ಕ್ರಿಕೆಟ್ನಲ್ಲಿ ದೊಡ್ಡ ದೊಡ್ಡ ದಾಖಲೆಗಳು ಹೆಚ್ಚು ನೆನಪಿನಲ್ಲಿಳಿಯುತ್ತವೆ. ಅದರಲ್ಲೂ ಬ್ಯಾಟ್ಸ್ಮನ್ಗಳ ಆಟದ ಬಗ್ಗೆ ಹೆಚ್ಚು ನೆನಪಿರುತ್ತದೆ. ಎಲ್ಲೋ ಒಂದೆರಡು ಬೌಲರ್ಗಳು ದಾಖಲೆ ಬಗ್ಗೆ ಅಬ್ಬಾಬ್ಬ ಅಂದರೆ ನೆನಪು ಇರಬಹುದು. ಆದರೆ ನೇಪಾಳ (Nepal) ತಂಡದ ನಾಯಕ ಸಂದೀಪ್ ಲಮಿಚಿನ್ನೆ (Sandeep Lamichinne) ನೆನಪಿನಲ್ಲಿಳಿಯುವ ಬೌಲಿಂಗ್ ಪ್ರದರ್ಶನ ನೀಡಿದರೂ ನೇಪಾಳ ತಂಡ ಸೋತಿದೆ. ಬ್ಯಾಟಿಂಗ್ ವೈಫಲ್ಯ ನಾಯಕನ ಬೌಲಿಂಗ್ ಸಾಧನೆಯನ್ನು ಮಂಕಾಗಿಸಿದೆ.
ಕೀನ್ಯಾ ವಿರುದ್ಧದ ಟಿ20 ಪಂದ್ಯದಲ್ಲಿ (T20I) ಸಂದೀಪ್ 4 ಓವರ್ ಎಸೆದು ಕೇವಲ 9 ರನ್ ನೀಡಿ 5 ವಿಕೆಟ್ ಪಡೆದುಕೊಂಡಿದ್ದರು. ಇವರ ಪ್ರದರ್ಶನದಿಂದಾಗಿ ಕೀನ್ಯಾ (Kenya) ಕೇವಲ 101 ರನ್ಗಳಿಗೆ ಆಲೌಟ್ ಆಗಿತ್ತು. ಆದರೆ ನೇಪಾಳ ಬ್ಯಾಟಿಂಗ್ ವೈಫಲ್ಯ ಕಂಡು ಕೇವಲ 94 ರನ್ಗಳಿಗೆ ಆಲೌಟ್ ಆಗಿ 7 ರನ್ಗಳ ಸೋಲು ಕಾಣುವ ಹಾಗಾಯಿತು.
ಸೋಲು-ಗೆಲುವಿನ ಮಾತು ಹಾಗಿರಲಿ. ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ನಾಯಕನೊಬ್ಬ 5 ವಿಕೆಟ್ ಪಡೆದಿದ್ದು ಇದೇ ಮೊದಲು. ಆದರೆ ಅದೇ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಐದು ವಿಕೆಟ್ ಪಡೆದು ಸೋಲುಂಡ ಮೊದಲ ನಾಯಕ ಎಂಬ ಕೆಟ್ಟ ದಾಖಲೆ ಸಂದೀಪ್ ಲಾಮಿಚಾನೆ ಪಾಲಾಯಿತು. ಸಂದೀಪ್ ಬೌಲಿಂಗ್ ಬಗ್ಗೆ ಮಾತನಾಡುವಾಗ ತಂಡದ ಸೋಲಿನ ಬಗ್ಗೆಯೂ ಮಾತನಾಡುವ ಹಾಗಾಗಿರುವುದು ದುರಂತ.