ಆತಿಥೇಯ ಆಸ್ಟ್ರೆಲಿಯಾ ಟಿ20 ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 8 ರನ್ ಗಳ ವಿರೋಚಿತ ಸೋಲು ಅನುಭವಿಸಿತು.
ಆದರೆ ಪರ್ತ್ ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಆರೋನ್ ಫಿಂಚ್ ವಿಶ್ವ ದಾಖಲೆ ಬರೆದಿದ್ದಾರೆ.
ಆಂಗ್ಲರ ವಿರುದ್ಧ ನಾಯಕ ಆರೋನ್ ಫಿಂಚ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಕೇವಲ 12 ರನ್ ಗಳನ್ನು ಹೊಡೆದರು.
ಈ ಹನ್ನೆರಡು ರನ್ ಗಳೊಂದಿಗೆ ಆಸಿಸ್ ನಾಯಕ ಟಿ20 ಕ್ರಿಕೆಟ್ ನಲ್ಲಿ 3 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ.
ಈ ಸಾಧನೆ ಮಾಡಿದ ಆರನೆ ಬ್ಯಾಟರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಇಲ್ಲಿ ವಿಶೇಷವೆಂದರೆ ತುಂಬ ಕಡಿಮೆ ಎಸೆತದಲ್ಲಿ ಫಿಂಚ್ 3 ಸಾವಿರ ರನ್ ಪೂರೈಸಿ ಟೀಮ್ ಇಂಡಿಯಾದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
ಆರೋನ್ ಫಿಂಚ್ 3 ಸಾವಿರ ರನ್ ಪೂರೈಸಲು 2078 ಎಸೆತಗಳನ್ನು ತೆಗೆದುಕೊಂಡಿದ್ದಾರೆ.
ರೋಹಿತ್ ಶರ್ಮಾ 3 ಸಾವಿರ ರನ್ ಪೂರೈಸಲು 2,149 ಎಸೆತ, ವಿರಾಟ್ ಕೊಹ್ಲಿ 2,169 ಎಸೆತ, ಮಾರ್ಟಿನ್ ಗಪ್ಟಿಲ್ 2,203 ಎಸೆತ, ಐರ್ಲೆಂಡ್ ನ ಪೌಲ್ ಸ್ಟಿರ್ಲಿಂಗ್ 2226 ಎಸೆತ, ಪಾಕ್ ನಾಯಕ ಬಾಬರ್ ಅಜಂ 2317 ಎಸೆತಗಳನ್ನು ತೆಗೆದುಕೊಂಡಿದ್ದಾರೆ.
Aaron Finch