ಮುಂಬರುವ T20I World Cup ಪಂದ್ಯಾವಳಿಯ ಸಿದ್ಧತೆಗೆ ಭರ್ಜರಿ ವೇದಿಕೆ ಆಗಿರುವ ASIA CUP 2022 ಟೂರ್ನಿಯ Super Four ಹಂತದಲ್ಲಿ ರೋಚಕ ಪಂದ್ಯಗಳನ್ನ ಎದುರು ನೋಡಬಹುದಾಗಿದೆ.
ಪ್ರಸಕ್ತ ಟೂರ್ನಿಯಲ್ಲಿ ಈಗಾಗಲೇ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ v ಪಾಕಿಸ್ತಾನ ನಡುವಿನ ಮುಖಾಮುಖಿ ಕಂಡಿರುವ ಕ್ರಿಕೆಟ್ ಅಭಿಮಾನಿಗಳಿಗೆ ಸೂಪರ್ ಫೋರ್ ಹಂತದಲ್ಲಿ ಮತ್ತಷ್ಟು ರೋಚಕ ಪಂದ್ಯಗಳನ್ನ ನೋಡುವ ಅವಕಾಶ ಕೂಡಿ ಬಂದಿದೆ. ಗುಂಪು ಹಂತದ ಪಂದ್ಯಾವಳಿಯಲ್ಲಿ ನೀರಸ ಪ್ರದರ್ಶನ ನೀಡಿರುವ ಬಾಂಗ್ಲಾದೇಶ ಹಾಗೂ ಹಾಂಗ್‌ಕಾಂಗ್ ತಂಡಗಳು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿವೆ.
ಹೀಗಾಗಿ ಟೂರ್ನಿಯ ಸೂಪರ್ ಫೋರ್ ಹಂತಕ್ಕೆ ಎಂಟ್ರಿಕೊಟ್ಟಿರುವ ಟೀಂ ಇಂಡಿಯಾ, ಪಾಕಿಸ್ತಾನ, ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ತಂಡಗಳು ಪ್ರಶಸ್ತಿ ಸುತ್ತಿಗೇರಲು ಹಣಾಹಣಿ ನಡೆಸಲಿವೆ. ಸೂಪರ್-4 ಹಂತದ ಪಂದ್ಯಗಳು ಸೆ.3ರಿಂದ ನಡೆಯಲಿವೆ. ಟೂರ್ನಿಯಲ್ಲಿ ಭಾರತ v ಪಾಕಿಸ್ತಾನ ತಂಡಗಳು 2ನೇ ಬಾರಿಗೆ ಮುಖಾಮುಖಿ ಆಗುತ್ತಿದ್ದು, ಸೆ.4ರಂದು ನಡೆಯಲಿರುವ ಈ ಪಂದ್ಯಕ್ಕಾಗಿ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
Asia Cup 2022 Super-4 ವೇಳಾಪಟ್ಟಿ
ಸೆಪ್ಟೆಂಬರ್ 3: ಶ್ರೀಲಂಕಾ vs ಅಫ್ಘಾನಿಸ್ತಾನ
ಸೆಪ್ಟೆಂಬರ್ 4: ಭಾರತ vs ಪಾಕಿಸ್ತಾನ
ಸೆಪ್ಟೆಂಬರ್ 6: ಭಾರತ vs ಶ್ರೀಲಂಕಾ
ಸೆಪ್ಟೆಂಬರ್ 7: ಪಾಕಿಸ್ತಾನ vs ಅಫ್ಘಾನಿಸ್ತಾನ
ಸೆಪ್ಟೆಂಬರ್ 8: ಭಾರತ vs ಅಫ್ಘಾನಿಸ್ತಾನ
ಸೆಪ್ಟೆಂಬರ್ 9: ಶ್ರೀಲಂಕಾ vs ಪಾಕಿಸ್ತಾನ