ಟೆಸ್ಟ್ನ ಮೊದಲ ದಿನ ಮಳೆಯಿಂದಾಗಿ ಆಟ ನಡೆಯಲಿಲ್ಲ. ರಾಣಿ ಎಲಿಜಬೆತ್ (Queen Elizabeth) ನಿಧನದಿಂದ 2ನೇ ದಿನದ ಆಟ ನಡೆಯಲಿಲ್ಲ. ಮೂರನೇ ದಿನ ಆಟ ಆರಂಭವಾದ ತಕ್ಷಣ ಇಂಗ್ಲೆಂಡ್ (England) ಮೇಲುಗೈ ಸಾಧಿಸಿತ್ತು. ಅಷ್ಟೇ ಅಲ್ಲ ಪ್ರವಾಸಿ ತಂಡವನ್ನು ಓವಲ್ ಟೆಸ್ಟ್ನಲ್ಲಿ (Oval Test) ಬೇಗನೆ ಕಟ್ಟಿಹಾಕಿತು.
ನಾಲ್ಕನೇ ದಿನದ ಆಟದ ಹೊತ್ತಿಗೆ ಟೆಸ್ಟ್ ರಿಸಲ್ಟ್ ಫಿಕ್ಸ್ ಆಗಿತ್ತು. ಆದರೆ ಯಾರ ಪರವಾಗಿ ಬರುತ್ತದೆ ಅನ್ನುವುದಷ್ಟೇ ನಿರ್ಣಯವಾಗಬೇಕಿತ್ತು. ಆದರೆ ಇಂಗ್ಲೆಂಡ್ ಬೌಲರ್ಗಳು (England Bowlers)ಹರಿಣಗಳ ವಿರುದ್ಧ ಮುಗಿಬಿದ್ದರು. ದಕ್ಷಿಣ ಆಫ್ರಿಕಾದ (South Africa) ಮೇಲೆ ಹಿಡಿತ ಸಾಧಿಸಿತು.
130 ರನ್ಗಳ ಅಂತಿಮ ಇನ್ನಿಂಗ್ಸ್ ಚೇಸಿಂಗ್ಗೆ ಇಂಗ್ಲೆಂಡ್ ಮುಂದಾಯಿತು. ಆದರೆ ಜಾಕ್ ಕ್ರೌಲಿ ಮತ್ತು ಅಲೆಕ್ಸ್ ಲೀಸ್ ಮೊದಲ ವಿಕೆಟ್ಗೆ 111 ರನ್ಗಳ ಜೊತೆಯಾಟ ತಂದುಕೊಟ್ಟು ದಕ್ಷಿಣ ಆಫ್ರಿಕಾದ ಆಸೆಯನ್ನು ಚಿವುಟಿ ಹಾಕಿದರು (Eng VS SA). ಅಷ್ಟೇ ಅಲ್ಲ ಇಂಗ್ಲೆಂಡ್ ಟೆಸ್ಟ್ ಗೆಲ್ಲುವಂತೆ ಮಾಡಿದರು. ತವರಿನಲ್ಲಿ ಇಂಗ್ಲೆಂಡ್ ಟೆಸ್ಟ್ ಸರಣಿ ಗೆದುದ ಬೀಗಿತು.
ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ : 118
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: 158
ದಕ್ಷಿಣ ಆಫ್ರಿಕಾ 2ನೇ ಇನ್ನಿಂಗ್ಸ್: 169
ಇಂಗ್ಲೆಂಡ್ 2ನೇ ಇನಿಂಗ್ಸ್: