Asia Cup 2022- ಶ್ರೀಲಂಕಾದಲ್ಲೇ ನಡೆಯುತ್ತಾ ? ಗಂಗೂಲಿ ಹೇಳಿದ್ದೇನು ?

ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಈ ಬಾರಿಯ ಏಷ್ಯಾ ಕಪ್ ಟೂರ್ನಿಯ ಆಯೋಜನೆ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
ದ್ವೀಪರಾಷ್ಟ್ರದಲ್ಲಿ ನಡೆಯುತ್ತಿರುವ ನಾಗರೀಕರ ಪ್ರತಿಭಟನೆ ಮತ್ತು ಆರ್ಥಿಕ ಬಿಕ್ಕಟ್ಟು ಈಗ ಏಷ್ಯಾ ಕಪ್ ಟೂರ್ನಿಯ ಮೇಲೆ ಪರಿಣಾಮವನ್ನು ಬೀರುತ್ತಿದೆ.
ಒಂದು ವೇಳೆ ಏಷ್ಯಾಕಪ್ ಟೂರ್ನಿಯ ಆಯೋಜನೆ ಲಂಕಾದಿಂದ ಕೈ ತಪ್ಪಿದ್ರೆ ಆಯೋಜನೆ ಮಾಡೋದು ಎಲ್ಲಿ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಪಾಕಿಸ್ತಾನ ಮತ್ತು ಭಾರತದಲ್ಲಿ ನಡೆಯುವುದು ಡೌಟ್. ಯಾಕಂದ್ರೆ ಪಾಕ್ ಆಟಗಾರರು ಭಾರತದಲ್ಲಿ ಅಡಲ್ಲ. ಭಾರತದ ಆಟಗಾರರು ಪಾಕ್ ನಲ್ಲಿ ಆಡಲ್ಲ. ಹೀಗಾಗಿ ಬಾಂಗ್ಲಾದೇಶ ಆತಿಥ್ಯ ವಹಿಸುವ ಸಾಧ್ಯತೆಗಳಿವೆ.
ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟವಾದ ಪ್ರತಿಕ್ರಿಯೆ ನೀಡಿಲ್ಲ.
ನಾನು ಈ ಬಗ್ಗೆ ಈಗ ಪ್ರತಿಕ್ರಿಯೆ ನೀಡುವುದಿಲ್ಲ. ಭಾರತದಲ್ಲಿ ಆಯೋಜನೆ ಮಾಡುವುದರ ಬಗ್ಗೆಯೂ ಏನು ಹೇಳಲ್ಲ. ಶ್ರೀಲಂಕಾದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಈಗಾಗಲೇ ಲಂಕಾದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಸರಣಿಯನ್ನು ಆಡಿದೆ. ಶ್ರೀಲಂಕಾ ತಂಡ ಕೂಡ ಉತ್ತಮ ಪ್ರದರ್ಶನ ನೀಡಿದೆ. ಏಷ್ಯಾಕಪ್ ಟೂರ್ನಿಗೆ ಇನ್ನೂ ಒಂದು ತಿಂಗಳು ಇದೆ. ಕಾದು ನೋಡೋಣ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

ಇತ್ತೀಚಿಗೆ ಆಸ್ಟ್ರೇಲಿಯಾ ತಂಡ ಲಂಕಾ ಪ್ರವಾಸವನ್ನು ಕೈಗೊಂಡಿತ್ತು. ಆಸ್ಟ್ರೇಲಿಯಾ ಏಕದಿನ ಮತ್ತು ಟಿ-20 ಸರಣಿಯನ್ನು ಗೆದ್ದುಕೊಂಡಿತ್ತು. ಹಾಗೇ ಎರಡು ಪಂದ್ಯಗಳ ಟೆಸ್ಟ್ ಸರಣಿ 1-1ರಿಂದ ಸಮಬಲಗೊಂಡಿತ್ತು.
ಇನ್ನು ಸೌರವ್ ಗಂಗೂಲಿ ಬಿಸಿಸಿಥ ಅಧ್ಯಕ್ಷರಾದ ನಂತರ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದರು. ಅದರಲ್ಲೂ ಕೋವಿಡ್ ಸೋಂಕು ಕ್ರಿಕೆಟ್ ಆಟದ ಮೇಲೂ ಪರಿಣಾಮ ಬೀರಿತ್ತು.

ಈ ಬಗ್ಗೆ ಮಾತನಾಡಿದ ಗಂಗೂಲಿ, ನಾವು ಕ್ರಿಕೆಟ್ ಆಟವನ್ನು ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದೇವೆ. ನಾನು ಎಂದಿಗೂ ಹಣವನ್ನು ಆಟದ ಜೊತೆ ಹೋಲಿಕೆ ಮಾಡುವುದಿಲ್ಲ. ಆದ್ರೂ ಆಟದ ಗುಣಮಟ್ಟವವನ್ನು ಹೆಚ್ಚಿಸಲು ಮೂಲಸೌಕರ್ಯಗಳು ಬೇಕಿರುವುದರಿಂದ ಹಣ ಕೂಡ ಬೇಕೇ ಬೇಕು. ಸದ್ಯ ಭಾರತೀಯ ಕ್ರಿಕೆಟ್ ಸುಭದ್ರವಾಗಿದೆ. ನಮ್ಮ ಅವಧಿ ಮುಗಿದ ನಂತರ ಬೇರೆಯವರು ಮುನ್ನಡೆಸುತ್ತಾರೆ. ನಿಮಗೆ ಗೊತ್ತಿರುವ ಹಾಗೇ ನೇರ ಪ್ರಸಾರ ಹಕ್ಕಿನಿಂದ ನಿರೀಕ್ಷೆಗಿಂತಲೂ ಹೆಚ್ಚಿನ ದುಡ್ಡು ಬಂದಿದೆ ಎಂದು ಗಂಗೂಲಿ ಹೇಳಿದ್ರು.
ಇನ್ನು ಐಸಿಸಿ ಟೂರ್ನಿಯ ಬಗ್ಗೆ ಮಾತನಾಡಿದ ಗಂಗೂಲಿ, ಎಲ್ಲಾ ಸಮಯದಲ್ಲೂ ಐಸಿಸಿ ಟ್ರೋಫಿಗಳನ್ನು ಗೆಲ್ಲಲು ಆಗುವುದಿಲ್ಲ. ಹಾಗಂತ ಟೀಮ್ ಇಂಡಿಯಾ ಐಸಿಸಿ ಟೂರ್ನಿಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ ಎಂದು ಹೇಳುವುದು ಸರಿಯಲ್ಲ. 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಫೈನಲ್ ಮತ್ತು 2019ರ ಏಕದಿನ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಿತ್ತು. ಪ್ರತಿ ಬಾರಿ ಆಡುವಾಗಲೂ ಭಾರತದ ಮೇಲೆ ನಿರೀಕ್ಷೆಗಳ ಭಾರ ಹೆಚ್ಚಿರುತ್ತದೆ. ನಮ್ಮಲ್ಲಿ ಅತ್ಯುತ್ತಮ ಮಟ್ಟದ ಆಟಗಾರರು ಇದ್ದಾರೆ. ನೋಡೋಣ ಟಿ-20 ವಿಶ್ವಕಪ್ ನಲ್ಲಿ ಶ್ರೇಷ್ಠ ಪ್ರದರ್ಶನ ನೀಡುತ್ತಾರೆ ಅನ್ನೋ ವಿಶ್ವಾಶವಿದೆ ಎಂದರು.