಲ್ಲಿ ಹೊಸಕಿ ಹಾಕಿದೆ. ಟಿ20 ವಿಶ್ವಕಪ್ (T20 Worldcup) ಗೆಲ್ಲುವ ಹಾಟ್ ಫೆವರೀಟ್ ತಂಡಗಳಾದ ಭಾರತ (India) ಮತ್ತು ಪಾಕಿಸ್ತಾನವನ್ನೇ ಸೋಲಿಸಿರುವ ಶ್ರೀಲಂಕಾ ಈಗ ಏಷ್ಯನ್ ಕಿಂಗ್ . ಅಂದಹಾಗೇ 15 ಆವೃತ್ತಿಗಳನ್ನು ಕಂಡಿರುವ ಏಷ್ಯಾಕಪ್ನಲ್ಲಿ ಹಲವು ಇತಿಹಾಸಗಳಿವೆ (Asia Cup History).
★ 6ನೇ ಏಷ್ಯಾಕಪ್ ಗೆದ್ದ ಶ್ರೀಲಂಕಾ
ದುಬೈನಲ್ಲಿ ಪಾಕ್ ತಂಡವನ್ನು ಸೋಲಿಸಿ ಚಾಂಪಿಯನ್ ಆದ ಶ್ರೀಲಂಕಾ ತಂಡ 6ನೇ ಬಾರಿ ಏಷ್ಯನ್ ಕಿಂಗ್ ಪಟ್ಟಕ್ಕೇರಿದೆ. ಭಾರತವನ್ನು ಹೊರತು ಪಡಿಸಿದರೆ ಲಂಕಾ ಅತಿಹೆಚ್ಚು ಏಷ್ಯಾಕಪ್ ಪ್ರಶಸ್ತಿಯನ್ನು ತನ್ನ ಮುಡಿಗೆ ಏರಿಸಿಕೊಂಡಿದೆ. 1986, 1997, 2004, 2008, 2014, 2022 ರಲ್ಲಿ ಶ್ರೀಲಂಕಾ ಏಷ್ಯಾನ್ ಕಪ್ಗೆದ್ದ ತಂಡವಾಗಿದೆ.
★ 15 ಏಷ್ಯಾ ಕಪ್ ಸ್ಪರ್ಧೆ
ಇಲ್ಲಿ ತನಕ 15 ಬಾರಿ ಏಷ್ಯಾಕಪ್ ನಡೆದಿದೆ. ದುಬೈನಲ್ಲಿ ಮೊದಲ ಬಾರಿಗೆ ಏಷ್ಯಾಕಪ್ ನಡೆದಿತ್ತು. ದುಬೈ ಮತ್ತು ಶಾರ್ಜಾ ಮೈದಾನದಲ್ಲಿ ಪಂದ್ಯಗಳು ನಡೆದರೂ ಇದು ಶ್ರೀಲಂಕಾದ ಆತಿಥ್ಯವಾಗಿತ್ತು. 1984ರಲ್ಲಿ ಮೊದಲ ಬಾರಿಗೆ ಏಷ್ಯಾ ಕಪ್ ಹೋರಾಟ ನಡೆದಿತ್ತು.
★ 7 ಬಾರಿ ಕಪ್ ಗೆದ್ದಿರುವ ಭಾರತ
1984, 1988, 1990–91, 1995, 2010, 2016 & 2018 ಚಾಂಪಿಯನ್ ಆಗಿತ್ತು. ಈ ಬಾರಿ ಕಪ್ ಗೆದ್ದಿದ್ದರೆ ಹ್ಯಾಟ್ರಿಕ್ ಪ್ರಶಸ್ತಿ ಜಯಿಸಿ ಕೀರ್ತಿ ಭಾರತಕ್ಕೆ ಒಲಿಯುತ್ತಿತ್ತು. ಆದರೆ ಭಾರತ ಸೂಪರ್ 4 ಹಂತದಲ್ಲೇ ನಿರ್ಗಮಿಸಿ ನಿರಾಸೆ ಅನುಭವಿಸಿತ್ತು.
★ 2 ಬಾರಿ ಮಾತ್ರ ಕಪ್ ಗೆದ್ದ ಪಾಕ್
ಏಷ್ಯಾದ ಬಲಿಷ್ಠ ಕ್ರಿಕೆಟ್ ರಾಷ್ಟ್ರಗಳ ಪೈಕಿ ಪಾಕಿಸ್ತಾನ ಒಂದಾಗಿದ್ದರೂ ಈ ತಂಡ ಕಪ್ ಗೆದ್ದಿರುವುದು ಕೇವಲ 2 ಬಾರಿ ಮಾತ್ರ. 2000 ಮತ್ತು 2012ರಲ್ಲಿ ಪಾಕ್ ಪ್ರಶಸ್ತಿ ಗೆದ್ದಿತ್ತು.
★ 12 ಫೈನಲ್ ಆಡಿರುವ ಲಂಕಾ
15 ಏಷ್ಯಾಕಪ್ ಟೂರ್ನಿಗಳ ಪೈಕಿ ಶ್ರೀಲಂಕಾ 12 ಫೈನಲ್ಗಳನ್ನು ಆಡಿದೆ. 6 ಬಾರಿ ಕಪ್ ಗೆದ್ದು ಬೀಗಿದರೆ, 6 ಬಾರಿ ರನ್ ಅಪ್ ಆಗಿತ್ತು. ಭಾರತ 10 ಬಾರಿ ಫೈನಲ್ ತಲುಪಿ 7 ಬಾರಿ ಕಪ್ ಗೆದ್ದಿತ್ತು. 3 ಬಾರಿ ರನ್ನರ್ ಅಪ್ ಆಗಿತ್ತು.