ಸರ್ಬಿಯಾದ ತಾರಾ ಟೆನಿಸ್ ಆಟಗಾರ ನವೋಕ್ ಜೋಕೊವಿಕ್ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಈ ಮೂಲಕ 46ನೇ ಬಾರಿಗೆ ಗ್ರ್ಯಾನ್ ಸ್ಲಾಮ್ ಸೆಮಿಸ್ಗೆ ತಲುಪಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ನಲ್ಲಿ ಆ್ಯಂಡ್ರೆ ರುಬ್ಲೆವ್ ವಿರುದ್ಧ 4-6, 6-1, 6-4, 6-3 ಅಂಕಗಳಿಂದ ಮಣಿಸಿದರು.
ಮತ್ತೊಂದು ಸಿಂಗಲ್ಸ್ನಲ್ಲಿ ಸ್ಪೇನ್ನ ಆಲ್ಕರಾಜ್ ಪ್ರಿ ಕ್ವಾರ್ಟರ್ನಲ್ಲಿ ಇಟಲಿಯ ಬೆರೆಟ್ಟಿನಿ ವಿರುದ್ಧ 3-6, 6-3, 6-3 ಅಂಕಗಳಿಂದ ಗೆದ್ದು ಕ್ವಾರ್ಟರ್ ಪ್ರವೇಶಿಸಿದರು.
ಮಹಿಳಾ ಸಿಂಗಲ್ಸ್ನಲ್ಲಿ ವಿಶ್ವದ 6ನೇ ರ್ಯಾಂಕ್ ಆಟಗಾರ್ತಿ ಒನ್ಸ್ ಜಾಬೆರ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ತಲುಪಿದ್ದಾರೆ.ಹಾಲಿ ಚಾಂಪಿಯನ್ ರೈಬಾಕಿನಾ ಅವರನ್ನು 6-7(5-7), 6-4, 6-4 ಮಣಿಸಿ ಆಘಾತ ನೀಡಿದರು. 2022ರಲ್ಲಿ ರೈಬಾಕಿನಾ ಅವರನ್ನು ಜಾಬೆರ್ ಅವರನ್ನು ಸೋಲಿಸಿದ್ದರು.
ಮೊದಲ ಬಾರಿ ವಿಂಬಲ್ಡನ್ ಪ್ರಶಸ್ತಿ ಗೆಲ್ಲುವ ವಿಶ್ವದ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್ ಅವರ ಕನಸು ಈ ಬಾರಿ ಭಗ್ನಗೊಂಡಿದೆ.
ಇತ್ತೀಚೆಗೆ ಫ್ರೆಂಚ್ ಓಪನ ಟೂರ್ನಿ ಗೆಲ್ಲುವ ಜತಗೆ 4 ಗ್ರ್ಯಾನ್ ಸ್ಲಾಮ್ ಗೆದ್ದು ಬೀಗಿದ್ದ ಸ್ವಿಯಾಟೆಕ್ ಮತ್ತೊಮ್ಮೆ ವಿಂಬಲ್ಡನ್ ಪ್ರಶಸ್ತಿ ಬರ ಎದುರಿಸುತ್ತಿದ್ದಾರೆ. ಮಹಿಳಾ ಸಿಂಗಲ್ಸ್ ವಿಭಾಗ ದಕ್ವಾರ್ಟರ್ನಲ್ಲಿ ಉಕ್ರೇನ್ನ ಶ್ರೇಯಾಂಕ ರಹಿತ ಎಲಿನಾ ಸ್ವಿಟೋಲಿನಾ ವಿರುದ್ಧ 5-7, 6-7(5/7), 6-2 ಅಂಕಗಳಿಂದ ಮಣಿದರು.
ಕ್ವಾರ್ಟರ್ಗೆ ಬೋಪಣ್ಣ, ಎಬ್ಡೆನ್ ಜೋಡಿ
ಭಾರತ ಅನುಭವಿ ಆಟಗಾರ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಡಬಲ್ಸ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಪುರುಷರ ಡಬಲ್ಸ್ನ 2ನೇ ಸುತ್ತಿನಲ್ಲಿ ಭಾರತ – ಆಸಿಸ್ ಜೋಡಿ ನೆದರ್ಲ್ಯಾಂಡ್ಸ್ನ್ ಡೇವಿಡ ಪೆಲ್- ಅಮೆರಿಕಾದ ರೀಸ್ ಸ್ಟಾಲ್ಡರ್ ವಿರುದ್ಧ 7-5, 4-6 7-6 (10/5) ಅಂಕಗಳಿಂದ ಗೆದ್ದರು.