Asia Cup-2022- ಶ್ರೀಲಂಕಾ ತಂಡಕ್ಕೆ ಡಸನ್ ಶನಕಾ ಕ್ಯಾಪ್ಟನ್.. ಯುವ ವೇಗಿ ಮಧುಶಂಕಾ ಸ್ಥಾನ…!
ಏಷ್ಯಾಕಪ್ ಟೂರ್ನಿಗೆ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದೆ. ಶ್ರೀಲಂಕಾ ತಂಡವನ್ನು ಡಸನ್ ಶನಕಾ ಮುನ್ನಡೆಸಲಿದ್ದಾರೆ. ಚರಿತ್ ಅಸಲಂಕಾ ಅವರು ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.
ಇನ್ನು 18ರ ಹರೆಯದ ಯುವ ವೇಗಿ ದಿಲ್ಶಾನ್ ಮಧುಶಂಕಾ ಅವರು ತಂಡದ ಹೊಸ ಮುಖವಾಗಿ ಏಷ್ಯಾಕಪ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.
ಇನ್ನು ತಂಡದಲ್ಲಿ ಹಿರಿಯ ಮತ್ತು ಯುವ ಆಟಗಾರರಿಗೆ ಅವಕಾಶವನ್ನು ನೀಡಲಾಗಿದೆ. ಹಿರಿಯ ಆಟಗಾರರಾಗಿರುವ ದಿನೇಶ್ ಚಾಂಡಿಮಲ್, ಧನಂಜಯ್ ಡಿ ಸಿಲ್ವಾ ಹಾಗೂ ಜೆಫ್ರಿ ವಾಂಡೆರ್ಸೆ ಅವರು ತಂಡವನ್ನು ಸೇರಿಕೊಂಡಿದ್ದಾರೆ. ಇವರು ಮೂರು ಮಂದಿ ಆಟಗಾರರು ಕಳೆದ ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಯಲ್ಲಿ ಆಡಿರಲಿಲ್ಲ.
ಏಷ್ಯಾಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡ ಐದು ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ. ಇನ್ನು ಭಾರತ ಏಳು ಬಾರಿ ಗೆದ್ರೆ, ಪಾಕಿಸ್ತಾನ ಮೂರು ಬಾರಿ ಜಯ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಬಾಂಗ್ಲಾದೇಶ ಮೂರು ಬಾರಿ ಫೈನಲ್ ಗೆ ತಲುಪಿದೆ.
2022ರ ಏಷ್ಯಾಕಪ್ ಟೂರ್ನಿ ಆಗಸ್ಟ್ 27ರಿಂದ ಯುಎಇ ನಲ್ಲಿ ಆರಂಭವಾಗಲಿದೆ.
ಶ್ರೀಲಂಕಾ ತಂಡ
ಡಸನ್ ಶನಕಾ (ನಾಯಕ) ದುನುಷ್ಕಾ ಗುಣತಿಲಕ, ಪಥುಮ್ ನಿಸ್ಸಾಂಕ, ಕುಶಲ್ ಮೆಂಡೀಸ್, ಚರಿತ್ ಅಸಲಂಕಾ, ಭಾನುಕಾ ರಾಜಪಕ್ಷ, ಆಶೆನ್ ಬಂಡಾರ, ಧನಂಜಯ್ ಡಿಸಿಲ್ವಾ, ವನಿಂದು ಹಸರಂಗ, ಮಹೀಶ್ ತೀಕ್ಷಣ, ಜೆಫ್ರಿ ವಾಂಡೆರ್ಸೆಯ್, ಪ್ರವೀಣ್ ಜಯ ವಿಕ್ರಮ, ಚಾಮಿಕಾ ಕರುಣರತ್ನೆ, ದಿಲ್ಶಾನ್ ಮಧುಶಂಕಾ, ಮತೀಷಾ ಪತೀರಣ, ನುವಾನಿದು ಫರ್ನಾಂಡೋ, ದುಶ್ಮಂತಾ ಚಾಮೀರಾ, ದಿನೇಶ್ ಚಾಂಡಿಮಲ್.