ಅತಿಥೇಯ ಆಸ್ಟ್ರೇಲಿಯಾ(Australia) ಹಾಗೂ ವೆಸ್ಟ್ ಇಂಡೀಸ್(West Indies) ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ(Test Series) ಮೊದಲ ಪಂದ್ಯ ನಾಳೆ(ನವೆಂಬರ್ 30) ಆರಂಭವಾಗಲಿದ್ದು, ಐತಿಹಾಸಿ ಪರ್ತ್(Perth Stadium) ಮೈದಾನದಲ್ಲಿ ನಡೆಯುವ ಪಂದ್ಯಕ್ಕಾಗಿ ಎರಡು ತಂಡಗಳು ತಯಾರಿ ಮಾಡಿಕೊಂಡಿವೆ.
ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ T20 ವಿಶ್ವಕಪ್ ಪಂದ್ಯಾವಳಿಯ ಸೂಪರ್-12 ಹಂತಕ್ಕೆ ಪ್ರವೇಶ ಪಡೆಯುವ ಮೊದಲೇ ಟೂರ್ನಿಯಿಂದ ಹೊರಬಿದ್ದಿದ್ದ ವೆಸ್ಟ್ ಇಂಡೀಸ್, ಇದೀಗ ಟೆಸ್ಟ್ ಕ್ರಿಕೆಟ್ನಲ್ಲಿ ಯಶಸ್ಸು ಸಾಧಿಸುವ ಲೆಕ್ಕಾಚಾರದಲ್ಲಿದೆ. ತಂಡದಲ್ಲಿನ ಕೆಲವೊಂದು ಮಹತ್ವದ ಬದಲಾವಣೆಯೊಂದಿಗೆ ಹೊಸ ಕ್ಯಾಪ್ಟನ್ ಕ್ರೈಗ್ ಬ್ರಾಥ್ವೈಟ್ ಸಾರಥ್ಯದಲ್ಲಿ ಆಸೀಸ್ ಪ್ರವಾಸ ಕೈಗೊಂಡಿರುವ ವಿಂಡೀಸ್ ಹೊಸ ಆತ್ಮವಿಶ್ವಾಸದಲ್ಲಿದೆ. ಬಲಿಷ್ಠ ಆಸ್ಟ್ರೇಲಿಯಾ ತಂಡದ ಸವಾಲನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಕೆರೆಬಿಯನ್ನರು ಸಜ್ಜಾಗಿದ್ದಾರೆ.
ಮತ್ತೊಂದೆಡೆ ಪ್ಯಾಟ್ ಕಮಿನ್ಸ್ ನೇತೃತ್ವದಲ್ಲಿ ಆಸ್ಟ್ರೇಲಿಯಾ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದು, ಈಗಾಗಲೇ ಪ್ಲೇಯಿಂಗ್ ಇಲವೆನ್ ಸಹ ಪ್ರಕಟಿಸಲಾಗಿದೆ. ಡೇವಿಡ್ ವಾರ್ನರ್ ಮತ್ತು ಉಸ್ಮಾನ್ ಖವಾಜಾ ಅವರು ಅಗ್ರ ಕ್ರಮಾಂಕದಲ್ಲಿ ತಂಡಕ್ಕೆ ಸಕ್ಸಸ್ ತಂದುಕೊಡುವ ನಿರೀಕ್ಷೆಯಲ್ಲಿದ್ದಾರೆ. ಇವರೊಂದಿಗೆ ಅನುಭವಿ ಸ್ಟೀವ್ ಸ್ಮಿತ್, ಮಾರ್ನಸ್ ಲಬುಸ್ಚೆಗ್ನೆ, ಟ್ರಾವಿಸ್ ಹೆಡ್ ಸಹ ತಂಡದ ಬ್ಯಾಟಿಂಗ್ ಬಲ ಹೆಚ್ಚಿಸಿದ್ದಾರೆ.
