ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ತಂಡ ಸೋಲಿನೊಂದಿಗೆ ಟೂರ್ನಿಯಿಂದ ಹೊರಬಿದ್ದಿದೆ. 8 ಪಂದ್ಯಗಳಿಂದ ಆರ್ಸಿಬಿ 6 ಪಂದ್ಯಗಳಲ್ಲಿ ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ ಎರಡನೆ ಸ್ಥಾನ ಪಡೆದ ಮುಂಬೈ ಇಂಡಿಯನ್ಸ್ ಯುಪಿ ತಂಡವನ್ನು ಎದುರಿಸಲಿದೆ.
ಇಲ್ಲಿನ ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 125 ರನ್ ಕಲೆ ಹಾಕಿತು. ಮುಂಬೈ ತಂಡ 16.3 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿತು.
ಆಲ್ರೌಂಡರ್ ಕೆರ್ರ್ ದಾಳಿಗೆ ಆರ್ಸಿಬಿ ತತ್ತರಿಸಿತು. ಆರ್ಸಿಬಿ ಪರ ಸ್ಮತಿ ಮಂಧಾನಾ 24, ಸೋಪಿ ಡಿವೈನ್ 0, ಎಲ್ಲಿಸಿ ಪೆರ್ರಿ 29, ಹೀಥರ್ ನೈಟ್ 12, ಕನ್ನಿಕಾ ಅಹುಜಾ 12, ರಿಚಾ ಗೋಷ್ 29, ಶ್ರೇಯಾಂಕಾ ಪಾಟೀಲ್ 4, ಮೇಘಾನ್ ಸ್ಕಟ್, ದೀಶಾ ಕಾಸತ್ ತಲಾ 2 ರನ್ ಗಳಿಸಿದರು.
ಮುಂಬೈ ಪರ ಅಮೆಲಿಯಾ ಕೆರ್ರ್ 22ಕ್ಕೆ 3, ನಾಟ್ ಸೀವರ್ 24ಕ್ಕೆ2, ಇಸ್ಸಿ ವಾಂಗ್ 26ಕ್ಕೆ 2 ವಿಕೆಟ್ ಪಡೆದರು.
ಸುಲಭಗುರಿ ಬೆನ್ನತ್ತಿದ ಹೇಯ್ಲಿ ಮ್ಯಾಥೀವ್ಸ್ 24, ಯಸ್ತಿಕಾ ಭಾಟಿಯಾ 30, ನಾಟ್ ಸೀವರ್ 13, ನಾಯಕಿ ಹರ್ಮನ್ಪ್ರೀತ್ ಕೌರ್ 2, ಅಮೆಲಿಯಾ ಕೆರ್ರ್ ಅಜೇಯ 31 ರನ್, ಪೂಜಾ ವಸಾಕರ್ 19 ರನ್ ಹೊಡೆದರು.
ಆರ್ಸಿಬಿ ಪರ ಕಿನ್ನಿಕಾ ಅಹುಜಾ 2 ವಿಕೆಟ್, ಮೆಘಾನ್ ಸ್ಕಟ್, ಶ್ರೇಯಾಂಕಾ ಪಾಟೀಲ್, ಎಲ್ಲಿಸ್ಸೆ ಪೆರ್ರಿಘಿ, ಸೋಬಾನಾ ಆಶಾ ತಲಾ 1 ವಿಕೆಟ್ ಪಡೆದರು.
ಮುಂಬೈ ವಿರುದ್ಧ ಡೆಲ್ಲಿಗೆ ಜಯ
ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು.ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿತು. ಡೆಲ್ಲಿ ಕ್ಯಾಪಟಿಲ್ಸ್ 9 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 110 ರನ್ ಕಲೆ ಹಾಕಿತು.