ಸ್ಯಾಮ್ ಕರ್ರನ್(Sam Curran) (5/10) ಆಕ್ರಮಣಕಾರಿ ಬೌಲಿಂಗ್(Bowling) ಹಾಗೂ ಸಂಘಟಿತ(Batting) ಬ್ಯಾಟಿಂಗ್ ಪ್ರದರ್ಶನ ನೀಡಿದ ಇಂಗ್ಲೆಂಡ್ T20 ವಿಶ್ವಕಪ್ನ Super-12 ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ 5 ವಿಕೆಟ್ಗಳ ಗೆಲುವು ಸಾಧಿಸಿದೆ.
Perth Stadium ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕನ ನಿರೀಕ್ಷೆಗೆ ತಕ್ಕಂತೆ ಬೌಲಿಂಗ್ ದಾಳಿ ನಡೆಸಿದ ಇಂಗ್ಲೆಂಡ್ 19.4 ಓವರ್ಗಳಲ್ಲಿ ಅಫ್ಘಾನಿಸ್ತಾನ ತಂಡವನ್ನ 112 ರನ್ಗಳಿಗೆ ಕಟ್ಟಿಹಾಕಿತು. ಸುಲಭದ ಗುರಿ ಬೆನ್ನತ್ತಿದ ಇಂಗ್ಲೆಂಡ್ 18.2 ಓವರ್ಗಳಲ್ಲಿ 5 ವಿಕೆಟ್ಗೆ 113 ರನ್ಗಳಿಸುವ ಗೆಲುವಿನ ದಡಸೇರಿತು. ಈ ಗೆಲುವಿನೊಂದಿಗೆ ಇಂಗ್ಲೆಂಡ್, 2022ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನ ಆರಂಭ ಕಂಡಿದೆ.
ಅಫ್ಘಾನ್ ಬ್ಯಾಟಿಂಗ್ ವೈಫಲ್ಯ:
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಅಫ್ಘಾನಿಸ್ತಾನಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಇನ್ನಿಂಗ್ಸ್ ಆರಂಭಿಸಿದ ಜಝಾಯಿ(7) ಮತ್ತು ಗುರ್ಬಾಜ್(10) ಬಹುಬೇಗನೆ ವಿಕೆಟ್ ಒಪ್ಪಿಸಿದರು. ನಂತರ ಜೊತೆಯಾದ ಇಬ್ರಾಹಿಂ ಜ಼ದ್ರಾನ್(32) ಹಾಗೂ ಉಸ್ಮಾನ್ ಘನಿ(30) ಉಪಯುಕ್ತ ರನ್ ಕಲೆಹಾಕಿದರು. ಇವರಿಬ್ಬರ ನಂತರ ಬಂದ ಯಾವುದೇ ಬ್ಯಾಟ್ಸ್ಮನ್ಗಳು ನಿರೀಕ್ಷಿತ ಆಟವಾಡದ ಪರಿಣಾಮ ಅಫ್ಘಾನಿಸ್ತಾನ 19.2 ಓವರ್ಗಳಲ್ಲಿ 112 ರನ್ಗಳಿಗೆ ಸರ್ವಪತನ ಕಂಡಿತು. ಇಂಗ್ಲೆಂಡ್ ಪರ ಸ್ಯಾಮ್ ಕರ್ರನ್(5/10) ವಿಕೆಟ್ ಪಡೆದು ಮಿಂಚಿದರೆ. ಬೆನ್ ಸ್ಟೋಕ್ಸ್ ಹಾಗೂ ಮಾರ್ಕ್ ವುಡ್ ತಲಾ 2 ವಿಕೆಟ್ ಪಡೆದರು.
ಆಂಗ್ಲರ ಸಂಘಟಿತ ಬ್ಯಾಟಿಂಗ್:
ಅಫ್ಘಾನಿಸ್ತಾನ ನೀಡಿದ 113 ರನ್ಗಳ ಸುಲಭದ ಟಾರ್ಗೆಟ್ ಚೇಸ್ ಮಾಡಿದ ಇಂಗ್ಲೆಂಡ್ ಸಹ ಸಾಧಾರಣ ಆರಂಭ ಪಡೆಯಿತು. ಇನ್ನಿಂಗ್ಸ್ ಆರಂಭಿಸಿದ ಜೋಸ್ ಬಟ್ಲರ್(18) ಹಾಗೂ ಅಲೆಕ್ಸ್ ಹೇಲ್ಸ್(19) ನಿರೀಕ್ಷಿತ ಆಟವಾಡಲಿಲ್ಲ. ನಂತರ ಬಂದ ಡಾವಿಡ್ ಮಲಾನ್(18) ರನ್ಗಳಿಸಿದರೆ. ಆಲ್ರೌಂಡರ್ ಬೆನ್ ಸ್ಟೋಕ್ಸ್(2), ಹ್ಯಾರಿ ಬ್ರೋಕ್(7) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಜವಾಬ್ದಾರಿಯುತ ಆಟವಾಡಿದ ಲಿವಿಂಗ್ಸ್ಟೋನ್(29*) ರನ್ಗಳಿಸಿ ತಂಡವನ್ನ ಗೆಲುವಿನ ದಡ ಸೇರಿಸಿದರು. ಅಫ್ಘಾನಿಸ್ತಾನದ ಪರ ಫರೂಕಿ, ರಹಮಾನ್, ರಶೀದ್ ಖಾನ್, ಮಲ್ಲಿಕ್ ಹಾಗೂ ನಬಿ ತಲಾ 1 ವಿಕೆಟ್ ಪಡೆದುಕೊಂಡರು.