Wimbledon 2022 – ರಫೆಲ್ ನಡಾಲ್ ಶುಭಾರಂಭ

ಸ್ಪೇನ್ ನ ಗೂಳಿ ರಫೆಲ್ ನಡಾಲ್ ಅವರು ವರ್ಷದ ಮೂರನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಯತ್ತ ಚಿತ್ತವನ್ನಿಟ್ಟಿದ್ದಾರೆ.
ಆಲ್ ಇಂಗ್ಲೆಂಡ್ ಕ್ಲಬ್ ನಲ್ಲಿ ನಡೆಯುತ್ತಿರುವ ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ರಫೆಲ್ ನಡಾಲ್ ಅವರು ಶುಭಾರಂಭ ಮಾಡಿದ್ದಾರೆ.
ಮೊದಲ ಸುತ್ತಿನ ಪಂದ್ಯದಲ್ಲಿ ರಫೆಲ್ ನಡಾಲ್ 6-4, 6-3, 3-6, 6-4ರಿಂದ ಫ್ರಾನ್ಸಿಸ್ಕೊ ಸೆರುಂಡೋಲ್ ಅವರನ್ನು ಪರಾಭವಗೊಳಿಸಿದ್ರು. Wimbledon 2022 -Rafael Nadal celebrates after winning his first round matc
ಈಗಾಗಲೇ ರಫೆಲ್ ನಡಾಲ್ ಅವರು ಈ ವರ್ಷದ ಆಸ್ಟ್ರೇಲಿಯನ್ ಓಪನ್ ಮತ್ತು ಫ್ರೆಂಚ್ ಓಪನ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಅಲ್ಲದೆ ದಾಖಲೆಯ 22 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ರೋಜರ್ ಫೆಡರರ್ ಮತ್ತು ನೊವಾಕ್ ಜಾಕೊವಿಕ್ ಅವರು ತಲಾ 20 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದೀಗ ರಫೆಲ್ ನಡಾಲ್ ಅವರು ವಿಂಬಲ್ಡನ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. ಅಲ್ಲದೆ ದಾಖಲೆಯ 23 ನೇ ಗ್ರ್ಯಾಂಡ್ ಪ್ರಶಸ್ತಿ ಗೆಲ್ಲುವ ತವಕದಲ್ಲಿದ್ದಾರೆ.
ಈ ನಡುವೆ, ರಫೆಲ್ ನಡಾಲ್ ಅವರು 2019ರಿಂದ ವಿಂಬಲ್ಡನ್ ಟೂರ್ನಿಯನ್ನು ಅಡಿಲ್ಲ. ಗಾಯದ ಕಾರಣದಿಂದಾಗಿ ನಡಾಲ್ ಕಳೆದ ಮೂರು ವರ್ಷದಿಂದ ವಿಂಬಲ್ಡನ್ ಟೂರ್ನಿಯಿಂದ ದೂರವೇ ಉಳಿದಿದ್ದರು.
ಪುರುಷರ ಇನ್ನೊಂದು ಸಿಂಗಲ್ಸ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ನಿಕ್ ಕೈರ್ಗಿಸೊ ಅವರು 3-6, 6-1, 7-5, 6-7, 7-5ರಿಂದ ಬ್ರಿಟನ್ ನ ಪಾಲ್ ಜುಬ್ ಅವರನ್ನು ಮಣಿಸಿದ್ರು.