ಏಷ್ಯಾಕಪ್ನಲ್ಲಿ(Asia Cup) ಟೀಮ್ ಇಂಡಿಯಾ (Team India) ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಈಗಾಗಲೇ ಬಲಿಷ್ಠ ಪಾಕಿಸ್ತಾನ (Pakistan) ತಂಡವನ್ನು ಮಣಿಸಿ ಶುಭಾರಂಭ ಮಾಡಿದೆ. ಸೂಪರ್ 4 ಹಂತಕ್ಕೇರುವ ಲೆಕ್ಕಾಚಾರದಲ್ಲಿ. ಪಾಕ್, ಶ್ರೀಲಂಕಾ (Srilanka) ಮತ್ತು ಬಾಂಗ್ಲಾದೇಶದ (Bangladesh) ಸವಾಲಿಗೆ ರೋಹಿತ್ ಬಳಗ ಸಿದ್ಧವಾಗಿದೆ. ಆದರೆ ಅಫ್ಘಾನಿಸ್ತಾನದ (Afghanistan) ಶಾಕಿಂಗ್ ಫಾರ್ಮ್ ಭಾರತದ ಪಾಲಿಗೆ ಡೇಂಜರ್ (Danger) ತರಹ ಕಾಣಿಸುತ್ತಿದೆ.
ಅಫ್ಘಾನಿಸ್ತಾನ ಜೈಂಟ್ ಕಿಲ್ಲರ್ ತಂಡವಾಗಿ ಕಾಣುತ್ತಿದೆ. ಯುಎಇನಲ್ಲಿ ಅಫ್ಘಾನ್ ತಂಡ ಮೊದಲಿಗೆ ಶ್ರೀಲಂಕಾ ತಂಡವನ್ನು ಮಣಿಸಿತ್ತು. ಬಳಿಕ ಬಾಂಗ್ಲಾದೇಶಕ್ಕೆ ನೀರು ಕುಡಿಸಿ ಸೂಪರ್ 4ಗೆ ಎಂಟ್ರಿ ಪಡೆದಿದೆ. ಬಾಂಗ್ಲಾ ಮತ್ತು ಶ್ರೀಲಂಕಾ ನಡುವಿನ ವಿನ್ನರ್ಗಳು ಈಗ ಸೂಪರ್ ೪ ಪ್ರವೇಶಿಸುವ ಮತ್ತೊಂದು ತಂಡವಾಗಲಿದೆ. ಹೀಗಾಗಿ ಲೀಗ್ನಲ್ಲೇ ಬಾಂಗ್ಲಾಅಥವಾ ಶ್ರೀಲಂಕಾ ಮನೆಗೆ ನಡೆಯುವುದು ಖಚಿತ.
ಅಫ್ಘಾನಿಸ್ತಾನ ತಂಡದ ಶಕ್ತಿಗೆ ಬೇಕಾದಂತಹ ಪಿಚ್ಗಳು ದುಬೈ ಮತ್ತು ಶಾರ್ಜಾದಲ್ಲಿದೆ. ನಿಧಾನಗತಿ ಹಾಗೂ ಸ್ಪಿನ್ ಫ್ರೆಂಡ್ಲಿ ಪಿಚ್ಗಳ ಮೂಲಕ ಅಫ್ಘಾನ್ ಬೌಲರ್ಗಳು ಎದುರಾಳಿಗಳ ಮೇಲೆ ಸವಾರಿ ಮಾಡುತ್ತಿದ್ದಾರೆ. ಮಜೀಬ್ ಉರ್ ರೆಹಮಾನ್, ರಶೀದ್ ಖಾನ್ ಜೊತೆಗೆ ಮೊಹಮ್ಮದ್ ನಬಿ ಸ್ಪಿನ್ ಬಲೆ ಹೆಣೆಯುತ್ತಿದ್ದಾರೆ. ಫಝಲ್ ಫರೂಕಿಯ ವೇಗದ ಬೌಲಿಂಗ್ ಮತ್ತು ವೇರಿಯೇಷನ್ ತಂಡಕ್ಕೆ ಬೋನಸ್ ಆಗುತ್ತಿದೆ.
ಬೌಲಿಂಗ್ ಲೆಕ್ಕಾಚಾರ ಒಂದು ಕಡೆಯಾದರೆ ಬ್ಯಾಟಿಂಗ್ ಮಾತು ಇನ್ನೊಂದು. ಬಿಗ್ ಹಿಟ್ಟರ್ಗಳ ಲೈನ್ ಅಪ್ನ್ನೇ ತಂಡ ಹೊಂದಿದೆ. ಹಝರತುಲ್ಲಾ ಝಝೈ, ರಹಮತುಲ್ಲಾ ಗುರ್ಬಾಝ್, ನಜಿಬುಲ್ಲಾ ಜದ್ರಾನ್, ಇಬ್ರಾಹಿಂ ಜದ್ರನ್ ಬಿಗ್ ಹಿಟ್ಟಿಂಗ್ಗೆ ಫೇಮಸ್. ಮೊಹಮ್ಮದ್ ನಬಿ ಮತ್ತು ರಶೀದ್ ಖಾನ್ ಕೂಡ ಬ್ಯಾಟ್ ಝಳಪಿಸಬಲ್ಲರು. ಹೀಗಾಗಿ ಇವರ ಮೇಲೂ ಎದುರಾಳಿ ಬೌಲರ್ಗಳು ಕಣ್ಣಿಡಬೇಕಿದೆ.
ಅಫ್ಘಾನ್ ಆಟಗಾರರು ವಿಶ್ವದ ಹಲವು ಲೀಗ್ಗಳಲ್ಲಿ ಆಡುತ್ತಿದ್ದಾರೆ. ರಶೀದ್ ಖಾನ್ ಮತ್ತು ಮುಜೀಬ್ ವಿಶ್ವವಿಖ್ಯಾತ ಬೌಲರ್ಗಳು. ಅಷ್ಟೇ ಅಲ್ಲ ಸ್ಪಿನ್ ಫ್ರೆಂಡ್ಲಿ ಪಿಚ್ನಲ್ಲಿ ನಬಿ ಸೇರಿದಂತೆ ೧೨ ಓವರುಗಳ ಟೈಟ್ ಬೌಲಿಂಗ್ ಮಾಡುವ ಸಾಮರ್ಥ್ಯ ಈ ತಂಡದ ಆಟಗಾರರಲ್ಲಿದೆ. ಹೀಗಾಗಿ ಅಫ್ಘಾನಿಸ್ತಾನ ಈಗ ಕ್ರಿಕೆಟ್ ಶಿಶುವಲ್ಲ. ಏಷ್ಯಾಕಪ್ ಗೆಲ್ಲಬಲ್ಲ ಡಾರ್ಕ್ಹಾರ್ಸ್.