ಮುಗಿಯಿತು ಶತಕದ ಬರ.. ಶುರುವಾಯಿತು ವಿರಾಟ್ ಹವಾ
VO: ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಬರೋಬ್ಬರಿ ಮೂರು ವರ್ಷಗಳ ಬಳಿಕ ಶತಕ ಬಾರಿಸಿದ್ದಾರೆ. ಏಷ್ಯಾ ಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ವೀರಾವೇಶದ ಬ್ಯಾಟಿಂಗ್ ಮಾಡಿ, ದುಬೈ ಅಂಗಳದಲ್ಲಿ ರನ್ ಮಾರುತವನ್ನು ಸೃಷ್ಟಿಸಿದರು.
ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಪರಿಚಯಿಸಿದ ರನ್ ಸರದಾರ ವಿರಾಟ್, ಶತಕ ಸಿಡಿಸಿ ಮೆರೆದಾಡಿದರು. 61 ಎಸೆತಗಳನ್ನು ಎದುರಿಸಿದ ಕಿಂಗ್ ಕೊಹ್ಲಿ 12 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ ಅಜೇಯ 122 ರನ್ ಗಳಿಸಿದರು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಬಾರಿಸಿದ ಸಾಧನೆ ಮಾಡಿದರು.
ಈ ಶತಕ ವಿರಾಟ್ ಪಾಲಿಗೆ ಮತ್ತೊಂದು ಮರುಜನ್ಮ ನೀಡಿದೆ ಅಂದರೆ ಸುಳ್ಳಲ್ಲ. ವಿರಾಟ್ ಶತಕ ಸಿಡಿಸಿ ಬರೋಬ್ಬರಿ 1019 ದಿನಗಳೇ ಕಳೆದಿದ್ದವು. ಕಳೆದ ಮೂರು ವರ್ಷಗಳಿಂದ ಬ್ಯಾಟ್ ನಿಂದ ಒಂದೇ ಒಂದು ಶತಕ ಕೂಡ ಹೊರಹೊಮ್ಮಿದಿಲ್ಲ. 2019 ನವೆಂಬರ್ 23 ರಂದು ಬಾಂಗ್ಲಾದೇಶ ವಿರುದ್ಧ ಕೊನೆ ಶತಕ ದಾಖಲಿಸಿದ್ದರು. ಇದೀಗ 71ನೇ ಸೆಂಚುರಿ ಸಿಡಿಸಿ, ಗ್ರೇಟ್ ಕಮ್ ಬ್ಯಾಕ್ ಮಾಡಿದ್ದಾರೆ. ಅಲ್ಲದೇ, ಟಿ20 ಮಾದರಿಯಲ್ಲಿ ಚೊಚ್ಚಲ ಶತಕ ಬಾರಿಸಿ ಸಾಧನೆ ಮಾಡಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿರುವ ವಿರಾಟ್ ಕೊಹ್ಲಿ, ಮತ್ತೊಂದು ಚರಿತ್ರೆ ಸೃಷ್ಟಿಸಿದ್ದಾರೆ. ಟಿ೨೦ಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಬಾರಿಸಿದ ಸಾಧನೆಯನ್ನು ವಿರಾಟ್ ಮಾಡಿದ್ದಾರೆ. ಟಿ20ಯಲ್ಲಿ ವಿರಾಟ್ ಕೊಹ್ಲಿ 122* ರನ್ ಬಾರಿಸುವ ಮೂಲಕ ಅತಿ ಹೆಚ್ಚು ರನ್ ಬಾರಿಸಿದ ಕ್ರಿಕೆಟಿಗನಾಗಿದ್ದಾರೆ. ಇದಕ್ಕೂ ಮುನ್ನ ರೋಹಿತ್ ಶರ್ಮಾ 118 ರನ್, ಸೂರ್ಯಕುಮಾರ್ – 117 ರನ್ ಬಾರಿಸಿದ್ದರು.
ಈ ಶತಕದ ಮೂಲಕ ವಿರಾಟ್ ಒಟ್ಟು 71 ಶತಕಗಳನ್ನು ಪೂರೈಸಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 27, ಏಕದಿನದಲ್ಲಿ 43 ಹಾಗೂ ಟಿ20ಯಲ್ಲಿ ಒಂದು ಶತಕ ಬಾರಿಸಿದ್ದಾರೆ.
Virat Kohli, T-20I, century, Team India