ಭಾರತದ ರೋಹನ್ ಬೋಪಣ್ಣ ಮತ್ತು ಅವರ ಡಬಲ್ಸ್ ಜತೆಗಾರ ಮ್ಯಾಥೀವ್ ಎಬ್ಡೆನ್ ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.
ಟೂರ್ನಿಯಲ್ಲಿ ಆರನೆ ಶ್ರೇಯಾಂಕಿತವಾಗಿರುವ ಭಾರತ ಆಸ್ಟ್ರೇಲಿಯಾ ಜೋಡಿ ಅರ್ಜೆಂಟಿನಾ ಜೋಡಿ ಗುಇಲ್ಲಮ್ರೊ ಮತ್ತು ಥಾಮಸ್ ಎಟ್ಚೆವೆರ್ರಿ ವಿರುದ್ಧ 6-2,6-7, (5-7), 7-6(10-8) ಅಂಕಗಳಿಂದ ಗೆದ್ದರು.
43 ವರ್ಷದ ಬೋಪಣ್ಣ ಮತ್ತು 35 ವರ್ಷದ ಎಬ್ಡೆನ್ ಕಳೆದ ವರ್ಷ ಎಟಿಪಿ ಎರಡು ಎಟಿಪಿ ಪ್ರಶಸ್ತಿ ಗೆದ್ದಿದ್ದರು. ಎರಡನೆ ಸುತ್ತಿನಲ್ಲಿ ಬೋಪಣ್ಣ ಜೋಡಿ ಜಾಕೊಬ್ ಫಿಯರನ್ಲಿ ಮತ್ತು ಜೋಹಾನಸ್ಸ್ ಅವರನ್ನು ಇಂದು ಎದುರಿಸಲಿದ್ದಾರೆ.
ಬೋಪಣ್ಣ ಮತ್ತು ಎಬ್ಡೆನ್ ಜೋಡಿ ಕಳೆದ ಬ್ರವರಿಯಲ್ಲಿ ಕತಾರ್ ಓಪನ್ ಗೆದ್ದಿದ್ದರು. ನಂತರ ಮಾರ್ಚ್ನಲ್ಲಿ ಮಾಸ್ಟರ್ ಸಿರೀಸ್ ಟೂರ್ನಿ ಗೆದ್ದು ಅತಿ ಹಿರಿಯ ಆಟಗಾರ ಎನಿಸಿದ್ದರು.