ತಾರಾ ಆಟಗಾರ ಲಕ್ಷ್ಯಸೇನ್ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ನಲ್ಲಿ ಶುಭಾರಂಭ ಮಾಡಿದ್ದಾರೆ.
ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಲಕ್ಷ್ಯ ಸೇನ್ ತೈವಾನ್ನ ಚೌ ಟೀನ್ ವಿರುದ್ಧ 48 ನಿಮಿಷಗಳ ಕಾಲ ಹೋರಾಡಿ 21-18, 21-19 ಅಂಕಗಳಿಂದ ಗೆದ್ದುಕೊಂಡರು.
ಲಕ್ಷ್ಯ ಸೇನ್ ಎರಡನೆ ಸುತ್ತಿನಲ್ಲಿ ಡೆನ್ ಮಾರ್ಕ್ನ ಆ್ಯಂಡರ್ಸ್ ಆ್ಯಂಟೋನ್ಸನ್ ವಿರುದ್ಧ ಸೆಣ ಸಲಿದ್ದಾರೆ. ಪ್ರಣಯ್ ಇಂಡೋನೇಷ್ಯಾದ ಆ್ಯಂಥೋನಿ ಸಿನಿಸುಕಾ ಗಿಟ್ಟಿಂಗ್ ವಿರುದ್ಧ ಆಡಲಿದ್ದಾರೆ.
ಲಕ್ಷ್ಯಸೇನ್ ಆಟದ ಕುರಿತು ಅವರ ಕೋಚ್ ವಿಮಲ್ ಕುಮಾರ್ ಬಹಳ ಸಮಯದ ನಂತರ ಬಾಸ್ ರೀತಿಯಲ್ಲಿ ಆಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.