ಈ ನಡುವೆ ಮೊದಲ ಟೆಸ್ಟ್ ಬಗ್ಗೆ ಮಾತನಾಡಿರುವ ವಿಂಡೀಸ್ ತಂಡದ ನಾಯಕ ಕ್ರೈಗ್ ಬ್ರಾಥ್ವೈಟ್, ʼನಾವು 100 ಓವರ್ಗಳು ಬ್ಯಾಟ್ ಮಾಡಲು ಬಯಸುತ್ತೇವೆ, ಇದು ನಮ್ಮ ಪ್ರಮುಖ ಫೋಕಸ್ ಆಗಿದೆ. ಆಸ್ಟ್ರೇಲಿಯಾದ ಬೌಲರ್ಗಳ ಎದುರು ನಾವು ಉತ್ತಮ ಬ್ಯಾಟಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದೇವೆ. ಅಲ್ಲದೇ ಟೆಸ್ಟ್ ಕ್ರಿಕೆಟ್ನಲ್ಲಿ ಬ್ಯಾಟಿಂಗ್ ಸಮಯವು ಯಾವಾಗಲೂ ಅದ್ಭುತವಾಗಿದೆ ಎಂದು ನಾನು ಭಾವಿಸುತ್ತೇನೆ. ಆಸೀಸ್ ಪಡೆ ಬಲಾಢ್ಯ ತಂಡ ಎಂದು ನಮಗೆ ತಿಳಿದಿದ್ದು, ನಾವು ಹತ್ತು ದಿನಗಳ ಕಠಿಣ ಕ್ರಿಕೆಟ್ ಅನ್ನು ಆಡಬೇಕು, ಅದು ನಮ್ಮ ಮುಖ್ಯ ಗಮನವಾಗಿದೆ ಎಂದಿದ್ದಾರೆ.
ಪ್ರಸ್ತುತ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾ ತಂಡ ಮೊದಲ ಸ್ಥಾನದಲ್ಲಿದೆ. ಆಡಿರುವ ಮೂರು ಟೆಸ್ಟ್ ಸರಣಿಗಳಲ್ಲಿ 6 ಪಂದ್ಯಗಳಲ್ಲಿ ಗೆಲುವು, 1 ಪಂದ್ಯಗಳಲ್ಲಿ ಸೋಲು ಹಾಗೂ 3 ಪಂದ್ಯದಲ್ಲಿ ಡ್ರಾ ಸಾಧಿಸಿರುವ ಆಸೀಸ್ 84 ಪಾಯಿಂಟ್ಸ್ ಹೊಂದಿದೆ. ಇನ್ನೂ ಆಡಿರುವ ನಾಲ್ಕು ಟೆಸ್ಟ್ ಸರಣಿಗಳಲ್ಲಿ 4 ಪಂದ್ಯಗಳಲ್ಲಿ ಗೆಲುವು, 3 ಪಂದ್ಯಗಳಲ್ಲಿ ಸೋಲು ಹಾಗೂ 2 ಪಂದ್ಯದಲ್ಲಿ ಡ್ರಾ ಫಲಿತಾಂಶ ಪಡೆದಿರುವ ವೆಸ್ಟ್ ಇಂಡೀಸ್, 6ನೇ ಸ್ಥಾನದಲ್ಲಿದೆ. ಹೀಗಾಗಿ ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ ಪಾಯಿಂಟ್ಸ್ ಟೇಬಲ್ನಲ್ಲಿ ಮುನ್ನಡೆ ಸಾಧಿಸಲು ಎರಡು ತಂಡಗಳಿಗೆ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ.
ಸಂಭಾವ್ಯ ಪ್ಲೇಯಿಂದ XI
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಮಾರ್ನಸ್ ಲಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮರೂನ್ ಗ್ರೀನ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್ವುಡ್, ನಾಥನ್ ಲಿಯಾನ್.
ವೆಸ್ಟ್ ಇಂಡೀಸ್: ಕ್ರೈಗ್ ಬ್ರಾಥ್ವೈಟ್, ಟಗೆನರೈನ್ ಚಂದ್ರಪಾಲ್, ಜರ್ಮೈನ್ ಬ್ಲಾಕ್ವುಡ್, ಎನ್ಕ್ರುಮಾ ಬೋನರ್, ಕೈಲ್ ಮೇಯರ್ಸ್, ರೋಸ್ಟನ್ ಚೇಸ್, ಜೇಸನ್ ಹೋಲ್ಡರ್, ಜೋಶುವಾ ಡಾ ಸಿಲ್ವಾ, ಅಲ್ಜಾರಿ ಜೋಸೆಫ್, ಜೇಡನ್ ಸೀಲ್ಸ್, ಕೆಮರ್ ರೋಚ್.