ಇತ್ತೀಚಿನ ಸರಣಿಗಳಲ್ಲಿ ಕಳಪೆ ಬೌಲಿಂಗ್ ಕುರಿತು ಟೀಮ್ ಇಂಡಿಯಾದ ಕೇರಂ ಸ್ಪಿನ್ನರ್ ಆರ್.ಅಶ್ವಿನ್ ತಂಡದ ಬೌಲರ್ಗಳ ಪರ ಬ್ಯಾಟಿಂಗ್ ಮಾಡಿದ್ದಾರೆ.
ಅಭ್ಯಾಸ ಪಂದ್ಯಗಳನ್ನಾಡುತ್ತಿರುವ ಟೀಮ್ ಇಂಡಿಯಾ ಪರ್ತ್ ನಲ್ಲಿ ಬೀಡುಬಿಟ್ಟಿದೆ. ಕಾಂಗರೂ ನಾಡಿಗೆ ಬರುವ ಮುನ್ನ ರೋಹಿತ್ ಪಡೆ ತವರಿನಲ್ಲಿ ಆಸ್ಟ್ರೇಲಿಯಾ ಹಾಗೂ ದ.ಆಫ್ರಿಕಾ ವಿರುದ್ಧ ಟಿ20 ಸರಣಿಗಳನ್ನು ಆಡಿತ್ತು.
ಈ ಎರಡೂ ಸರಣಿಗಳಲ್ಲಿ ಭಾರತೀಯ ಬೌಲರ್ಗಳು ಸಾಕಷ್ಟು ರನ್ ಬಿಟ್ಟುಕೊಟ್ಟು ದುಬಾರಿ ಬೌಲರ್ ಗಳಾಗಿದ್ದರು.
ಇದನ್ನು ಸಮರ್ಥಿಸಿಕೊಂಡಿರುವ ಅಶ್ವಿನ್ ಭಾರತದಲ್ಲಿ ಬೌಂಡರಿಗಳು ಚಿಕ್ಕದಿವೆ. ಬೌಲರ್ಗಳು ಒತ್ತಡದಲ್ಲಿರುತ್ತಾರೆ. ಈ ಸಂದರ್ಭಗಳು ಟಿ20 ವಿಶ್ವಕಪ್ ನಲ್ಲಿ ಇರುವುದಿಲ್ಲ ಎಂದಿದ್ದಾರೆ.
ತವರಿನಲ್ಲಿ ಟಿ20 ಕ್ರಿಕೆಟ್ ಆಡುವಾಗ ಏನಾಗುತ್ತದೆ ಎನ್ನುವ ಅರಿವಿದೆ.ಚೆಂಡನ್ನು ಬೌಂಡರಿ ದಾಟುವಂತೆ ಹೊಡೆಯುತ್ತಾರೆ.
ಒಂದು ವಿಚಾರವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಭಾರತದಲ್ಲಿ 30 ಯಾರ್ಡ್ ಇದೆ.ಆಸ್ಟ್ರೇಲಿಯಾದಲ್ಲಿ ಮೈದಾನಗಳು ದೊಡ್ಡದಿದ್ದು ಬೌಲರ್ ಗಳಿಗೆ ಚೆನ್ನಾಗಿ ಬೌಲಿಂಗ್ ಮಾಡಲು ಹೆಚ್ಚಿನ ಅವಕಾಶವಿದೆ.
ಇಲ್ಲಿನ ವಾತಾವರಣವನ್ನು ಅರ್ಥ ಮಾಡಿಕೊಂಡು ಬೌಲಿಂಗ್ ಮಾಡಬೇಕು ಎಂದು ತಿಳಿಸಿದ್ದಾರೆ.