ಶನಿವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಇಬ್ಬರೂ ಆಲ್ ರೌಂಡರ್ ಆಟಗಾರರು ಶಿವಂ ಮಾವಿ ವಿರುದ್ಧ ಬಿರುಸಿನ ಬ್ಯಾಟಿಂಗ್ ನಡೆಸಿದರು. 2018ರಲ್ಲಿ ಅಂಡರ್-19 ವಿಶ್ವಕಪ್ ತಂಡದ ಭಾಗವಾಗಿದ್ದ ಬೌಲರ್ ಶಿವಂ ಮಾವಿ ಅವರ 19ನೇ ಓವರ್ ಇಡೀ ಪಂದ್ಯದ ದಿಕ್ಕನ್ನೇ ಬದಲಿಸಿತು.
ಮಾರ್ಕಸ್ ಸ್ಟೊಯಿನಿಸ್ ಬಿರುಸಿನ ಬ್ಯಾಟಿಂಗ್ ಗೆ ಹೆಸರುವಾಸಿ. ಇವರು ಶಿವಂ ವಿರುದ್ಧ ಸತತ ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಮುಂದಿನ ಎಸೆತದಲ್ಲಿ ಸ್ಟೊಯಿನಿಸ್ ಔಟಾದರು. ಇವರು ಔಟಾದ ನಂತರ ಬ್ಯಾಟಿಂಗ್‌ಗೆ ಬಂದ ಜೇಸನ್ ಹೋಲ್ಡರ್ ಕೂಡ ಬೌಲರ್ ಮೇಲೆ ಯಾವುದೇ ಕರುಣೆ ತೋರದೆ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸಿದರು.

ಈ ಮೂಲಕ ಕೋಲ್ಕತ್ತಾ 19ನೇ ಓವರ್‌ನಲ್ಲಿ ಒಟ್ಟು ಐದು ಸಿಕ್ಸರ್‌ಗಳೊಂದಿಗೆ 30 ರನ್‌ಗಳನ್ನು ನೀಡಿ ಕೈ ಸುಟ್ಟುಕೊಟ್ಟುಕೊಂಡಿತು. ಈ ಓವರ್‌ನ ಪರಿಣಾಮ ಕೋಲ್ಕತ್ತಾ ಗೆಲುವಿಗೆ 177 ರನ್‌ಗಳ ಕಠಿಣ ಗುರಿ ನೀಡಲಾಯಿತು.
ಮಾರ್ಕಸ್ ಸ್ಟೊಯಿನಿಸ್ 19ನೇ ಓವರ್ ಆರಂಭಕ್ಕೂ ಮುನ್ನ 10 ಎಸೆತಗಳಲ್ಲಿ 10 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಈ ಋತುವಿನಲ್ಲಿ ಅವರು ತಮ್ಮ ಕ್ಷಮತೆಗೆ ತಕ್ಕ ಆಟವನ್ನು ಆಡಿಲ್ಲ. ಆದರೆ, 19ನೇ ಓವರ್ ಆರಂಭವಾದ ಕೂಡಲೇ ಈ ಕಾಂಗರೂ ಬ್ಯಾಟ್ಸ್ ಮನ್ ಅಬ್ಬರಿಸಿದರು.
ಸ್ಟೊಯಿನಿಸ್ ಸತತ ಮೊದಲ, ಎರಡನೇ ಮತ್ತು ಮೂರನೇ ಸಿಕ್ಸರ್ ಬಾರಿಸಿದರು. ಯುವರಾಜ್ ಸಿಂಗ್ ಅವರಂತೆ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಬಲ್ಲರಾ ಎಂದೇ ಎಲ್ಲರ ಪ್ರಶ್ನೆ ಆಗಿತ್ತು. ಆದರೆ, ನಾಲ್ಕನೇ ಎಸೆತದಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿ ಶ್ರೇಯಸ್ ಅಯ್ಯರ್ ಗೆ ಕ್ಯಾಚಿತ್ತು ನಿರ್ಗಮಿಸಿದರು.

sportskarnataka
ಕ್ರೀಸ್ ಗೆ ಹೋಲ್ಡರ್ ಅವರು ಆಗಮಿಸಿದ ತಕ್ಷಣ KKR ನ ಈ ಚಿಂತೆ ಮತ್ತಷ್ಟು ಹೆಚ್ಚಿತು. ಈ ಸ್ಟಾರ್ ಆಟಗಾರ ಸಹ ದೊಡ್ಡ ಹೊಡೆತಗಳಿಂದ ಹೆಸರುವಾಸಿಯಾದ ಆಟಗಾರ. ಇವರು, ಸ್ಟೊಯಿನಿಸ್ ಅವರಂತೆ ಆಕ್ರಮಣಕಾರಿ ಶೈಲಿಯಲ್ಲಿ ಆಡುತ್ತಾ, ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದರು. 19ನೇ ಓವರ್‌ನಲ್ಲಿ ಶಿವಂ ಮಾವಿಗೆ ಬೌಲಿಂಗ್ ಮಾಡಿದ್ದು ಕೋಲ್ಕತ್ತಾಗೆ ಮುಳುವಾಯಿತು.