ಬೆಂಗಳೂರು: ಇಲ್ಲಿ ನಡೆಯುತ್ತಿರುವ 70ನೇ ರಾಷ್ಟ್ರೀಯ ಪೋಲಿಸ್ ಹಾಕಿ ಚಾಂಪಿಯನ್ ಶಿಪ್ ನಲ್ಲಿ ಸಿಐಎಸ್ಎಫ್ ದೆಹಲಿ ತಂಡ ಪಶ್ಚಿಮ ಬಂಗಾಳ ತಂಡವನ್ನು ಮಣಿಸಿತು.
ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಉಭಯ ತಂಡಗಳು ಮೊದಲ ಎರಡು ಅವಧಿಯಲ್ಲಿ ಗೋಲು ಬಾರಿಸುವಲ್ಲಿ ವಿಫಲವಾದವು. ಮೂರನೇ ಅವಧಿಯಲ್ಲಿ ದೆಹಲಿ ತಂಡ ಎರಡು ಗೋಲು ಬಾರಿಸಿ ಅಬ್ಬರಿಸಿತು. ಈ ಅವಧಿಯಲ್ಲಿ ಪಶ್ಚಿಮ ಬಂಗಾಳ ಗೋಲು ಬಾರಿಸು ಆಸೆ ಫಲಿಸಿಲಿಲ್ಲ. ಕೊನೆಯ ಅವಧಿಯಲ್ಲಿ ಬಂಗಾಳ ದೆಹಲಿ ತಂಡದ ರಕ್ಷಣಾ ವಿಭಾಗವನ್ನು ವಂಚಿಸುವಲ್ಲಿ ವಿಫಲವಾಯಿತು.
ಇನ್ನೊಂದು ಪಂದ್ಯದಲ್ಲಿ ಮಹಾರಾಷ್ಟ್ರ ಪೊಲೀಸ್ ತಂಡ 1-2 ರಿಂದ ತಮಿಳುನಾಡಿನ ವಿರುದ್ಧ ಸೋಲು ಕಂಡಿತು. ತಮಿಳುನಾಡಿನ ಪರ ಎಂ ಕಳಿರಾಜ್ 9ನೇ ನಿಮಿಷದಲ್ಲಿ ಗೋಲು ಬಾರಿಸಿ ಅಬ್ಬರಿಸಿದರು. ಇನ್ನು 41ನೇ ನಿಮಿಷದಲ್ಲಿ ಸುರೇಂದ್ರ ಗೋಲು ಸಿಡಿಸಿದರು. ಮಹಾರಾಷ್ಟ್ರ ಪರ ಪೃಥ್ವಿ ರಾಜ್ ಸಾಳುಂಕೆ 33ನೇ ನಿಮಿಷದಲ್ಲಿ ಗೋಲು ಸಿಡಿಸಿ ಸೋಲಿನಲ್ಲಿ ಮಿಂಚಿದರು.
ಐಟಿಬಿಪಿ ಜಲಂಧರ್ ತನ್ನ ಪೂಲ್ ಎಚ್ ಪಂದ್ಯದಲ್ಲಿ ರಾಜಸ್ಥಾನ ಪೊಲೀಸ್ ತಂಡವನ್ನು 19-2 ಅಂತರದಿಂದ ಸೋಲಿಸಿತು.