ಐಪಿಎಲ್ 15ನೇ ಸೀಸನ್ ನಲ್ಲಿ ದೆಹಲಿ ಪರ ಆಡುತ್ತಿರುವ ಕುಲದೀಪ್ ಯಾದವ್ ತಮ್ಮ ಅದ್ಭುತ ಬೌಲಿಂಗ್ ಮೂಲಕ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಗೆ ಪೆಟ್ಟು ನೀಡಿದ್ದಾರೆ. ಅವರು ಡೆಲ್ಲಿ ಪರ ಪ್ರಮುಖ 3 ವಿಕೆಟ್ ಪಡೆದರು. ಇದರಲ್ಲಿ ಮುಂಬೈ ನಾಯಕ ರೋಹಿತ್ ಶರ್ಮಾ ವಿಕೆಟ್ ಕೂಡ ಸೇರಿತ್ತು. ಕುಲದೀಪ್ ಕಳೆದ ವರ್ಷದವರೆಗೆ ಐಪಿಎಲ್ನಲ್ಲಿ ಕೋಲ್ಕತ್ತಾ ಪರ ಆಡುತ್ತಿದ್ದರು. ಆದರೆ ಅವರನ್ನು ಕೋಲ್ಕತ್ತಾ ಕೈ ಬಿಟ್ಟಿತು. ಕೆಕೆಆರ್ನಲ್ಲಿದ್ದಾಗ, ಕಳೆದ ಎರಡು ಸೀಸನ್ಗಳಲ್ಲಿ ಅವರಿಗೆ ಕೆಲವೇ ಕೆಲವು ಅವಕಾಶಗಳು ಸಿಕ್ಕಿದ್ದವು. ಈ ವರ್ಷದ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕುಲದೀಪ್ ಅವರನ್ನು 2 ಕೋಟಿಗೆ ತೆಗೆದುಕೊಂಡಿತ್ತು.
ಭಾನುವಾರ ಮುಂಬೈ ವಿರುದ್ಧ ಕುಲದೀಪ್ ಅವರ ಅತ್ಯುತ್ತಮ ಪ್ರದರ್ಶನದ ನಂತರ, ಕೋಚ್ ಕಪಿಲ್ ಪಾಂಡೆ ಮಾತನಾಡಿದ್ದಾರೆ. ಐಪಿಎಲ್ ಆರಂಭಕ್ಕೂ ಮುನ್ನ ಕುಲದೀಪ್ ಗಾಯಗೊಂಡಿದ್ದರು. ಆ ಬಳಿಕ ಮತ್ತೆ ಮೈದಾನಕ್ಕೆ ಬಂದಾಗ ಅವರಿಗಾಗಿಯೇ ಪ್ರತ್ಯೇಕ ಯೋಜನೆ ಸಿದ್ಧಪಡಿಸಿದ್ದೆ. ಬೌಲಿಂಗ್ ಅನ್ನು ಸುಧಾರಿಸಲು, ಕ್ಲಬ್ ಮಟ್ಟದ ಪಂದ್ಯಗಳನ್ನು ಆಡಲು ಯೋಜನೆ ಮಾಡಲಾಗಿತ್ತು” ಎಂದಿದ್ದಾರೆ.
ಕುಲದೀಪ್ ಕಾನ್ಪುರದ ಕ್ಲಬ್ ಮಟ್ಟದ ಪಂದ್ಯದಲ್ಲಿ ಆಡಿದ್ದರು. ಅದೇ ಸಮಯದಲ್ಲಿ, ನಾನು ಚೆಂಡನ್ನು ಮುಂದಕ್ಕೆ ಎಸೆಯಲು ಹೇಳಿದೆ. ಭಾನುವಾರ ಮುಂಬೈ ವಿರುದ್ಧದ ಪಂದ್ಯದಲ್ಲಿ ಅವರು ಚೆಂಡನ್ನು ಮುಂದಕ್ಕೆ ಎಸೆದಿದ್ದರಿಂದ ಬ್ಯಾಟರ್ಗೆ ಶಾಟ್ ಆಡಲು ಅವಕಾಶ ಸಿಗಲಿಲ್ಲ. ಮುಂದೆ ರೋಹಿತ್ಗೆ ಚೆಂಡನ್ನು ಎಸೆಯಲಾಯಿತು, ಇದರಿಂದಾಗಿ ಕುಲದೀಪ್ ರೋಹಿತ್ನ ವಿಕೆಟ್ ಪಡೆದರು.
