PSL – virat kohli – ಪಾಕಿಸ್ತಾನದಲ್ಲಿ ವಿರಾಟ್ ಹವಾ.. ಪಿಎಸ್ ಎಲ್ ಟೂರ್ನಿಯ ವೇಳೆ ರಾರಾಜಿಸಿದ ಕೊಹ್ಲಿಯ ಪೋಸ್ಟರ್..!

ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿಗೆ ಬೇಲಿ ಇದೆ. ಭಾರತ ಮತ್ತು ಪಾಕ್ ನಡುವೆ ಯುದ್ಧ ನಡೆದಿದೆ. ಪ್ರತಿ ದಿನ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಒಂದಲ್ಲ ಒಂದು ಕಾರಣಕ್ಕೆ ಜಟಾಪಟಿ ನಡೆಯುತ್ತಲೇ ಇದೆ. ಇನ್ನು ರಾಜಕೀಯವಾಗಿ ವಾಕ್ಸಮರ ನಡೆಯುತ್ತಲೇ. ಹಾಗೇ ಭಾರತ ಮತ್ತು ಪಾಕಿಸ್ತಾನ ನಡುವೆ ಯಾವುದೇ ಕ್ರೀಡಾ ಸ್ಪರ್ಧೆಗಳು ನಡೆಯುತ್ತಿಲ್ಲ. ಆದ್ರೂ ಅಭಿಮಾನ, ಸ್ನೇಹ, ಬಾಂಧವ್ಯಕ್ಕೆ ಯಾವುದೇ ಅಡ್ಡಿಯಾಗುತ್ತಿಲ್ಲ.
ಹೌದು, ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವನ್ನು ನಾವು ಯುದ್ಧಕ್ಕೆ ಹೋಲಿಕೆ ಮಾಡುತ್ತೇವೆ. ದಾಯಾದಿಗಳ ಕದನ ಅಂತನೇ ಬಿಂಬಿಸುತ್ತೇವೆ. ಯಾಕಂದ್ರೆ ಇಲ್ಲಿ ಸೋಲಿನ ಮಾತೇ ಇಲ್ಲ. ಗೆಲ್ಲಬೇಕು ಅಷ್ಟೇ.. ಇದು ಉಭಯ ತಂಡಗಳ ಮತ್ತು ಉಭಯ ದೇಶಗಳ ಅಭಿಮಾನಿಗಳ ಮೂಲ ಮಂತ್ರವಾಗಿರುತ್ತದೆ.
ಅಂದ ಹಾಗೇ ನಾವು ಐಪಿಎಲ್ ನಲ್ಲಿ ಆಡಲು ಪಾಕಿಸ್ತಾನ ಕ್ರಿಕೆಟ್ ಆಟಗಾರರಿಗೆ ಅವಕಾಶ ನೀಡುತ್ತಿಲ್ಲ. ಆದ್ರೆ ಅಲ್ಲಿನ ಮಾಜಿ ಆಟಗಾರರು ಭಾರತಕ್ಕೆ ಬಂದು ಕ್ರೀಡಾ ವಿಶ್ಲೇಷಣೆ ಮಾಡುತ್ತಾರೆ. ಅದನ್ನು ಬಿಟ್ಟು ಪಾಕ್ ಕ್ರಿಕೆಟಿಗರ ಪೋಸ್ಟರ್ ಗಳು ಭಾರತದ ಕ್ರೀಡಾಂಗಣದಲ್ಲಿ ರಾರಾಜಿಸುವುದಿಲ್ಲ. ಒಂದು ವೇಳೆ ರಾರಾಜಿಸಿದ್ರೆ ಮತ್ತೆ ಹೇಳುವುದೇ ಬೇಡ.

