Asia cup 2022- ಆರು ತಂಡಗಳು…13 ಪಂದ್ಯಗಳು.. 13 ದಿನಗಳ ರೋಚಕ ಹೋರಾಟದ ವೇಳಾಪಟ್ಟಿ

ಆಗಸ್ಟ್ 27ರಿಂದ ಸೆಪ್ಟಂಬರ್ 11ರವರೆಗೆ ಏಷ್ಯಾಕಪ್ ಟೂರ್ನಿಯ ಹವಾ ಜೋರಾಗಿಯೇ ನಡೆಯಲಿದೆ. ನಾಲ್ಕು ವರ್ಷಗಳ ಬಳಿಕ ನಡೆಯುತ್ತಿರುವ ಏಷ್ಯಾಕಪ್ ಟೂರ್ನಿ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಮುಖ್ಯವಾಗಿ ಏಷ್ಯಾ ತಂಡಗಳ ನಡುವಿನ ಹೋರಾಟ ಒಂದು ಕಡೆಯಾದ್ರೆ, ಇಂಡೋ ಪಾಕ್ ಫೈಟ್ ಟೂರ್ನಿಯ ರೋಚಕತೆಯನ್ನು ಹೆಚ್ಚಿಸಿದೆ. ಅಷ್ಟೇ ಅಲ್ಲ, ಮುಂಬರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಹಿನ್ನಲೆಯಲ್ಲೂ ಈ ಬಾರಿಯ ಏಷ್ಯಾಕಪ್ ಟೂರ್ನಿ ಪ್ರಧಾನ ಪಾತ್ರ ವಹಿಸುತ್ತಿದೆ.
ಈಗಾಗಲೇ ಟೂರ್ನಿಯಲ್ಲಿ ಒಟ್ಟು 9 ತಂಡಗಳು ಭಾಗವಹಿಸಲಿವೆ. ಈಗಾಗಲೇ ಮೂರು ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ.

ಹೌದು, ಏಷ್ಯಾಕಪ್ ಟೂರ್ನಿಗೆ ಐದು ತಂಡಗಳು ನೇರ ಪ್ರವೇಶವನ್ನು ಪಡೆದುಕೊಂಡಿವೆ. ಒಂದು ತಂಡ ಅರ್ಹತಾ ಸುತ್ತಿನ ಮೂಲಕ ಎಂಟ್ರಿ ಪಡೆದುಕೊಂಡಿದೆ. ಅರ್ಹತಾ ಸುತ್ತಿನಲ್ಲಿ ನಾಲ್ಕು ತಂಡಗಳು ಕಾದಾಟ ನಡೆಸಿದ್ದವು. ಅಂತಿಮವಾಗಿ ಹಾಂಕಾಂಗ್ ತಂಡ ಯುಎಇ ತಂಡವನ್ನು ಸೋಲಿಸಿ ಪ್ರಧಾನ ಸುತ್ತಿಗೆ ಎಂಟ್ರಿಗೆ ಪಡೆದುಕೊಂಡಿದೆ.
ಈ ಮೂಲಕ ಭಾರತ, ಪಾಕಿಸ್ತಾನ ಮತ್ತು ಹಾಂಕಾಂಗ್ ತಂಡಗಳು ಎ ಬಣದಲ್ಲಿ ಕಾಣಿಸಿಕೊಂಡ್ರೆ, ಶ್ರೀಲಂಕಾ, ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಬಿ ಬಣದಲ್ಲಿ ಕಾಣಿಸಿಕೊಳ್ಳಲಿವೆ. ಸೂಪರ್ -4 ರ ಅಗ್ರ ಎರಡು ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ.
ಏಷ್ಯಾಕಪ್ ಟೂರ್ನಿಯ ವೇಳಾಪಟ್ಟಿ ಹೀಗಿದೆ
ಆಗಸ್ಟ್ 27- ಶ್ರೀಲಂಕಾ – ಅಫಘಾನಿಸ್ತಾನ – ದುಬೈ – 7.30 ರಾತ್ರಿ
ಆಗಸ್ಟ್ 28- ಭಾರತ – ಪಾಕಿಸ್ತಾನ – ದುಬೈ – ರಾತ್ರಿ 7.30
ಆಗಸ್ಟ್ 30- ಬಾಂಗ್ಲಾದೇಶ – ಅಫಘಾನಿಸ್ತಾನ -ಶಾರ್ಜಾ -ರಾತ್ರಿ 7.30
ಆಗಸ್ಟ್ 31- ಭಾರತ -ಹಾಂಕಾಂಗ್ – ದುಬೈ-
ಸೆಪ್ಟಂಬರ್ 1- ಶ್ರೀಲಂಕಾ – ಬಾಂಗ್ಲಾದೇಶ – ದುಬೈ – ರಾತ್ರಿ 7.30
ಸೆಪ್ಟಂಬರ್ 2- ಪಾಕಿಸ್ತಾನ – ಹಾಂಕಾಂಗ್ – ಶಾರ್ಜಾ – ರಾತ್ರಿ 7.30
ಸೆಪ್ಟಂಬರ್ 3- ಸೂಪರ್ -4 ಮ್ಯಾಚ್ – ಬಿ1-ಬಿ2 – ಶಾರ್ಜಾ- ರಾತ್ರಿ 7.30
ಸೆಪ್ಟಂಬರ್ 4- ಸೂಪರ್ -4- ಎ1 -ಎ2- ದುಬೈ- ರಾತ್ರಿ 7.30
ಸೆಪ್ಟಂಬರ್ 6- ಸೂಪರ್ -4 ಮ್ಯಾಚ್ -ಎ1-ಬಿ1 -ದುಬೈ- ರಾತ್ರಿ 7.30-
ಸೆಪ್ಟಂಬರ್ 7- ಸೂಪರ್ -4 ಮ್ಯಾಚ್ – ಎ2-ಬಿ-2 – ದುಬೈ- ರಾತ್ರಿ – 7.30
ಸೆಪ್ಟಂಬರ್ 8- ಸೂಪರ್-4 ಎ1-ಬಿ2- ದುಬೈ-ರಾತ್ರಿ 7.30
ಸೆಪ್ಟಂಬರ್ -11 – ಫೈನಲ್ – ದುಬೈ- ರಾತ್ರಿ 7.30