ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿನ ಓಟಕ್ಕೆ ಯುಪಿ ತಂಡ ಬ್ರೇಕ್ ಹಾಕಿದೆ.
ಇಲ್ಲಿನ ಡಿ.ವೈಘಿ.ಪಾಟೀಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ಗಳಲ್ಲಿ 127 ರನ್ಗಳಿಗೆ ಆಲೌಟ್ ಆಯಿತು. ಯುಪಿ ತಂಡ 19.3 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 129 ರನ್ ಕಲೆ ಹಾಕಿತು.
ತಿರುವು ಪಡೆಯುತ್ತಿದ್ದ ಪಿಚ್ನಲ್ಲಿ ಸ್ಪಿನ್ ಮ್ಯಾಜಿಕ್ ಮಾಡಿದ ಸೋಫಿ ಎಕ್ಲಾಸ್ಟೋನ್ (15ಕ್ಕೆ 3) ಮುಂಬೈ ತಂಡವನ್ನು 127 ರನ್ಗಳಿಗೆ ಕಟ್ಟಿಹಾಕಲು ನೆರವಾದರು.20 ಓವರ್ಗಳಲ್ಲಿ 18 ಓವರ್ಗಳನ್ನು ಸ್ಪಿನ್ನರ್ಗಳು ಹಾಕಿದ್ದು ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ದಾಖಲೆಯಾಯಿತು.
ಮುಂಬೈ ಪರ ಹೇಯ್ಲಿ ಮ್ಯಾಥೀವ್ಸ್ 35, ನಾಯಕಿ ಹರ್ಮನ್ಪ್ರೀತ್ ಕೌರ್ 25, ಇಸ್ಸಿ ವಾಂಗ್ 32, ರನ್ ಗಳಿಸಿದರು, ಉಳಿದ ಬ್ಯಾಟರ್ಗಳು ಒಂದಂಕಿ ರನ್ ಹೊಡೆದರು.
ಯುಪಿ ಪರ ಸೋಫಿ ಎಕ್ಲಾಸ್ಟೋನ್ 15ಕ್ಕೆ 3, ದೀಪ್ತಿ ಶರ್ಮಾ ಹಾಗೂ ರಾಜೇಶ್ವರಿ ಗಾಯಕ್ವಾಡ್ ತಲಾ 2 ವಿಕೆಟ್ ಪಡೆದರು.
128 ರನ್ ಗುರಿ ಬೆನ್ನತ್ತಿದ ಯುಪಿ ತಂಡ ದೇವಿಕಾ ವೈದ್ಯ 1, ಅಲಿಸ್ಸಾ ಹೀಲಿ 8, ಕಿರಣ್ ನಾವ್ಗೆರೆ 12 ರನ್ ಗಳಿಸಿ ಆಘಾತ ಅನುಭವಿಸಿದರು.
ತಾಹೀಲಾ ಮೆಕ್ಗ್ರೆತ್ (38 ರನ್), ಗ್ರೇಸ್ ಹ್ಯಾರಿಸ್ (39 ರನ್) 34 ರನ್ಗಳ ಜತೆಯಾಟ ತಂಡವನ್ನು ಗೆಲುವಿನ ದಡ ಸೇರಿಸಿತು. ದೀಪ್ತಿ ಶರ್ಮಾ ಅಜೇಯ 13, ಸೋಪಿ ಎಕ್ಲಾಸ್ಟೋನ್ ಅಜೇಯ 16 ರನ್ ಗಳಿಸಿದರು. ಇನ್ನು 3 ಎಸೆತ ಬಾಕಿ ಇರುವಂತೆ ಯುಪಿ ತಂಡ ಗೆಲುವಿನ ನಗೆ ಬೀರಿತು. ಆಲ್ರೌಂಡ್ ಪ್ರದರ್ಶನ ನೀಡಿದ ದೀಪ್ತಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.