Virat Kohli 100 Tests- ಆಲ್ ದಿ ಬೆಸ್ಟ್ ವಿರಾಟ್ ಕೊಹ್ಲಿ.. ಕೊಹ್ಲಿ ಸಾಧನೆಗೆ ಮಾಜಿ ಕ್ರಿಕೆಟಿಗರ ಶುಭ ಹಾರೈಕೆ..!
ವಿರಾಟ್ ಸಾಧನೆಯನ್ನು ನೋಡಿದಾಗ ತುಂಬಾ ಖುಷಿಯಾಗುತ್ತದೆ. ಅಂಕಿ ಅಂಶಗಳು ಪಾತ್ರವಷ್ಟೇ. ಆದ್ರೆ ಈ ಪೀಳಿಗೆಗೆ ಸ್ಫೂರ್ತಿಯ ಚಿಲುಮೆಯಾಗಿದ್ದು ವಿರಾಟ್ ಸಾಧನೆ ಮತ್ತು ನಿಜವಾದ ಸಾಮಥ್ರ್ಯ – ಸಚಿನ್ ತೆಂಡುಲ್ಕರ್ – ಟೀಮ್ ಇಂಡಿಯಾದ ಮಾಜಿ ಆಟಗಾರ
ಮಿಸ್ ಮಾಡ್ಕೋಬೇಡಿ.. ನೂರನೇ ಟೆಸ್ಟ್ ಕ್ಲಬ್ ಗೆ ಸ್ವಾಗತ – ಬಿಸಿಸಿಐ
ಒಂದು ಟೆಸ್ಟ್ ಪಂದ್ಯವನ್ನು ಆಡುವುದು ಅದ್ಭುತವಾಗಿರುತ್ತದೆ. ನೂರು ಟೆಸ್ಟ್ ಪಂದ್ಯಗಳನ್ನು ಆಡುವುದು ಅದ್ಭುತವಾದ ಸಾಧನೆಯಾಗಿದೆ. ಇದು ವಿರಾಟ್ ಕೊಹ್ಲಿ ಹೆಮ್ಮೆ ಪಡುವಂತಹ ಸಾಧನೆಯಾಗಿದೆ – ರಾಹುಲ್ ದ್ರಾವಿಡ್ – ಟೀಮ್ ಇಂಡಿಯಾದ ಹೆಡ್ ಕೋಚ್
ಹಬ್ಬಗಳಲ್ಲಿ ಹೋಳಿ.. ಬ್ಯಾಟಿಂಗ್ ನಲ್ಲಿ ಕೊಹ್ಲಿ.. ಇಡೀ ಭಾರತವೇ ಇಷ್ಟಪಡುತ್ತದೆ – ವೀರೇಂದ್ರ ಸೆಹ್ವಾಗ್ – ಟೀಮ್ ಇಂಡಿಯಾದ ಮಾಜಿ ಆಟಗಾರ
ಸ್ಫೂರ್ತಿಯ ಚಿಲುಮೆ ವಿರಾಟ್ ಕೊಹ್ಲಿ. ಕಠಿಣ ಪರಿಶ್ರಮ ಮತ್ತು ಬದ್ಧತೆಯೇ ವಿರಾಟ್ ಕೊಹ್ಲಿಯವರ ಯಶಸ್ಸಿನ ಗುಟ್ಟು. ತಂಡದ ಜೊತೆಗಿನ ಹೊಂದಾಣಿಕೆ ಮತ್ತು ಸಂಯೋಜನೆ, ಪಂದ್ಯದ ಗತಿಯನ್ನು ಅರಿತುಕೊಳ್ಳುವ ಚಾಣಕ್ಯ ವಿರಾಟ್ ಕೊಹ್ಲಿ – ಡೇವ್ ವಾಟ್ಮೋರ್ – 2007-08ರ 19 ವಯೋಮಿತಿ ಭಾರತ ತಂಡದ ಕೋಚ್
ವಿರಾಟ್ ಕೊಹ್ಲಿಯವರ ವರ್ತನೆ, ಸ್ವಭಾವದ ಬಗ್ಗೆ ನಾನಾ ರೀತಿಯ ಕಮೆಂಟ್ ಗಳನ್ನು ಮಾಡುತ್ತಿದ್ದರು. ಆದ್ರೆ ಈಗ ಅದೇ ಜನ ವಿರಾಟ್ ಅವರನ್ನು ಆತ್ಮವಿಶ್ವಾಸಕ್ಕೆ ಸ್ಫೂರ್ತಿ ಅಂತ ಹೇಳುತ್ತಿದ್ದಾರೆ. ಆಕ್ರಮಣಕಾರಿ ಪ್ರವೃತ್ತಿಯೇ ವಿರಾಟ್ ಅವರ ಯಶಸ್ಸಿಗೆ ಕಾರಣ – ತನ್ಮಯ್ ಶ್ರೀವಾತ್ಸವ್ – ವಿರಾಟ್ ಕೊಹ್ಲಿಯವರ 19 ವಯೋಮಿತಿ ತಂಡದ ಒಡನಾಡಿ.
ಕಳೆದ 10-11 ವರ್ಷಗಳಿಂದ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಅಮೋಘ ಸಾಧನೆಯನ್ನು ಮಾಡಿದ್ದಾರೆ. ಬಿಸಿಸಿಐ ಅಧ್ಯಕ್ಷನಾಗಿ, ಟೀಮ್ ಇಂಡಿಯಾದ ಮಾಜಿ ನಾಯಕನಾಗಿ ನಾನು ವಿರಾಟ್ ಕೊಹ್ಲಿಗೆ ಶುಭ ಹಾರೈಸುತ್ತೇನೆ -ಸೌರವ್ ಗಂಗೂಲಿ – ಬಿಸಿಸಿಐ ಅಧ್ಯಕ್ಷ
Virat Kohli 100 Tests: Sachin Tendulkar, Sourav Ganguly best wishes to kohli
ನಾವು ವಿರಾಟ್ ಕೊಹ್ಲಿಗೆ ಧನ್ಯವಾದ ಹೇಳಬೇಕು. ಯಾಕಂದ್ರೆ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಅನ್ನು ತುಂಬಾನೇ ಪ್ರೀತಿಸುತ್ತಾರೆ. ಟೆಸ್ಟ್ ಕ್ರಿಕೆಟ್ ಇನ್ನೂ ಜೀವಂತವಾಗಿದೆ. ಅದು ವಿರಾಟ್ ಕೊಹ್ಲಿಯಿಂದ
ಶೇನ್ ವಾರ್ನ್ – ಮಾಜಿ ಆಸ್ಟ್ರೇಲಿಯಾ ಆಟಗಾರ
ವಿರಾಟ್ ಕೊಹ್ಲಿ ಎಲ್ಲರಿಗೂ ಸ್ಫೂರ್ತಿ. ಭಾರತ ಕ್ರಿಕೆಟ್ ತಂಡದ ಯಶಸ್ಸಿನಲ್ಲಿ ವಿರಾಟ್ ಕೊಹ್ಲಿಯ ಪಾತ್ರ ಅನನ್ಯವಾದದ್ದು. 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ದಾಖಲಿಸಿದ್ದ ಶತಕ ನನ್ನ ಫೇವರಿಟ್ ಶತPವಾಗಿದೆ – ರೋಹಿತ್ ಶರ್ಮಾ – ಟೀಮ್ ಇಂಡಿಯಾ ನಾಯಕ