ಮುಂದಿನ ವರ್ಷ ನಡೆಯಲಿರುವ ಮಹಿಳೆಯರ T20 ವಿಶ್ವಕಪ್ ಪಂದ್ಯಾವಳಿಗೆ ಭಾರತ(Team India) ಮಹಿಳಾ ತಂಡವನ್ನ ಪ್ರಕಟಿಸಲಾಗಿದ್ದು, ತಂಡದ ವೇಗಿ ಶಿಖಾ ಪಾಂಡೆ(Shikha Pandey) 14 ತಿಂಗಳುಗಳ ಟೀಂ ಇಂಡಿಯಾಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ.
ಆಲ್ ಇಂಡಿಯಾ ಸೆಲೆಕ್ಷನ್ ಕಮಿಟಿಯೂ ಟಿ20 ವಿಶ್ವಕಪ್ ಟೂರ್ನಿ ಹಾಗೂ ಸೌತ್ ಆಫ್ರಿಕಾದಲ್ಲಿ ನಡೆಯಲಿರುವ ತ್ರಿಕೋನ ಸರಣಿಗೂ ಟೀಂ ಇಂಡಿಯಾವನ್ನ ಪ್ರಕಟಿಸಿದೆ. ಮಹಿಳೆಯರ ಟಿ20 ವಿಶ್ವಕಪ್ ಪಂದ್ಯಾವಳಿ 2023ರ ಫೆಬ್ರವರಿ 10ರಿಂದ ಆರಂಭವಾಗಲಿದ್ದು, ಭಾರತ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನ ಎದುರಿಸಲಿದೆ. ಭಾರತ ವನಿತೆಯರ ತಂಡ ಗ್ರೂಪ್ 2ನಲ್ಲಿ ಸ್ಥಾನ ಪಡೆದಿದ್ದು, ಇಂಗ್ಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್ ಹಾಗೂ ಐರ್ಲೆಂಡ್ ತಂಡಗಳು ಸಹ ಈ ಗುಂಪಿನಲ್ಲಿವೆ.
T20 ವಿಶ್ವಕಪ್ಗೆ ಭಾರತ ಮಹಿಳಾ ತಂಡ:
ಹರ್ಮನ್ಪ್ರೀತ್ ಕೌರ್(ನಾಯಕಿ), ಸ್ಪೃತಿ ಮಂದಾನ(ಉಪನಾಯಕಿ), ಶಫಾಲಿ ವರ್ಮ, ಯಾಸ್ತಿಕಾ ಬಾಟಿಯಾ, ರಿಚಾ ಘೋಷ್, ಜಮೈಮಾ ರೋಡ್ರಿಗಸ್, ಹರ್ಲಿನ್ ಡಿಯೊಲ್, ದೀಪ್ತಿ ಶರ್ಮ, ದೇವಿಕಾ ವೈದ್ಯ, ರಾಧಾ ಯಾದವ್, ರೇಣುಕಾ ಥಾಕೂರ್, ಅಂಜಲಿ ಸರ್ವಾಣಿ, ಪೂಜಾ ವಸ್ತ್ರಾರ್ಕರ್(ಫಿಟ್ ಆದಲ್ಲಿ), ರಾಜೇಶ್ವರಿ ಗಾಯಕ್ವಾಡ್, ಶಿಖಾ ಪಾಂಡೆ.
ರಿಸರ್ವ್ ಆಟಗಾರ್ತಿಯರು: ಸ್ನೇಹ ರಾಣಾ, ಸಬ್ಬಿನೇನಿ ಮೇಘನಾ ಹಾಗೂ ಮೇಘನಾ ಸಿಂಗ್.
T20 ವಿಶ್ವಕಪ್ನಲ್ಲಿ ಭಾರತದ ಪಂದ್ಯಗಳು
ಭಾರತ v ಪಾಕಿಸ್ತಾನ – ಫೆಬ್ರವರಿ 12
ಭಾರತ v ವೆಸ್ಟ್ ಇಂಡೀಸ್ – ಫೆಬ್ರವರಿ 15
ಭಾರತ v ಇಂಗ್ಲೆಂಡ್ – ಫೆಬ್ರವರಿ 18
ಭಾರತ v ಐರ್ಲೆಂಡ್ – ಫೆಬ್ರವರಿ 20
T20 ವಿಶ್ವಕಪ್ ಆರಂಭಕ್ಕೂ ಮುನ್ನ ಭಾರತೀಯ ಆಟಗಾರ್ತಿಯರು ಸೌತ್ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ನಡುವಿನ ತ್ರಿಕೋನ ಸರಣಿಯಲ್ಲಿ ಭಾಗವಹಿಸಲಿದ್ದು, ಈ ಸರಣಿಯೂ ಜನವರಿ 19ರಿಂದ ಫೆಬ್ರವರಿ 2ರವರೆಗೆ ನಡೆಯಲಿದೆ.
ತ್ರಿಕೋನ ಸರಣಿಗೆ ಭಾರತ ತಂಡ:
ಹರ್ಮನ್ಪ್ರೀತ್ ಕೌರ್(ನಾಯಕಿ), ಸ್ಮೃತಿ ಮಂದಾನ, ಯಾಸ್ತಿಕಾ ಭಾಟಿಯಾ, ಜಮೀಮಾ ರೋಡ್ರಿಗಸ್, ಹರ್ಲೆನ್ ಡಿಯೊಲ್, ದೀಪ್ತಿ ಶರ್ಮ, ದೇವಿಕಾ ವೈದ್ಯ, ರಾಜೇಶ್ವರಿ ಗಾಯಕ್ವಾಡ್, ರಾಧಾ ಯಾದವ್, ರೇಣುಕಾ ಥಾಕೂರ್, ಮೇಘನಾ ಸಿಂಗ್, ಅಂಜಲಿ ಸರ್ವಾಣಿ, ಸುಷ್ಮಾ ವರ್ಮ, ಅಮನ್ಜೋತ್ ಕೌರ್, ಪೂಜಾ ವಸ್ತ್ರಾಕರ್(ಫಿಟ್ ಆದಲ್ಲಿ), ಸಬ್ಬಿನೇನಿ ಮೇಘನಾ, ಸ್ನೇಹ ರಾಣಾ, ಶಿಖಾ ಪಾಂಡೆ.
ತ್ರಿಕೋನ ಸರಣಿ ವೇಳಾಪಟ್ಟಿ:
ಸೌತ್ ಆಫ್ರಿಕಾ v ಭಾರತ – ಜನವರಿ 19
ಭಾರತ v ವೆಸ್ಟ್ ಇಂಡೀಸ್ – ಜನವರಿ 23
ಸೌತ್ ಆಫ್ರಿಕಾ v ಭಾರತ – ಜನವರಿ 28
ವೆಸ್ಟ್ ಇಂಡೀಸ್ v ಭಾರತ – ಜನವರಿ 30
ಫೈನಲ್ – ಫೆಬ್ರವರಿ 2