37th National Games – ಗೋವಾದಲ್ಲಿ ನಡೆಯಲಿದೆ 2023ರ ರಾಷ್ಟ್ರೀಯ ಕ್ರೀಡಾಕೂಟ..!
2023ರಲ್ಲಿ ನಡೆಯಲಿರುವ 37ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಗೊವಾ ರಾಜ್ಯ ಆತಿಥ್ಯ ವಹಿಸಲಿದೆ.
ಈ ವಿಚಾರವನ್ನು ಭಾರತೀಯ ಒಲಿಂಪಿಕ್ ಸಂಸ್ಥೆ ಅಧಿಕೃತವಾಗಿ ಹೇಳಿದೆ.
2023ರ ಅಕ್ಟೋಬರ್ ನಲ್ಲಿ ರಾಷ್ಟ್ರೀಯ ಕ್ರೀಡಾಕೂಟವನ್ನು ಸಂಘಟಿಸಲಾಗುವುದು. ಗುಜರಾತ್ ನಲ್ಲಿ ನಡೆಯುತ್ತಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಗೋವಾ ಗೆ ಕ್ರೀಡಾ ಧ್ವಜವನ್ನು ಹಸ್ತಾಂತರ ಮಾಡಲಾಗುವುದು.
ಗೋವಾದಲ್ಲಿ 2008ರಲ್ಲೇ ರಾಷ್ಟ್ರೀಯ ಕ್ರೀಡಾಕೂಟ ನಡೆಯಬೇಕಿತ್ತು. ಆದ್ರೆ ಮೂಲಭೂತ ಸೌಕರ್ಯಗಳಿಂದ ಕ್ರೀಡಾಕೂಟವನ್ನು ಸಂಘಟಿಸಲು ಸಾಧ್ಯವಾಗಿರಲಿಲ್ಲ. 2018 ಮತ್ತು 2019 ಕ್ರೀಡಾಕೂಟ ಕೂಡ ಮುಂದೂಡಲಾಗಿತ್ತು. ಬಳಿಕ 2002ರಲ್ಲಿ ಕೋವಿಡ್ ಅಡ್ಡಿಯನ್ನುಂಟು ಮಾಡಿತ್ತು. ಹಾಗೇ 36ನೇ ಅಂದ್ರೆ 2022ರ ರಾಷ್ಟ್ರೀಯ ಕ್ರೀಡಾಕೂಟದ ಆಯೋಜನೆ ಕೂಡ ಗೋವಾದಿಂದ ತಪ್ಪಿ ಹೋಗಿತ್ತು. ಕೊನೆಯ ಕ್ಷಣದಲ್ಲಿ ಗುಜರಾತ್ ನಲ್ಲಿ ಆಯೋಜನೆ ಮಾಡಲಾಗಿತ್ತು. ಅಕ್ಟೋಬರ್ 12ರಂದು ಗುಜರಾತ್ ರಾಷ್ಟ್ರೀಯ ಕ್ರೀಡಾಕೂಟ ಮುಕ್ತಾಯಗೊಳ್ಳಲಿದೆ.
ಆದ್ರೆ ಗೋವಾ ರಾಷ್ಟ್ರೀಯ ಕ್ರೀಡಾಕೂಟದ ದಿನಾಂಕವನ್ನು ಇನ್ನು ಪ್ರಕಟಿಸಿಲ್ಲ. ಸೆಪ್ಟಂಬರ್ 23ರಿಂದ ಅಕ್ಟೋಬರ್ 8ರವರೆಗೆ 19ನೇ ಏಷ್ಯನ್ ಕ್ರೀಡಾಕೂಟ ನಡೆಯಲಿದೆ. ಹೀಗಾಗಿ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯು ಸದ್ಯದಲ್ಲೇ ದಿನಾಂಕವನ್ನು ಕೂಡ ಪ್ರಕಟಿಸಲಿದೆ.