ಕುಲದೀಪ್ಗೆ ಅವಕಾಶ ಕಡಿಮೆ
ಕುಲದೀಪ್ ಬೌಲಿಂಗ್ನಲ್ಲಿ ಯಾವುದೇ ಕೊರತೆಯಿಲ್ಲ ಎಂದು ಕೋಚ್ ಕಪಿಲ್ ಪಾಂಡೆ ಹೇಳಿದ್ದಾರೆ. ಅವರು ವಿಕೆಟ್ ಟೇಕರ್ ಬೌಲರ್. ಅವರಿಗೆ ಹೆಚ್ಚು ಅವಕಾಶಗಳು ಸಿಕ್ಕಿಲ್ಲ. ಐಪಿಎಲ್ನಲ್ಲಿಯೂ ಸಹ, ಕೆಕೆಆರ್ ತಂಡವು ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡಲಿಲ್ಲ, ಪ್ಲೇಯಿಂಗ್ ಇಲೆವೆನ್ಗೆ ಸೇರಿಸಿದಾಗ, ಅವರು ಕೇವಲ ಒಂದೆರಡು ಓವರ್ಗಳನ್ನು ಬೌಲ್ ಮಾಡಿದರು. ದೆಹಲಿಯು ಅವರ ಮೇಲೆ ನಂಬಿಕೆ ಇಟ್ಟಿತು ಮತ್ತು ಅವರಿಗೆ ಅವಕಾಶವನ್ನು ನೀಡಿತು ಮತ್ತು ಅವರು ತನ್ನನ್ನು ತಾನು ಸಾಬೀತುಪಡಿಸಿದರು” ಎಂದಿದ್ದಾರೆ.
ಟೀಂ ಇಂಡಿಯಾದ ಹೊಸ ನಾಯಕ ಅವಕಾಶ ನೀಡಬಹುದು
ವಿರಾಟ್ ನಾಯಕತ್ವದಲ್ಲಿ ಕುಲದೀಪ್ ಅಪರೂಪಕ್ಕೆ ಅವಕಾಶ ಪಡೆದಿದ್ದಾರೆ. ಟೀಂ ಇಂಡಿಯಾದ ನೂತನ ನಾಯಕ ರೋಹಿತ್ ಶರ್ಮಾ ಖಂಡಿತವಾಗಿಯೂ ಕುಲದೀಪ್ ಮೇಲೆ ನಂಬಿಕೆ ಇಟ್ಟು ತಂಡದಲ್ಲಿ ಅವಕಾಶ ನೀಡಲಿದ್ದಾರೆ ಎಂದು ಕುಲದೀಪ್ ಕೋಚ್ ಕಪಿಲ್ ಪಾಂಡೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕುಲದೀಪ್ ಅವರು ಎಲ್ಲಾ ಮೂರು ಮಾದರಿಗಳಲ್ಲಿ ಉತ್ತಮ ಬೌಲರ್ ಎಂದು ಅವರ ಕೋಚ್ ಹೇಳಿದ್ದಾರೆ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ವಿಕೆಟ್ ಕಬಳಿಸಬಲ್ಲರು. ಏಕದಿನದಲ್ಲಿ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ.
ಮುಂಬೈ ವಿರುದ್ಧದ ಮೊದಲ ಪಂದ್ಯದಲ್ಲಿ ಕುಲದೀಪ್ 4 ಓವರ್ ಗಳಲ್ಲಿ 18 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಅವರು ಪಂದ್ಯದ ಶ್ರೇಷ್ಠ ಪ್ರಶಸ್ತಿ ಪಡೆದರು. ಮುಂಬೈ ವಿರುದ್ಧ ಕುಲದೀಪ್ ಪ್ರದರ್ಶನ ನೀಡಿದ ರೀತಿ, ಮುಂಬರುವ ಐಪಿಎಲ್ ಪಂದ್ಯಗಳಲ್ಲೂ ಇದೇ ಪ್ರದರ್ಶನ ಮುಂದುವರಿಯಲಿದೆ ಎಂದು ಅವರ ಕೋಚ್ ಕಪಿಲ್ ಪಾಂಡೆ ಹೇಳಿದ್ದಾರೆ.