ಮಹೇಂದ್ರ ಸಿಂಗ್ ಧೋನಿ ವಿಶ್ವದ ಶ್ರೇಷ್ಠ ಫಿನಿಶರ್. 40ರ ಹರೆಯದ ಮಾಹಿ ಈಗಲೂ ದೊಡ್ಡ ಹೊಡೆತಗಳಿಂದ ತಂಡಕ್ಕೆ ನೆರವಾಗಬಲ್ಲ ಆಟಗಾರ.
ಧೋನಿ ಡೆಲ್ಲ ವಿರುದ್ಧ ತಾನು ಎದುರಿಸಿದ ಮೊದಲ ಎಸೆತದಲ್ಲಿಯೇ ಸಿಕ್ಸರ್ ಬಾರಿಸುವ ಮೂಲಕ, ಸ್ಲಾಗ್ ಓವರ್‌ನಲ್ಲಿ ತನಗಿಂತ ಬ್ಯಾಟ್ಸ್ ಮನ್ ಇಲ್ಲ ಎಂದು ಸಾಬೀತುಪಡಿಸಿದ್ದಾರೆ. ಇದಾದ ಬಳಿಕ ಎರಡನೇ ಎಸೆತವನ್ನು ಧೋನಿ ಇಬ್ಬರು ಫೀಲ್ಡರ್‌ಗಳ ನಡುವೆ ಬಾರಿಸಿ ಬೌಂಡರಿ ಪಡೆದರು. ಇವರ ಮನಮೋಹಕ ಬ್ಯಾಟಿಂಗ್ ನೆರವಿನಿಂದ ಚೆನ್ನೈ 200ಕ್ಕೂ ಹೆಚ್ಚು ರನ್ ಗಳ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಯಿತು.

ಐಪಿಎಲ್ 2022ರ 55ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ತೀವ್ರ ಕಾದಾಟ ನಡೆಯಿತು. ಡೆಲ್ಲಿ ನಾಯಕ ರಿಷಬ್ ಪಂತ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಮೊದಲು ಆಡಿದ ಚೆನ್ನೈ 6 ವಿಕೆಟ್‌ಗೆ 208 ರನ್ ಗಳಿಸಿತು. ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ನಾಯಕರಾದ ನಂತರ ಚೆನ್ನೈ ತಂಡ ಮೂರು ಪಂದ್ಯಗಳಲ್ಲಿ ಎರಡನೇ ಬಾರಿಗೆ 200ಕ್ಕೂ ಹೆಚ್ಚು ರನ್ ಗಳಿಸಿತು. ಈ ವೇಳೆ ಧೋನಿ ಅಮೋಘ ಇನ್ನಿಂಗ್ಸ್ ಆಡಿದರು.

18ನೇ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಬಂದ ಧೋನಿ ಸಿಕ್ಸರ್‌ನೊಂದಿಗೆ ಖಾತೆ ತೆರೆದರು. ಅವರು ಮಿಚೆಲ್ ಮಾರ್ಷ್‌ಗೆ ಎಸೆತದಲ್ಲಿ ಕ್ರೀಸ್ ಹೊರಗೆ ಬಂದು ಮತ್ತು ಲಾಂಗ್ ಆನ್‌ನಲ್ಲಿ ಸಿಕ್ಸರ್ ಬಾರಿಸಿದರು. ಇದಾದ ಬಳಿಕ ಮುಂದಿನ ಎಸೆತದಲ್ಲಿ ಕಟ್ ಶಾಟ್ ಆಡಿ ಫೋರ್ ಹೊಡೆದರು. 19ನೇ ಓವರ್‌ನಲ್ಲಿ ಧೋನಿ ಖಲೀಲ್ ಅಹ್ಮದ್ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಕೊನೆಯ ಎರಡು ಓವರ್‌ಗಳಲ್ಲಿ ಅವರಿಗೆ ಆಡಲು ಸಿಕ್ಕಿದ್ದು ಕೇವಲ 4 ಎಸೆತಗಳು. ಅವರು 8 ಎಸೆತಗಳಲ್ಲಿ 262.5 ಸ್ಟ್ರೈಕ್ ರೇಟ್‌ನಲ್ಲಿ 21 ರನ್ ಗಳಿಸಿದರು.