ಅಷ್ಟಕ್ಕೂ ಇಷ್ಟೆಲ್ಲಾ ಪೀಠಿಕೆ ಯಾಕೆ ಅಂತಿರಾ ? ಇದಕ್ಕೆ ಒಂದು ಕಾರಣವೂ ಇದೆ. ಸದ್ಯ ಪಾಕಿಸ್ತಾನದಲ್ಲಿ ಪಾಕಿಸ್ತಾನ ಸೂಪರ್ ಲೀಗ್ ಟಿ-20 ಕ್ರಿಕೆಟ್ ಟೂರ್ನಿ ನಡೆಯುತ್ತಿದೆ. ಅದು ನಮ್ಮ ಐಪಿಎಲ್ ನ ಹಾಗೇ. ಆದ್ರೆ ಐಪಿಎಲ್ ಹಾಗೇ ದುಡ್ಡು ಖರ್ಚು ಆಗಲ್ಲ. ಅದ್ದೂರಿಯಾಗಿಯೂ ನಡೆಯಲ್ಲ. ಯಾಕಂದ್ರೆ ಪಿಸಿಬಿ ಬಿಸಿಸಿಐನಷ್ಟು ಶ್ರೀಮಂತ ಕ್ರಿಕೆಟ್ ಸಂಸ್ಥೆಯಲ್ಲ. Virat Kohli fan’s’ poster during PSL 2022 match
ಅದೇನೇ ಇರಲಿ, ಶುಕ್ರವಾರ ಪಾಕಿಸ್ತಾನದ ಗಡ್ಡಾಫಿ ಕ್ರೀಡಾಂಗಣದಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ಮತ್ತು ಮುಲ್ತಾನ್ ಸುಲ್ತಾನ್ಸ್ ನಡುವೆ ಪಂದ್ಯ ನಡೆಯುತ್ತಿತ್ತು. ಆಗ ಪಾಕ್ ಕ್ರಿಕೆಟ್ ಅಭಿಮಾನಿಯೊಬ್ಬನ ಕೈಯಲ್ಲಿ ವಿರಾಟ್ ಕೊಹ್ಲಿಯ ಪೋಸ್ಟರ್ ರಾರಾಜಿಸುತ್ತಿತ್ತು. ಅಲ್ಲದೆ ಪಾಕ್ ನೆಲದಲ್ಲಿ ವಿರಾಟ್ ಕೊಹ್ಲಿ ಶತಕ ದಾಖಲಿಸುವುದನ್ನು ನಾನು ನೋಡಬೇಕು. ಶಾಂತಿ ಅಂತ ಸಂದೇಶವನ್ನು ರವಾನಿಸಿದ್ದಾನೆ.
ಪಿಎಸ್ ಎಲ್ ಪಂದ್ಯದ ವೇಳೆ ವಿರಾಟ್ ಕೊಹ್ಲಿಯ ಪೋಸ್ಟರ್ ನೀಡಿದ್ದ ವಿರಾಟ್ ಕೊಹ್ಲಿಯ ಅಭಿಮಾನಿಗಳು ಸಾಮಾಜಿಕ ಜಾಲ ತಾಣದಲ್ಲಿ ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಈ ಮೂಲಕ ವಿರಾಟ್ ಕೊಹ್ಲಿಗೆ ಪಾಕ್ ನಲ್ಲೂ ಅಭಿಮಾನಿಗಳು ಇದ್ದಾರೆ ಎಂಬುದು ಸಾಬೀತಾಯ್ತು. ಹಾಗಂತ ಪಾಕ್ ಅಭಿಮಾನಿಗಳ ಅಭಿಮಾನವನ್ನು ಗಿಟ್ಟಿಸಿಕೊಂಡ ಮೊದಲ ಆಟಗಾರ ವಿರಾಟ್ ಕೊಹ್ಲಿಯಲ್ಲ. ಈ ಹಿಂದೆ ಸಚಿನ್, ಗವಾಸ್ಕರ್, ಕಪಿಲ್, ಸೆಹ್ವಾಗ್ ಸೇರಿದಂತೆ ಹಲವು ಆಟಗಾರರಿಗೆ ಪಾಕ್ ನಲ್ಲಿ ಅಭಿಮಾನ ಬಳಗವಿತ್ತು. ಅಷ್ಟೇ ಯಾಕೆ, ಮಹೇಂದ್ರ ಸಿಂಗ್ ಧೋನಿಯ ಬ್ಯಾಟಿಂಗ್ ವೈಖರಿ ಮತ್ತು ಹೇರ್ ಸ್ಟೈಲ್ ಗೆ ಪಾಕ್ ನ ಮಾಜಿ ಅಧ್ಯಕ್ಷ ಮುಷ್ರಫ್ ಕೂಡ ಫಿದಾ ಆಗಿದ್ದರು.