ಅಗ್ರ ಆಟಗಾರ ರೋಹನ್ ಬೋಪಣ್ಣ ಮತ್ತು ಮ್ಯಾಥೀವ್ ಎಬ್ಡೆನ್ ಜೋಡಿ ವಿಂಬಲ್ಡನ್ ಟೆನಿಸ್ ಟೂರ್ನಿಯ ಸೋತು ಟೂರ್ನಿಯಿಂದ ಹೊರಬಿದಿದೆ.
ಗುರುವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಸೆಮಿಫೈನಲ್ನಲ್ಲಿ ರೋಹನ್ ಬೋಪಣ್ಣ ಎಬ್ಡನ್ ಜೋಡಿ ಅಗ್ರ ಶ್ರೇಯಾಂಕಿತ ವೆಸ್ಲೆ ಕೂಲ್ಹೊಸ್ ಮತ್ತು ನೀಲ್ ಸ್ಕೂಪ್ಸ್ಕಿ ವಿರುದ್ಧ 5-7, 4-6 ಅಂಕಗಳಿಂದ ಮಣಿದರು.
24 ವರ್ಷದ ಜೆಕ್ ಗಣರಾಜ್ಯದ ಮಾರಕೆಟಾ ವೊನಡ್ರೊಸೊವಾ ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದಾರೆ. ಈ ಮೂಲಕ ಓಪನ್ ಟೂರ್ನಿಯಲ್ಲಿ ಫೈನಲ್ ತಲುಪಿದ ಮೊದಲ ಶ್ರೇಯಾಂಕ ರಹಿತ ಆಟಗಾರ್ತಿ ಎನಿಸಿದ್ದಾರೆ.
ಗುರುವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್ನಲ್ಲಿ ಮಾರಕೆಟಾ ವೊನಡ್ರೊಸೊವಾ ಎದುರಾಳಿ ಉಕ್ರೇನ್ನ ಎಲಿನಾ ಸ್ವಿಟೊಲಿನಾ ವಿರುದ್ಧ 6-3, 6-3 ಅಂಕಗಲಳಿಂದ ಗೆದ್ದರು.
74 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ವಿಶ್ವದ 42ನೇ ರ್ಯಾಂಕ್ ಆಟಗಾರ್ತಿ ಸ್ವಿಟೊಲಿನಾ ವಿರುದ್ಧ ಅಮೋಘ ಗೆಲುವು ದಾಖಲಿಸಿದರು.
ಪುರುಷರ ಸಿಂಗಲ್ಸ್ನಲ್ಲಿ ಕಾರ್ಲೊಸ್ ಅಲ್ಕರಾಜ್ ಎದುರಾಳಿ ಹೋಲ್ಗರ್ ರೂನ್ ವಿರುದ್ಧ 7-6 (7-3), 6-4, 6-4 ಅಂಕಗಳಿಂದ ಮಣಿಸಿದರು. ಅಗ್ರ ಆಟಗಾರ ಮೆಡ್ಡೇವ್ ಅವರನ್ನು ಎದುರಿಸಲಿದ್ದಾರೆ.