36 ನೇ ರಾಷ್ಟ್ರೀಯ ಕ್ರೀಡಾ ಕೂಟ: ಉತ್ಕರ್ಷ ಕೂಟ ದಾಖಲೆ, ಹಶೀಕಾಗೆ ಬಂಗಾರ
36 ನೇ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಕರ್ನಾಟಕದ ಈಜು ಪಟುಗಳು ಸಾಧನೆ ಮುಂದುವರೆಸಿದ್ದಾರೆ. ರಾಜ್ಯದ ಉತ್ಕರ್ಷ ಸಂತೋಷ್ ಪಾಟೀಲ್, ಹಶೀಕಾ ರಾಮಚಂದ್ರ ಬಂಗಾರದ ಸಾಧನೆ ಮಾಡಿದ್ದಾರೆ.
ಮಹಿಳೆಯರ 400 ಮೀಟರ್ ಮೆಡ್ಲಿ ವಿಭಾಗದಲ್ಲಿ ಹಶಿಕಾ ರಾಮಚಂದ್ರ 5:09.03 ಸೆಕೆಂಡ್ ಗಳಲ್ಲಿ ಕ್ರಮಿಸಿ ಪ್ರಥಮ ಸ್ಥಾನ ಪಡೆದರು. ಇದೇ ವಿಭಾಗದ ಬೆಳ್ಳಿ ಮಧ್ಯ ಪ್ರದೇಶದ ರಿಚಾ ಮಿಶ್ರಾ, ಕನ್ಯಾ ಎನ್ ಗೆ ಕಂಚು ಪಡೆದಿದ್ದಾರೆ.
ಪುರುಷರ 200 ಮೀಟರ್ ಬ್ಯಾಕ್ ಸ್ಟ್ರೋಕ್ ವಿಭಾಗದಲ್ಲಿ ಉತ್ಕರ್ಷ ಸಂತೋಷ ಪಾಟೀಲ್ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ. ಇವರು ನಿಗದಿತ ದೂರವನ್ನು 2:05.08 ಸೆಕೆಂಡ್ ಗಳಲ್ಲಿ ಕ್ರಮಿಸಿದರು. ಅಲ್ಲದೆ ಕೇರಳಾದ ಮಧು ಪಿ.ಎಸ್ ಅವರ ದಾಖಲೆ ಅಳಿಸಿದರು. ಇದೇ ವಿಭಾಗದ ಬೆಳ್ಳಿ ಮಧ್ಯ ಪ್ರದೇಶದ ಅದ್ವೇತ್ ಪಾಲಾದಾರೆ, ಕಂಚು ರಾಜ್ಯದ ಶಿವಾ ಎಸ್ ಪಡೆದು ಕೊಂಡಿದ್ದಾರೆ.
50 ಮೀಟರ್ ಫ್ರಿ ಸ್ಟೈಲ್ ಪುರುಷರ ವಿಭಾಗದಲ್ಲಿ ಶ್ರೀಹರಿ ನಟರಾಜ್ 23.42 ಸೆಕೆಂಡ್ ಗಳಲ್ಲಿ ಕ್ರಮಿಸಿ ಬಂಗಾರ ಪಡೆದರು. ಈ ವಿಭಾಗದ ಬೆಳ್ಳಿ ತಮಿಳು ನಾಡಿನ ಪವನ್ ಗುಪ್ತಾ ಪಾಲಾದರೆ, ರುದ್ರಾಂಶ್ ಮನೋಜ್ ಮಿಶ್ರಾ ಕಂಚು ತಮ್ಮದಾಗಿಸಿಕೊಂಡಿದ್ದಾರೆ.
36th National Games, Swimming, Karnataka, Record,