ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟರ್. ವಿರಾಟ್ ಕೊಹ್ಲಿಗೆ ಅದೆಷ್ಟೋ ಅಭಿಮಾನಿಗಳಿದ್ದರು. ಹುಡುಗಿಯರಂತೂ ವಿರಾಟ್ ಮದುವೆಗೆ ಮುನ್ನ ಅವರ ಹಿಂದೆ ಬಿದ್ದಿದ್ದರು. ಕೇವಲ ಸೆಲೆಬ್ರಿಟಿಗಳು ಮಾತ್ರವಲ್ಲ, ವನಿತಾ ಕ್ರಿಕೆಟರ್ಗಳು ಕೂಡ ವಿರಾಟ್ ಹಿಂದೆ ಬಿದ್ದಿದ್ದರು.
ಇಂಗ್ಲೆಂಡ್ ಮಹಿಳಾ ತಂಡದ ಆಲ್ರೌಂಡರ್ ಡೇನಿಯಲ್ ವ್ಯಾಟ್ ವಿರಾಟ್ ಮದುವೆಯಾಗುವುದಾಗಿ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ ವಿರಾಟ್ ಕೊಹ್ಲಿಗೆ ಲವ್ ಪ್ರೊಪೋಸ್ ಕೂಡ ಮಾಡಿದ್ದರು. ಆದರೆ ಡೇನಿಯಲ್ ವ್ಯಾಟ್ ಬಗ್ಗೆ ವಿರಾಟ್ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ವ್ಯಾಟ್ ಮತ್ತು ವಿರಾಟ್ ನಡುವಿನ ಲವ್ ಮ್ಯಾಟರ್ ಕೂಡ ಅಲ್ಲೇ ನಿಂತು ಹೋಗಿತ್ತು. ವಿರಾಟ್ ಅನುಷ್ಕಾ ಶರ್ಮಾರನ್ನು ಮದುವೆಯಾಗಿ ಹಾಯಾಗಿದ್ದಾರೆ.
ಈಗ ಡೇನಿಯಲ್ ವ್ಯಾಟ್ ಮತ್ತೆ ಸುದ್ದಿಯಲ್ಲಿದ್ದಾರೆ. ಮತ್ತದೇ ಲವ್ ಸ್ಟೋರಿಯಿಂದ. ಆದರೆ ಈ ಬಾರಿ ವ್ಯಾಟ್ ಬಲೆಗೆ ಬಿದ್ದಿರುವುದು ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್. ಅರ್ಜುನ್ ಮತ್ತು ವ್ಯಾಟ್ ಡೇಟಿಂಗ್ ಮಾಡುತ್ತಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ.
ಸದ್ಯ ಇಂಗ್ಲೆಂಡ್ ನಲ್ಲಿರುವ ಅರ್ಜುನ್ ಅವರು ಡೇನಿಯಲ್ ವ್ಯಾಟ್ ಜೊತೆ ಡೇಟಿಂಗ್ ನಲ್ಲಿರುವ ಫೋಟೋವನ್ನು ತಮ್ಮದೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಟೋಗಳು ಈಗ ಸಖತ್ ವೈರಲ್ ಆಗಿದೆ. ಈ ಸಂಬಂಧ ಎಲ್ಲಿ ಹೋಗಿ ನಿಲ್ಲುತ್ತೊ ಕಾದು ನೋಡಬೇಕಿದೆ.