ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಫೋರ್, ಸಿಕ್ಸ್ ಬಾರಿಸುವ ಬ್ಯಾಟ್ಸ್ಮನ್ ಜೊತೆಗೆ ವಿಕೆಟ್ ಕಬಳಿಸಿ ಪಂದ್ಯ ಗೆಲ್ಲಿಸಿ ಕೊಡಬಲ್ಲ ಬೌಲರ್ ಅತೀ ಅಗತ್ಯ. ಐಪಿಎಲ್ನಲ್ಲಿ ಉತ್ತಮ ಬೌಲರ್ಗೆ ಅತ್ಯುತ್ತಮ ಸ್ಥಾನವಿದೆ. ವೆಸ್ಟ್ಇಂಡೀಸ್ ಆಲ್ರೌಂಡರ್ ಡ್ವೈನ್ ಬ್ರಾವೋ ಐಪಿಎಲ್ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಐಪಿಎಲ್ನಲ್ಲಿ ವಿಕೆಟ್ ಕಬಳಿಸಲು ವೇಗ ಮಾತ್ರ ಅಗತ್ಯವಲ್ಲ. ಮಿಸ್ಟ್ರಿ ಸ್ಪಿನ್ ಕೂಡ ಬೇಕಾಗಿಲ್ಲ ಎಂದು ಸಾಬೀತು ಮಾಡಿದವರು ಬ್ರಾವೋ. ತನ್ನ ಬುದ್ಧಿವಂತಿಕೆಯ ಮೂಲಕ ಬ್ಯಾಟ್ಸ್ಮನ್ಗಳನ್ನು ಸ್ಲೋವರ್ ಬಾಲ್ಗಳ ಮೂಲಕ ವಂಚಿಸಿ ವಿಕೆಟ್ ಪಡೆಯುವ ಕಲೆ ಬ್ರಾವೋಗೆ ಕರಗತವಾಗಿದೆ.
ದೇಹಕ್ಕೆ ವಯಸ್ಸಾಗಿದೆ,ಆದರೆ ತನ್ನಲ್ಲಿರುವ ಕ್ರಿಕೆಟ್ ಕಲೆಗಲ್ಲ ಅನ್ನುವುದನ್ನು ಬ್ರಾವೋ ಎಲ್ಲಾ ಪಂದ್ಯಗಳಲ್ಲೂ ಸಾಭೀತು ಮಾಡುತ್ತಿದ್ದಾರೆ. ಐಪಿಎಲ್ ವಿಕೆಟ್ ಪಡೆದವರ ಪಟ್ಟಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಗೌರವ ಹೊಂದಿರುವ ಬ್ರಾವೋ ಯಾರ್ಕರ್ ಕಿಂಗ್ ಲಸಿತ್ ಮಾಲಿಂಗ ದಾಖಲೆಯನ್ನು ಹಿಂದಿಕ್ಕಿದ್ದಾರೆ.
153ನೇ ಪಂದ್ಯದಲ್ಲಿ 171ನೇ ವಿಕೆಟ್ ಪಡೆಯುವ ಮುಳಕ ಬ್ರಾವೋ ಹೊಸ ದಾಖಲೆ ಬರೆದರು. ಈ ಹಿಂದೆ ಲಸಿತ್ ಮಾಲಿಂಗ 122 ಪಂದ್ಯಗಳಲ್ಲಿ 170 ವಿಕೆಟ್ ಪಡೆದಿದ್ದರು. ಭಾರತದ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ 154 ಪಂದ್ಯಗಳಿಂದ 166 ವಿಕೆಟ್ ಪಡೆದು 3ನೇ ಸ್ಥಾನದಲ್ಲಿದ್ದಾರೆ.
ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ 165 ಪಂದ್ಯಗಳಿಂದ 157 ವಿಕೆಟ್ ಪಡೆದರೆ, ಹರ್ಭಜನ್ ಸಿಂಗ್ 163 ಪಂದ್ಯಗಳಿಂದ 150 ವಿಕೆಟ್ ಪಡೆದಿದ್ದಾರೆ. ಟಾಪ್ 5 ವಿಕೆಟ್ ಟೇಕರ್ಗಳ ಪೈಕಿ ಡ್ವೈನ್ ಬ್ರಾವೋ ಮಾತ್ರ ಖಾಯಂ ಆಗಿ ಆಡುತ್ತಿದ್ದಾರೆ. ಲಸಿತ್ ಮಾಲಿಂಗ ಮತ್ತು ಹರ್ಭಜನ್ ಸಿಂಗ್ ಕ್ರಿಕೆಟ್ನಿಂದ ದೂರವಾಗಿದ್ದಾರೆ. ಹೀಗಾಗಿ ಬ್ರಾವೋ ದಾಖಲೆ ಹಲವು ವರ್ಷಗಳ ಕಾಲ ಉಳಿಯಲಿದೆ.